Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

ಮಠ ವಾಸ್ತು

ಶ್ರೀ ಭಾರ್ಗವ ರಾಮನು ಸೃಷ್ಟಿಸಿದ ಗೋಮಾಂತಕದ ಉತ್ತರಭಾಗದಲ್ಲಿ ಒಂದು ದುರ್ಗಮ ಪರ್ವತ ಕಾನನದಿಂದ ಕೂಡಿದ ನಿರ್ಜನ ಪ್ರದೇಶ ಪರ್ತಗಾಳಿ. ಕ್ರಿ.ಶ. ೧೬೫೬ ರಲ್ಲಿ ಮಠಪರಂಪರೆಯ ೬ನೆ ಯತಿವರ್ಯ ಶ್ರೀ ರಾಮಚಂದ್ರ ತೀರ್ಥರು ದೈವಾಜ್ಞೆಯಂತೆ ಕಾಮಧೇನುವಿನ ಮಾರ್ಗದರ್ಶದಲ್ಲಿ ಗೋಕರ್ಣದ ಶಿಲಾಗರ್ಭದಲ್ಲಿ ಲಭ್ಯವಾದ ಶ್ರೀ ರಾಮ, ಸೀತಾ ಮತ್ತು ಲಕ್ಷ್ಮಣ ಶಿಲಾವಿಗ್ರಹವನ್ನು ಈ ಪ್ರದೇಶದಲ್ಲಿ ಪ್ರತಿಷ್ಠೆ ಮಾಡಿದರು. ನಂತರ ಇದು ಮಠದ ಕೇಂದ್ರಸ್ಥಾನವಾಯಿತು. ಅಲ್ಲಿಯ ತನಕ ಇದು ಯಾರೂ ಅರಿಯದ ನಿರ್ಜನ ದುರ್ಗಮ ಪ್ರದೇಶವಾಗಿತ್ತು. ಶ್ರೀ ರಾಮಚಂದ್ರನೆ ತನ್ನ ವಾಸ್ತವ್ಯಕ್ಕೆ ಆರಿಸಿದ ಪವಿತ್ರ ಸ್ಥಾನ. ವನವಾಸಕಾಲದಲ್ಲಿ ಪಂಚವಟಿಯ ಅರಣ್ಯಪ್ರದೇಶದಲ್ಲಿ ವಾಸ್ತವ್ಯ ಮಾಡಿದಂತೆ ಪರ್ತಗಾಳಿ ನದಿ ತೀರದ ತರು ಲತೆಗಳಿಂದ ಕೂಡಿದ ಪ್ರಶಾಂತ ಪ್ರದೇಶ.
ವಾಸ್ತು ಶಾಸ್ತ್ರದ ಪ್ರಕಾರ ದೇವ ಪ್ರತಿಷ್ಟೆಗೆ ಇದೊಂದು ಹೇಳಿ ಮಾಡಿಸಿದ ಪ್ರದೇಶ. ಒಂದು ಮಠ-ದೇವಸ್ಥಾನಕ್ಕೆ ಅಗತ್ಯ ಇರಲೇ ಬೇಕಾದ ಎಲ್ಲ ಲಕ್ಷಣಗಳಿಂದ ಕೂಡಿ ಪರಿಪೂರ್ಣವಾಗಿದೆ. ಇಂತಹ ವಾಸ್ತು ಲಕ್ಷಣಗಳಿಂದ ಈ ಮಠವು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದೆ. ಕ್ರಿ.ಶ. ೧೬೫೬ರಲ್ಲಿ ಶ್ರೀ ರಾಮಚಂದ್ರ ತೀರ್ಥರು ಗೋಕರ್ಣದಲ್ಲಿದ್ದ ಮಠವನ್ನು ಪರ್ತಗಾಳಿಗೆ ಸ್ಥಳಾಂರಿಸಿದ ನಂತರ ಪರಂಪರೆಯ ಯತಿವರ್ಯರ ಕಾಲಾವಧಿಯಲ್ಲಿ ಮಠವಾಸ್ತುವು ಆಯಾಕಾಲಕ್ಕೆ ಅನುಗುಣವಾಗಿ ವಿಸ್ಥಾರಿತವಾಯಿತು.

ಶ್ರೀ ಶಕೆ ೧೫೭೭ ಮನ್ಮಥ ಸಂವತ್ಸರ (ಕ್ರಿ.ಶ. ೧೬೫೬) ದಂದು ಶ್ರೀ ರಾಮಚಂದ್ರ ತೀರ್ಥರು ಪರ್ತಗಾಳಿಯ ಕುಶಾವತೀ ತೀರದಲ್ಲಿ ಶ್ರೀರಾಮ ಸೀತಾ ಮತ್ತು ಲಕ್ಷ್ಮಣ ಶಿಲಾವಿಗ್ರಹ ಸ್ಥಾಪಿವದರೊಂದಿಗೆ ಪರ್ತಗಾಳಿ ಮಠ ಸ್ಥಾಪಿಸಿದರು.
ಮಠದಲ್ಲಿ ಲಭವಿದ್ದ ದಾಖಲೆಗಳ ಪ್ರಕಾರ ಪರಂಪರೆಯ ೧೬ ನೇಯ ಯತಿವರ್ಯ ಶ್ರೀಲಕ್ಷ್ಮೀನಾಥ ತೀರ್ಥರು ಶ್ರೀ ಶಕೆ ೧೬೨೫ (ಕ್ರಿ.ಶ.೧೭೦೩) ಪ್ರಥಮವಾಗಿ ಪರ್ತಗಾಳಿ ಮಠ ಜೀರ್ಣೊದ್ಧಾರ ಮಾಡಿದ್ದಾರೆ.
ಗರ್ಭಗುಡಿಯ ಮುಂಭಾಗದ ಗೋಡೆಯಲ್ಲಿರುವ ಶಿಲಾಲೇಖದಲ್ಲಿ ಉಲ್ಲೇಖಿಸಿದಂತೆ ೧೭ನೇ ಯತಿವರ್ಯ ಶ್ರೀ ಆನಂದ ತೀರ್ಥರು ಮಠದ ಗರ್ಭಗುಡಿಯನ್ನು ಶ್ರೀ ಶಕೆ ೧೭೩೧ ಶುಕ್ಲ ಸಂವತ್ಸರ ವೈಷಾಖ ವದ್ಯ ಸಪ್ತಮಿಯಂದು (೦೬-೦೫-೧೮೦೯) ಜೀರ್ಣೋದ್ಧಾರ ಪ್ರಾರಂಭಿಸಿ, ಶ್ರೀ ಶಕೆ ೧೭೩೨ ಪ್ರಮೋದ ಸಂವತ್ಸರದ ಜ್ಯೇಷ್ಠ ಶುಕ್ಲ ಅಷ್ಟಮಿಯ (೧೦-೦೬-೧೮೧೦) ಮಧ್ಯಾಹ್ನ ಉತ್ತರಾ ನಕ್ಷತ್ರದ ಸಿಂಹ ಲಗ್ನದಲ್ಲಿ ತಂತ್ರಸಾರೋಕ್ತ ವಿಧಾನದಲ್ಲಿ ಶ್ರೀ ರಾಮ, ಸೀತಾ ಮತ್ತು ಲಕ್ಷ್ಮಣ ದೇವರ ಶಿಲಾಪ್ರತಿಮೆಗಳ ಪುನಃಪ್ರತಿಷ್ಠೆಮಾಡಿದರು. ರಾತ್ರಿ ರಥೊತ್ಸವ, ಮರುದಿನ ನವಮಿಯಂದು ಬ್ರಹ್ಮರಥೋತ್ಸವ ಮತ್ತು ದಶಮಿಯಂದು ಅವಭೃತದೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು.
ಶ್ರೀ ಆನಂದ ತೀರ್ಥರು ಶ್ರೀಶಕೆ ೧೭೩೩ ಪ್ರಜಾಪತಿ ಸಂವತ್ಸರ ಚೈತ್ರ ಶುಕ್ಲ-೫ಮಿಯಂದು (೨೯-೦೩-೧೮೧೧) ರಥಬೀದಿಯಲ್ಲಿ ಶ್ರೀ ಮುಖ್ಯಪ್ರಾಣ ದೇವರ ರಥಗೋಪುರ ನಿರ್ಮಾಣ ಮಾಡಿದರು.
ಶ್ರೀ ಪೂರ್ಣಪ್ರಜ್ಞ ತೀರ್ಥರು ಶ್ರೀಶಕೆ ೧೭೯೦ (ಕ್ರಿ.ಶ. ೧೮೬೮) ವಿಭವ ಸಂವತ್ಸರದಲ್ಲಿ ಶ್ರೀ ರಾಮದೇವರ ಗರ್ಭಗುಡಿಯ ಶಿಖರಕ್ಕೆ ತಾಮ್ರಪತ್ರ ಆಚಾದನೆ ಮಾಡಿಸಿದರು.
ಶ್ರೀ ಶಕೆ ೧೮೧೬ ಜಯ ಸಂವತ್ಸರ ಮಾಘ ಶುಕ್ಲ-೯ 04/02/1895 ಶ್ರೀ ಇಂದಿರಾಕಾಂತ ತೀರ್ಥರು (೨೦) ಮಠದ ಆವರಣದಲ್ಲಿದ್ದ ಜೀರ್ಣವಾದ ಧ್ವಜಸ್ಥಂಭವನ್ನು ವಿಸರ್ಜಿಸಿ ಧಾರ್ಮಿಕ ವಿಧಿವಿಧಾನಪೂರ್ವಕ ಮಠದ ಮಹಾದ್ವಾರದ ಹೊರಭಾಗದಲ್ಲಿ ನೂತನ ಧ್ವಜಸ್ಥಂಭದ ಪ್ರತಿಷ್ಠೆ ಮಾಡಿದರು.
ಶ್ರೀಶಕೆ ೧೮೮೭ ವಿಶ್ವಾವಸು ಸಂವತ್ಸರ ಮಾಘಪೂರ್ಣಿಮಾ (೦೫-೦೨-೧೯೬೬). ಶ್ರೀ ದ್ವಾರಕಾನಾಥ ತೀರ್ಥರಿಂದ ಪರ್ತಗಾಳಿಯಲ್ಲಿ ಶ್ರೀ ರಾಮ, ಸೀತಾ, ಲಕ್ಷ್ಮಣ ಪುನಃ ಪ್ರತಿಷ್ಠಾ (ಪು೪೫-ಪೇ೨೧) ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠಾ.
೧೮೯೯ ಪಿಂಗಳ ಸಂವತ್ಸರದ ಚೈತ್ರ ಶುಕ್ಲ ದ್ವಿತಿಯೆ (೨೧-೦೩-೧೯೭೭) ಯಂದು ಶ್ರೀ ವಿದ್ಯಾಧಿರಾಜ ತೀರ್ಥರು ಪರ್ತಗಾಳಿ ಮಠ ವಿಕಾಸಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.
ಶ್ರೀ ಶಕೆ ೧೯೦೬ ರಕ್ತಾಕ್ಷಿ ಸಂವತ್ಸರ ಚೈತ್ರ ಶುಕ್ಲ ದ್ವಿತೀಯೆ (೦೩-೦೪-೧೯೮೪) ಯಂದು ಪ್ರತಮ ಹಂತದ ಉದ್ಘಾಟನೆ ಮಾಡಿದರು. ಮಠದ ಪ್ರವೇಶ ಭಾಗದಲ್ಲಿ (ಪಶ್ಚಿಮ) ಮಹಾದ್ವಾರ, ಕಾರ್ಯಾಲಯ, ಪಾಠಶಾಲೆ ಕೊಠಡಿ, ಕೆಲವು ಇತರ ರೂಮ ಇತ್ಯಾದಿಯಾಗಿ ನೂತನ ವಾಸ್ತುವಿನ ಉದ್ಘಾಟನೆ.
ಶ್ರೀ ಶಕೆ ೧೯೦೭ ಕ್ರೊಧನ ಸಂವತ್ಸರ ಮಾಘ ಶುಕ್ಲ ತ್ರಯೋದಶಿಯಂದು (೨೨-೦೨-೧೯೮೬) ದ್ವಿತೀಯ ಹಂತದಲ್ಲಿ ಉತ್ತರ ದಿಕ್ಕಿನಲ್ಲಿ ಗುರುವರ್ಯರ ವಾಸ್ತವ್ಯಕ್ಕೆ ಗುರುಭವನ, ಗುರುಗಳ ಕಾರ್ಯಾಲಯ, ಮಠದ ಕಾಗದ ಪತ್ರಗಳ ಕೊಠಡಿ, ಪಾಠಶಾಲೆ ಶಿಕ್ಷಕರ ಕೊಠಡಿ, ವಿದ್ಯಾರ್ಥಿಗಳ ಬೋಜನಶಾಲೆ ಇತ್ಯಾದಿ ನೂತನ ವಾಸ್ತುವಿನ ಉದ್ಘಾಟನೆ.
ಯಜ್ಞಮಂಟಪ ಉದ್ಘಾಟನೆ 07/04/1989
ತೃತೀಯ ಹಂತದಲ್ಲಿ ಪೂರ್ವದಿಕ್ಕಿನ ಪಾಕಶಾಲೆ ಮತ್ತು ದಕ್ಷಿಣ ದಿಕ್ಕಿನಲ್ಲಿ ಮಠಕ್ಕೆ ಬರುವ ಬಕ್ತರಿಗಾಗಿ ೨೦ ಕೊಠಡಿ, ಭೊಜನ ಶಾಲೆ ಇತ್ಯಾದಿ. (19-03-1999)
ರಾಷ್ಟಿಯ ಹೆದ್ದಾರಿ ಬಳಿ, ರಥಬಿದಿಬಳಿ ನೂತನ ಮಹಾದ್ವಾರ ಉದ್ಘಾಟನೆ ಶ್ರೀಶಕೆ ೧೯೨೮ ವ್ಯಯ ಸಂವತ್ಸರ ಚೈತ್ರ ಶುಕ್ಲ ದ್ವಿತಿಯಾ ಪರ್ತಗಾಳಿ ಮಠ ಸ್ಥಾಪನಾ ೩೫೦ ವರ್ಷದ ನೆನಪಿಗೆ (೩೧-೦೩-೨೦೦೬)
ಕುಶಾವತಿ ನದಿಯ ಕಲ್ಲಿನ ಸ್ನಾನ ಘಟ್ಟ. (19-03-1999)
ನೂತನ ಏಕಶಿಲಾ ಧ್ವಜಸ್ಥಂಭ ಸ್ಥಾಪನೆ ಶ್ರೀ ಶಕೆ ೧೮೯೯ ಪಿಂಗಳ ಸಂವತ್ಸರ ಚೈತ್ರ ಶುಕ್ಲ-೨. (೨೧-೦೩-೧೯೭೭)
ಸ್ವರ್ಣ ಮಂಟಪ ಅರ್ಪಣೆ ಶ್ರೀ ಶಕೆ ೧೯೩೭ ಮನ್ಮಥ ಸಂವತ್ಸರ ಚೈತ್ರ ಶುಕ್ಲ-೯ (೨೨ -೦೩-೨೦೧೫)
ಕಂಪ್ಯೂಟರ ವ್ಯವಸ್ತೆ. ಶ್ರಿಶಕೆ ೧೯೩೯ ಹೇಮಲಂಬಿ ಸಂವತ್ಸರ ಮಾರ್ಗಶೀರ್ಷ ವದ್ಯ-೧೨ (೧೪/೧೨/೨೦೧೭)
ಮಠಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವದನ್ನು ಗಮನದಲ್ಲಿರಿಸಿ ಭಕ್ತಾದಿಗಳ ಅನುಕೂಲಕ್ಕಾಗಿ ಹೆಚ್ಚುವರಿ ೧೦ ಕೊಠಡಿ. ಸಭಾಭವನದ ನೂತನ ವಾಸ್ತುವಿಗಾಗಿ ಶ್ರೀಶಕೆ ೧೯೪೩ ಪ್ಲವ ಸಂವತ್ಸರ ಮಾರ್ಗಶೀರ್ಷ ಪಂಚಮಿ (೦೮-೧೨-೨೦೨೧) ಯಂದು ೨೪ನೇ ಗುರುವರ್ಯ ಶ್ರೀ ವಿದ್ಯಾಧೀಶ ತೀರ್ಥರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಶ್ರೀ ವಿದ್ಯಾಧೀಶ ತೀರ್ಥರು ಆಧುನಿಕಯುಗದ ಅಗತ್ಯತೆಗೆ ಅನುಸಾರವಾಗಿ ಉತ್ತರ ಮತ್ತು ದಕ್ಷಿಣ ದಿಕ್ಕಿನ ವಾಸ್ತವ್ಯದ ಕೊಠಡಿಗಳ ನೂತನೀಕರಣ ಮಾಡಿದರು. ಪ್ರಚಲಿತ ಸಮಾಜಕ್ಕೆ ಅನುಗುಣವಾಗಿ ಹವಾನಿಯಂತ್ರಿತ ವ್ಯವಸ್ಥೆ, ದಿನದ ೨೪ ಘಂಟೆ ಬಿಸಿನೀರು ಮತ್ತು ವಿದ್ಯುತ್, ನೂತನ ಪೀಠೊಪಕರಣ ಇತ್ಯಾದಿಯಾಗಿ ವಾಸ್ತುವಿನ ನೂತನಿಕರಣ.
ಶ್ರೀಶಕೆ ಶ್ರೀ ವಿದ್ಯಾಧೀಶ ತೀರ್ಥರು ನೂತನ ವಿದ್ಯಾಧಿರಾಜ ಸಭಾಭವನವನ್ನು ಉದ್ಘಾಟಿಸಿದರು.