Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

5 Anujeevottam Kannada

ಶ್ರೀ ಅಣುಜೀವೋತ್ತಮ ತೀರ್ಥರು

ದೀಕ್ಷಾಗುರು : ಶ್ರೀ ಪುರುಷೋತ್ತಮ ತೀರ್ಥ (೪)
ಶಿಷ್ಯಸ್ವೀಕಾರ : ಶ್ರೀ ರಾಮಚಂದ್ರ ತೀರ್ಥ (೬)
ಮಹಾನಿರ್ವಾಣ : ಶಕೆ ೧೫೫೯ ಈಶ್ವರ ಸಂವತ್ಸರ ಕಾರ್ತಿಕ ವದ್ಯ-೭ ಭಾನುವಾರ (೦೮-೧೧-೧೬೩೭)
ವೃಂದಾವನ ಸ್ಥಳ : ಶ್ರೀ ವ್ಯಾಸಾಶ್ರಮ ಡಿಚೋಲಿ ಗೋವಾ
ಗುರುಪೀಠಕಾಲಾವಧಿ : ಸುಮಾರು ೪೯ ವರ್ಷ
ಮಠ ಸ್ಥಾಪನೆ : ಶ್ರೀ ವ್ಯಾಸಾಶ್ರಮ ಡಿಚೋಲಿ ಗೋವಾ (೪ನೇ ಮಠ)

ಸ್ವಾಮೀಜಿಯ ಇತಿಹಾಸ

ಶಾಂತಿಮಂತಮಹಂ ವಂದೆ ದಾಂತಿಮಂತಂ ನಿರಂತರಮ್ |
ಕಾಮಿತಾರ್ಥಪ್ರದಾತಾರಮಣುಜೀವೋತ್ತಮಂ ಗುರುಮ್ ||
ಶ್ರೀ ಜೀವೋತ್ತಮ ತೀರ್ಥರ ನಂತರ ಅವರ ಶಿಷ್ಯರಾದ ಶ್ರೀ ಪುರುಷೋತ್ತಮತೀರ್ಥರ ಪಟ್ಟಾಭಿಷೇಕವು ಭಾದ್ರಪದ
ಮಾಸದಲ್ಲಿ ಆಯಿತು. ಅದೇ ಸಮಯದಲ್ಲಿ ಶ್ರೀ ಅಣುಜೀವೋತ್ತಮ ತೀರ್ಥರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ನಂತರ
ಮಾರ್ಗಶೀರ್ಷ ಮಾಸ ಶಕೆ ೧೫೧೦ರಲ್ಲಿ ಆಶ್ರಮವನ್ನು ನೀಡಿದ ಅದೇ ವರ್ಷದಲ್ಲಿ ಶ್ರೀ ಅಣುಜೀವೋತ್ತಮ ತೀರ್ಥರ ಪಟ್ಟಾಭಿಷೇಕ
ನೆರವೇರಿತು.

ಪೋರ್ಚುಗೀಸರ ಗಡಿಗೆ ಹೊಂದಿಕೊಂಡ ಗೋವಾದಲ್ಲಿ ತಮ್ಮ ಕಾಲಕೀರ್ದಿಯಲ್ಲಿ ಮಾಧ್ವ ಸಂಪ್ರದಾಯವನ್ನು
ಪ್ರಸಾರಮಾಡಿದರು ಮತ್ತು ಗೋಕರ್ಣದಿಂದ ದೂರದಲ್ಲಿರುವ ಡಿಚೋಲಿಯಲ್ಲಿ ಶಾಖಾ ಮಠವನ್ನು ನಿರ್ಮಿಸಿದರು.
ಗೋಮಾಂತಕದಲ್ಲಿ ಸ್ವಂತ ಶಿಷ್ಯರ ಅಭಾವದಲ್ಲಿ ಇದೊಂದು ಕಷ್ಟಕರವಾದ ಕಾರ್ಯವಾಗಿತ್ತು. ಈ ಅವಧಿಯಲ್ಲಿ ಮಾಧ್ವ
ಸಂಪ್ರದಾಯವು ಗೋವಾದ ಉಳಿದ ಭಾಗಗಳಲ್ಲಿ ಸಾಕಷ್ಟು ಪ್ರಸಾರವಾಯಿತು. ಸುಮಾರು ೫೦ ವರ್ಷಗಳ ಕಾಲ ಗೋಕರ್ಣ ಮಠದ
ಗುರುಪೀಠವನ್ನು ಅಲಂಕರಿಸಿದರು. ಗೋವಾದಲ್ಲಿ ಸಂಚಾರ ಮಾಡುವಾಗ ಅವರು ಡಿಚೋಲಿ ಮಠದಲ್ಲಿ ವಾಸಿಸುತ್ತಿದ್ದರು. ಶ್ರೀ
ರಾಮಚಂದ್ರ ತೀರ್ಥರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಡಿಚೋಲಿಯಲ್ಲಿ ಶಕೆ ೧೫೬೦ರ ಕಾರ್ತಿಕ ವದ್ಯ ಸಪ್ತಮಿಯಂದು
ಮೋಕ್ಷಾರೂಡರಾದರು. ಅವರ ವೃಂದಾವನ ಡಿಚೋಲಿ ವ್ಯಾಸಾಶ್ರಮ ಮಠದಲ್ಲಿದೆ.