Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

9 Laxminarayan Kannada

ಶ್ರೀಮದ್ ಲಕ್ಷ್ಮೀನಾರಾಯಣ ತೀರ್ಥ

ದೀಕ್ಷಾಗುರು : ಶ್ರೀ ರಘುಚಂದ್ರ ತೀರ್ಥ (೮)
ಶಿಷ್ಯಸ್ವೀಕಾರ : ಶ್ರೀ ಲಕ್ಷ್ಮೀಕಾಂತ ತೀರ್ಥ (೧೦)
ಮಹಾನಿರ್ವಾಣ : ಶ್ರೀ ಶಕೆ ೧೬೨೪ ಚಿತ್ರಭಾನು ಸಂವತ್ಸರ ಫಾಲ್ಗುಣ ವದ್ಯ ಸಪ್ತಮೀ ಶುಕ್ರವಾರ (೦೯-೦೩-೧೭೦೩)
ವೃಂದಾವನ ಸ್ಥಳ : ನಾಸಿಕ ಗೋದಾವರಿ ತೀರ (ಸಾಂಕೇತಿಕ ವೃಂದಾವನ)
ಮಹಾಕಾರ್ಯ : ವಾರಣಾಸಿ ಮಠದ ಮೊದಲ ವ್ಯಾಪಕ ಜೀರ್ಣೋದ್ಧಾರ

ಸ್ವಾಮೀಜಿಯ ಇತಿಹಾಸ

ಪ್ರಾಪ್ತಪತ್ರಾರ್ಜುನಚ್ಛತ್ರಶಂಖಚಾಮರದೀಪಿಕಮ್ ।
ಭೂಯೊಭೂಯೊ ಭಜೇ ಭಕ್ತ್ಯಾ ಲಕ್ಷ್ಮೀನಾರಾಯಣಂ ಗುರುಮ್ ॥
ಶ್ರೀಮದ್ ಲಕ್ಷ್ಮೀನಾರಾಯಣ ತೀರ್ಥರು ಪರಂಪರೆಯ ಒಂಬತ್ತನೆಯ ಗುರುವರ್ಯರು ಮತ್ತು ಶ್ರೀರಘುಚಂದ್ರತೀರ್ಥರ
ಶಿಷ್ಯರು. ಶ್ರೀಮದ್ ರಘುಚಂದ್ರತೀರ್ಥರು ಅಷ್ಟಮಠವನ್ನು ಸ್ಥಾಪಿಸುವ ಪ್ರಯತ್ನಮಾಡಿದ್ದರು. ಗುರುಪೀಠಾರೋಹಣದ
ನಂತರ ಅವರು ತಮ್ಮ ಮೂವರು ಶಿಷ್ಯರಲ್ಲಿ ಒಬ್ಬರಾದ ಶ್ರೀಮದ್ ಲಕ್ಷ್ಮೀನಾರಾಯಣ ತೀರ್ಥರನ್ನು ಪಟ್ಟಶಿಷ್ಯರಾಗಿ
ಸ್ವೀಕರಿಸಿದರು.
ಈ ಆಚಾರ್ಯರು ಮಠದ ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಮಠದ ಆದಾಯವನ್ನು ಹೆಚ್ಚಿಸಿದರು.
ಕೆಲವು ಭೂಮಿಯು ದಾನರೂಪದಲ್ಲಿ ಬಂದವು. ಮತ್ತು ಕೆಲವು ಭೂಮಿಯನ್ನು ಖರೀದಿಸಿದರು. ಜೀರ್ಣವಾದ
ಶಾಖಾಮಠಗಳನ್ನು ನವೀಕರಿಸಿದರು. ಶಿಷ್ಯರನ್ನು ಸ್ವೀಕರಿಸಿದ ನಂತರ ತೀರ್ಥಯಾತ್ರೆಯನ್ನು ಮಾಡಿಬಂದಿದ್ದರು ಎಂಬ
ಉಲ್ಲೇಖ ಸಿಗುತ್ತದೆ. ಅವರು ಧನುಷ್ಕೋಡಿ, ತಿರುಪತಿ ಮತ್ತು ಇತರ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ ನಂತರ ವೇಣುಪುರ
(ನಗರ)ಕ್ಕೆ ತಲುಪಿದರು. ಕೆಳದಿರಾಜ್ಯದ ರಾಣಿ ಚನ್ನಮ್ಮ ಅವರಿಗೆ ಗೌರವ ಸಲ್ಲಿಸಿ ಬ್ರಾಹ್ಮಣರ ಮೂಲಕ ಅವರ
ಪಾದ್ಯಪೂಜೆಯನ್ನು ಮಾಡಿಸಿ ಐದು ದಿನಗಳಕಾಲ ಅವರನ್ನು ತಮ್ಮ ರಾಜ್ಯದಲ್ಲಿ ವಾಸ್ತವ್ಯಮಾಡುವಂತೆ ನೋಡಿಕೊಂಡು
ಅವರಿಗೆ ಶ್ವೇತಛತ್ರ, ಚಾಮರ, ದೀಪಿಕಾ, ಧವಳಶಂಖ ಮತ್ತು ಶಿಭಿಕಾದಿಗಳನ್ನು ನೀಡಿ ಗೌರವಿಸಿದರು. ನಂತರ ಅವರು
ಬಸರೂರ, ಭಟಕಳ ಮಾರ್ಗವಾಗಿ ಗೋಕರ್ಣ ತಲುಪಿದರು.
ಆಚಾರ್ಯರು ಮತ್ತೊಮ್ಮೆ ಉತ್ತರದ ಕಾಶಿಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಹೋಗಿ ಭಾಗೀರಥಿಯಲ್ಲಿ ಸ್ನಾನ ಮಾಡಿ
ಬಿಂದುಮಾಧವನ ದರ್ಶನ ಪಡೆದು ಮರಳುವ ಹಾದಿಯಲ್ಲಿ ನಾಸೀಕ ಕ್ಷೇತ್ರದ ಗೋದಾವರಿ ತೀರಕ್ಕೆ ಬಂದರು ಅಲ್ಲಿಯ
ವಾಸ್ತವ್ಯದಲ್ಲಿ ಇದ್ದಾಗ ಶ್ರೀಶಕೆ ೧೬೨೪ ಚಿತ್ರಭಾನು ಸಂವತ್ಸರ ಪಾಲ್ಗುಣ ಕೃಷ್ಣ ಸಪ್ತಮಿಯ ದಿನ ಅವರು ಗೋದಾವರಿ
ತೀರದಲ್ಲಿ ಮೋಕ್ಷಾರೂಢರಾದರು.