Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

20 Indirakant Kannada

ಶ್ರೀ ಇಂದಿರಾಕಾಂತ ತೀರ್ಥರು

ಜನ್ಮನಾಮ : ರಾಮಕೃಷ್ಣ ನರಸಿಂಹ ಪುರಾಣಿಕ
ಜನ್ಮಸ್ಥಳ : ಭಟ್ಕಳ
ಜನ್ಮತಿಥಿ : ಶ್ರೀ ಶಕೆ ೧೭೯೩ ಪ್ರಜಾಪತಿ ಸಂವತ್ಸರ ಮಾಘ ಶುಕ್ಲ-೭ ಗುರುವಾರ (೧೫-೦೨-೧೮೭೨)
ಸಂನ್ಯಾಸ ದೀಕ್ಷೆ : ಶ್ರೀ ಶಕೆ ೧೮೦೮ ವ್ಯಯ ಸಂವತ್ಸರ ವೈಶಾಖ ಶುಕ್ಲ-೧೦ (೧೩-೦೫-೧೮೮೬)
ದೀಕ್ಷಾ ಸ್ಥಳ : ಪರ್ತಗಾಳಿ ಮಠ
ದೀಕ್ಷಾಗುರು : ಶ್ರೀ ಪದ್ಮನಾಭ ತೀರ್ಥ (೧೯)
ಗುರು ಪೀಠಾರೋಹಣ : ಶ್ರೀಶಕೆ ೧೮೧೪ ನಂದನ ಸಂವತ್ಸರ ಆಷಾಢ ಕೃಷ್ಣ-೩ ಮಂಗಳವಾರ (೧೨-೦೭-೧೮೯೨)
ಶಿಷ್ಯಸ್ವೀಕಾರ : ಶ್ರೀ ಕಮಲಾನಾಥ ತೀರ್ಥರು (೨೧)
ಮಹಾನಿರ್ವಾಣ : ಶ್ರೀ ಶಕೆ ೧೮೬೪ ಚಿತ್ರಭಾನು ಸಂವತ್ಸರ ಚೈತ್ರ ಕೃಷ್ಣ-೭ ಮಂಗಳವಾರ (೦೭-೦೪-೧೯೪೨)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಶಿಷ್ಯಕಾಲಾವಧಿ : ೦೬ ವರ್ಷ ೦೨ ತಿಂಗಳು
ಗುರುಪೀಠ ಕಾಲಾವಧಿ : ೪೯ ವರ್ಷ ೦೯ ತಿಂಗಳು ೦೬ ದಿನಗಳು
ಮಠಸೇವಾ ಕಾಲಾವಧಿ : ೫೫ ವರ್ಷ ೧೦ ತಿಂಗಳು ೨೬ ದಿನಗಳು
ಆಯುರ್ಮಾನ : ೭೦ ವರ್ಷ ೦೨ ತಿಂಗಳು ೨೪ ದಿನಗಳು
ಮಠ ಸ್ಥಾಪನೆ : ೧. ಶ್ರೀ ಬೇಟೆ ವೆಂಕಟ್ರಮಣ ದೇವಸ್ಥಾನ ಹೊನ್ನಾವರ (ಹಸ್ತಾಂತರ) (೨೯-೦೨-೧೯೨೨)

೨. ಶ್ರೀ ಮುರಳೀಧರ ಮಠ ಶಿಲಾವಿಗ್ರಹ (೩೦-೦೪-೧೯೨೩)

ಸ್ವಾಮೀಜಿಯ ಇತಿಹಾಸ

ವೇದವೇದಾಂತರ್ಕಾದಿಶಾಸ್ತ್ರಜ್ಞೋ ಈ ನಿರೋಧನ |
ತಂ ಶ್ರೀಮದಿರಾಕಾಂತತೀರ್ಥಂ ವಂದೇ ತಪೋನಿಧಿಮ್॥
ಶ್ರೀ ಪದ್ಮನಾಭತೀರ್ಥ ಗುರುವರ್ಯರ ನಿರ್ವಾಣದ ನಂತರ ಶ್ರೀ ಇಂದಿರಾಕಾಂತತೀರ್ಥರು ಪೀಠಾಧಿಪತಿಗಳಾದರು.
ಭಟ್ಕಳ ಊರಿನಲ್ಲಿ ಪುರಾಣಿಕ ಎಂಬ ಪಂಡಿತ ಮನೆತನವಿದ್ದು ಈ ಕುಟುಂಬದಲ್ಲಿ ಒಬ್ಬರಿಗಿಂತ ಒಬ್ಬರು
ವಿದ್ವಾಂಸರಾಗಿದ್ದರು. ನರಸಿಂಹ ಪುರಾಣಿಕ ಮತ್ತು ಅವರ ಪತ್ನಿ ಲಕ್ಷ್ಮಿ ಈ ದಂಪತಿಯ ಮಗನಾಗಿ ಈ ಮನೆತನದಲ್ಲಿ
ಹುಟ್ಟಿದವರೇ ಗೋಕರ್ಣಮಠ ಸಂಪ್ರದಾಯದ ಇಪ್ಪತ್ತನೇ ಗುರುವರ್ಯರಾದ ಶ್ರೀ ಇಂದಿರಾಕಾಂತ ತೀರ್ಥರು. ಚಿಕ್ಕ
ವಯಸ್ಸಿನಿಂದಲೂ, ಹುಡುಗನು ತನ್ನ ತೀಕ್ಷ್ಣವಾದ ಬುದ್ಧಿಶಕ್ತಿ, ನಿರ್ಣಯ ಮತ್ತು ಜಿಜ್ಞಾಸೆಗೆ ಹೆಸರುವಾಸಿಯಾಗಿದ್ದನು.
ಅವನ ಬುದ್ಧಿಶಕ್ತಿ ಎಷ್ಟು ಚುರುಕಾಗಿತ್ತೆಂದರೆ ಸಣ್ಣ ಪ್ರಾಯದಲ್ಲಿ ಅಕ್ಷರಗಳನ್ನು ಗುರುತಿಸುವ ಮೊದಲೇ ಅವನು ಅನೇಕ
ಶ್ಲೋಕಗಳು ಮತ್ತು ಸಂಸ್ಕೃತ ಸ್ತೋತ್ರಗಳನ್ನು ಕಂಠಪಾಠ ಮಾಡಿದ್ದನು. ಮನೆಯ ವಾತಾವರಣವೂ ವಿದ್ಯಾರ್ಜನೆಗೆ
ಪೂರಕವಾಗಿತ್ತು. ಹುಡುಗ ತೇಜಸ್ವಿ, ಕಾಂತಿವಂತ, ರಾಜಪಿಂಡದ ತೇಜಸ್ಸು. ವೃದ್ಧಾಪ್ಯದಲ್ಲಿಯೂ ಅವರ ದೇಹವು
ಸುಂದರವಾಗಿ ಕಾಂತಿಪೂರಿತವಾಗಿತ್ತು.
೧೫ನೇ ವಯಸ್ಸಿನಲ್ಲಿ ಇಂದಿರಾಕಾಂತ ತೀರ್ಥರಿಗೆ ಪರ್ತಗಾಳಿ ಮಠದಲ್ಲಿ ಸಂನ್ಯಾಸಾಶ್ರಮವನ್ನು ನೀಡಲಾಯಿತು.
ಅದಕ್ಕೂ ಮುನ್ನ ಸಂಪ್ರದಾಯದಂತೆ ಅಗತ್ಯ ಹಸ್ತಾಂತರ ನಡೆದಿದೆ. ಶ್ರೀ ಪದ್ಮನಾಭ ತೀರ್ಥಸ್ವಾಮಿಗಳು ಶಿಷ್ಯಸ್ವೀಕರಿಸಲು
ನಿರ್ಧರಿಸಿದರು ಮತ್ತು ಪೀಠದ ಅನುಯಾಯಿಗಳ ಸಭೆಯನ್ನು ಕರೆದರು. ಸಭೆಯಲ್ಲಿ ಭಟ್ಕಳದ ನರಸಿಂಹ ಪುರಾಣಿಕರ ಈ
ಚಿರಂಜೀವಿಯನ್ನು ಶಿಷ್ಯರನ್ನಾಗಿ ಸ್ವೀಕರಿಸಲು ಆಯ್ಕೆ ಮಾಡಲಾಯಿತು. ಅದರಂತೆ, ಮಠದ ಶಿಷ್ಟಮಂಡಳವು ಭಟ್ಕಳಕ್ಕೆ
ತೆರಳಿ ನರಸಿಂಹ ಪುರಾಣಿಕರಿಂದ ಮಗುವನ್ನು ನೀಡುವಂತೆ ವಿನಂತಿಸಿದರು. ಇದಕ್ಕೆ ಒಪ್ಪಿದ ದಂಪತಿಗಳು ವಟುವನ್ನು
ಶಿಷ್ಟಮಂಡಳಕ್ಕೆ ಒಪ್ಪಿಸಿದರು. ನಿಯೋಗವು ವಟುವಿನೊಂದಿಗೆ ಪರ್ತಗಾಳಿಗೆ ಬಂದಿತು. ಶಕೆ ೧೮೦೮ ವ್ಯಯ ಸಂವತ್ಸರ
ವೈಶಾಖ ಶುಕ್ಲ-೧೦ ರಂದು ಮಠಾನುಯಾಯಿಗಳ ಸಮ್ಮುಖದಲ್ಲಿ ಆಶ್ರಮದೀಕ್ಷೆಯನ್ನು ನೀಡಿ ಅವರನ್ನು ಶ್ರೀ
ಇಂದಿರಾಕಾಂತ ತೀರ್ಥ ಎಂದು ನಾಮಾಭಿದಾನ ಮಾಡಲಾಯಿತು.
ಆಶ್ರಮವನ್ನು ನೀಡಿದ ನಂತರ ಗುರುಗಳು ಶಿಷ್ಯರ ಅಧ್ಯಯನಕ್ಕೆ ಅವಶ್ಯಕ ವ್ಯವಸ್ಥೆ ಮಾಡಿದರು. ಈ ಕೆಲಸಕ್ಕೆ ಒಬ್ಬ
ವಿದ್ವಾಂಸ ಪಂಡಿತರನ್ನು ನೇಮಿಸಲಾಯಿತು. ಗುರುವರ್ಯರೂ ಸ್ವತಃ ಅವರಿಗೆ ಪಾಠಹೇಳಿಕೊಡುತ್ತಿದ್ದರು. ಅವರು ವೇದ,
ವೇದಾಂಗ, ಕಾವ್ಯ, ವ್ಯಾಕರಣ, ಸಾಹಿತ್ಯ, ನ್ಯಾಯ, ಮೀಮಾಂಸಾ ಇತ್ಯಾದಿಗಳನ್ನು ಅಧ್ಯಯನ ಮಾಡಿದರು. ಗೀತೆ ಮತ್ತು
ಬ್ರಹ್ಮಸೂತ್ರಗಳನ್ನು ಇಂದಿರಾಕಾಂತ ತೀರ್ಥರು ವಿಶೇಷವಾಗಿ ಅಧ್ಯಯನ ಮಾಡಿದರು ಮತ್ತು ಮುಖ್ಯವಾಗಿ ದ್ವೈತ, ಅದ್ವೈತ
ಮತ್ತು ವಿಶಿಷ್ಟಾದ್ವೈತ ತತ್ವಗಳ ತುಲನಾತ್ಮಕ ಅಧ್ಯಯನವನ್ನೂ ಮಾಡಿದರು. ಅವರ ತೀಕ್ಷ್ಣ ಬುದ್ಧಿಶಕ್ತಿ,

ಅಧ್ಯಯನದಲ್ಲಿನ ಉತ್ಸಾಹ, ವಿದ್ಯಾರ್ಜನೆಗೆ ಅಪಾರ ಸಮಯ ವಿನಿಯೋಗಿಸುವ ಅವರ ಪರಿಶ್ರಮದಿಂದಾಗಿ ಶ್ರೀ
ಇಂದಿರಾಕಾಂತ ತೀರ್ಥರು ಶೀಘ್ರದಲ್ಲೇ ಲೌಕಿಕದಲ್ಲಿ ಘನವಿದ್ವಾಂಸರೆಂಬ ಖ್ಯಾತಿಯನ್ನು ಪಡೆದರು.
ಶ್ರೀ ಇಂದಿರಾಕಾಂತ ತೀರ್ಥರ ಈ ಖ್ಯಾತಿಯನ್ನು ಸಾಧಿಸಲು ಅಧಿಕೃತ ಸಾಧನವೆಂದರೆ ಅದು ಪ್ರವಚನ. ಅವರು
ಘನವೆತ್ತ ಪುರಾಣಿಕ ಕುಟುಂಬದಲ್ಲಿ ಜನಿಸಿದ್ದರು ಮತ್ತು ಪುರಾಣ ಪ್ರವಚನಗಳನ್ನು ಮಾಡುವುದು ಆ ಕುಟುಂಬದ ಪುರುಷರ
ಜನ್ಮಜಾತ ಉದ್ಯೋಗವಾಗಿತ್ತು. ಸ್ವಾಮೀಜಿಯವರ ಜೀವನದಲ್ಲಿ ಮಠಾಧೀಶರಾಗುವ ಅವಕಾಶ ಬಾರದೇ ಇದ್ದಿದ್ದರೆ
ಅವರೂ ಈ ಮನೆತನದ ಸಂಪ್ರದಾಯವನ್ನು ಮುಂದುವರಿಸಿಕೊಂಡು ನಿಶ್ಚಯವಾಗಿ ಘನವಿದ್ವಾಂಸ ಪುರಾಣಿಕರೆಂದು ಖ್ಯಾತಿ
ಗಳಿಸುತ್ತಿದ್ದರು. ಪುರಾಣ ಪ್ರವಚನಕ್ಕೆ ಬೇಕಾದ ಜ್ಞಾನಕ್ಕಿಂತ ಹೆಚ್ಚಿನ ವಿದ್ಯಾರ್ಜನೆಯನ್ನು ಮಾಡಿದ್ದರು. ಆಧ್ಯಾತ್ಮಿಕತೆಯ
ಆಳವನ್ನು ಪರಿಶೋಧಿಸಿದ್ದರು, ವಿವಿಧ ತತ್ತ್ವಶಾಸ್ತ್ರಗಳ ಆಳವಾದ ಸಾಗರಕ್ಕೆ ಧುಮುಕುವ ಮೂಲಕ ಸಿದ್ಧಾಂತದ ಅನರ್ಘ್ಯ
ಮುತ್ತುಗಳನ್ನು ಸಂಗ್ರಹ ಮಾಡಿದ್ದರು. ಅವರು ಜ್ಞಾನ, ಯೋಗ ಮತ್ತು ಕರ್ಮದ ಹಾದಿಯಲ್ಲಿದ್ದರು. ವಿಶೇಷವೆಂದರೆ ಕೆಲವೇ
ವರ್ಷಗಳ ಅಲ್ಪಕಾಲದಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದರು. ಗುರುಸ್ವಾಮಿಯವರಿಗೆ ತರುಣ ಶಿಷ್ಯನ ಜ್ಞಾನದೀಪದ
ಬೆಳಕಿನ ಪರಿಚಯವಾಗಲು ಬಹಳ ಸಮಯ ಬೇಕಾಗಲಿಲ್ಲ. ಅವರಿಗೆ ತಮ್ಮ ಶಿಷ್ಯನ ಬಗ್ಗೆ ಅಭಿಮಾನವೆನಿಸುತ್ತಿತ್ತು. ಒಂದು
ಕಡೆ ಗುರುವರ್ಯರು ಶ್ರೀ ಇಂದಿರಾಕಾಂತ ತೀರ್ಥರ ಪೂರ್ವಾಶ್ರಮದ ಸೋದರಮಾವ ಮತ್ತು ಇನ್ನೊಂದು ಕಡೆ ಅವರ
ಗುರುಗಳು. ಗುರುಗಳು ಶಿಷ್ಯನನ್ನು ಪುರಾಣ ಪ್ರವಚನಗಳನ್ನು ನೀಡಲು ಮನವೊಲಿಸಿದರು. ಸಾಮಾನ್ಯ ಕೇಳುಗರು
ಮಾತ್ರವಲ್ಲದೆ ಜ್ಞಾನಿಗಳೂ ಅವರ ಜ್ಞಾನಗಂಗೆಯ ಪ್ರವಾಹದಲ್ಲಿ ಮುಳುಗಿಹೋಗುವಷ್ಟು ಅತ್ಯುತ್ತಮವಾಗಿತ್ತು. ಸ್ವತಃ
ಗುರುವರ್ಯರಿಗೆ ಇದು ಸಂತೋಷ ನೀಡಿತ್ತು. ನಂತರ ಶ್ರೀ ಇಂದಿರಾಕಾಂತ ತೀರ್ಥರು ಭಟ್ಕಳಕ್ಕೆ ಹೋದಾಗ ಅವರ ತಂದೆಯೇ
ಅವರ ಪುರಾಣ ಪ್ರವಚನದಲ್ಲಿ ಹಾಜರಿದ್ದು, ಸಂನ್ಯಾಶಾಶ್ರಮವನ್ನು ಪ್ರವೇಶಿಸಿದ ತಮ್ಮ ಚಿರಂಜೀವಿಯ
ವಾಕ್ಚಾತುರ್ಯವನ್ನು ಕೇಳಿ ಅವರ ಕಣ್ಣಲ್ಲಿ ಆನಂದಾಶ್ರು ತುಂಬಿತು. ಶ್ರೀ ಇಂದಿರಾಕಾಂತ ಸ್ವಾಮಿಗಳ ಪ್ರವಚನ ಪುರಾಣವು
ನಂತರ ಮಠಾನುಯಾಯಿಗಳಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೆ ಕೂಡ ಒಂದು ದೊಡ್ಡ ಆಕರ್ಷಣೆಯಾಯಿತು.
ದಿಗ್ವಿಜಯಕ್ಕೆ ಮಠದಿಂದ ಹೊರಟು, ಪ್ರತಿ ಮೊಕ್ಕಾಮಿನಲ್ಲೂ ಸಾಯಂಕಾಲ ಪ್ರವಚನ ಮಾಡುವುದನ್ನು ರೂಢಿ
ಮಾಡಿಕೊಂಡರು. ಈ ಪ್ರವಚನದ ಉದ್ದೇಶವು ಹೊಸ ಪೀಳಿಗೆಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಧಾರ್ಮಿಕ ಮೌಲ್ಯಗಳು
ಮತ್ತು ನಮ್ಮ ಪ್ರಾಚೀನ ಶಕ್ತಿಯುತ ಸಂಪ್ರದಾಯದ ಪಾಠಗಳನ್ನು ಕಲಿಸುವುದು. ಹೊಸ ಯುಗದ ಹೊಸ ಯುಗದ ಧರ್ಮ
ಏನು ಎಂದು ಅವರು ತಿಳಿದಿದ್ದರು. ತಮ್ಮ ಕಾಲದಲ್ಲಿ ತಮ್ಮ ಮತಾನುಯಾಯಿಗಳ ಸಹಪಂಕ್ತಿಭೋಜನ ನಿಷಿದ್ದ, ಬಹಿಷ್ಕಾರ
ಹಾಕುವುದು ಮುಂತಾದ ಅಸ್ತ್ರಗಳನ್ನು ತಮ್ಮ ಅಧಿಕಾರವ್ಯಾಪ್ತಿಯಲ್ಲಿ ಹಿಡಿದು ಸಾಮಾಜಿಕ ಸ್ಥಿರತೆಯನ್ನು
ಕಾಯ್ದುಕೊಳ್ಳಲು ಪ್ರಯತ್ನಿಸಿದರು.
ಆದರೆ ನಂತರ ಅವರು ಈ ಸುಧಾರಣೆಯ ಅಲೆ ದೊಡ್ಡದಾಗಿದೆ ಎಂದು ಅರಿತುಕೊಂಡರು. ಉಬ್ಬರವಿಳಿತವನ್ನು
ತಡೆಯುವ ಪ್ರಯತ್ನಗಳನ್ನು ಮಾಡಿದ್ದಾದರೆ ಇದು ವಿರುದ್ಧ ಪರಿಣಾಮವನ್ನು ಬೀರುತ್ತವೆ. ಪ್ರತಿಭಟಿಸುವವರಿಗೆ ಪ್ರತಿಗಾಮಿ
ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ ಮತ್ತು ಈ ಹೊಸ ಅಲೆಯನ್ನು ತಡೆದುಕೊಳ್ಳುವುದು ಧರ್ಮಪೀಠಕ್ಕೆ
ಕಷ್ಟವಾಗುವದಲ್ಲದೆ ಈ ಹೊಸ ಅಲೆಯನ್ನು ತಡೆಯುವ ಪ್ರಯತ್ನ ಮಾಡಿದಲ್ಲಿ ಧರ್ಮಪೀಠವೇ ಕೊಚ್ಚಿಕೊಂಡು ಹೊಗುವ
ಅಪಾಯವಿತ್ತು. ಇದನ್ನೆಲ್ಲ ತಿಳಿದುಕೊಳ್ಳುವ, ಭವಿಷ್ಯತ್ತನ್ನು ನೋಡುವ ಶಕ್ತಿ ಸ್ವಾಮೀಜಿಯವರಿಗಿತ್ತು. ಆದುದರಿಂದಲೇ
ಶ್ರೀ ಇಂದಿರಾಕಾಂತ ತೀರ್ಥರು ತಮ್ಮ ಜೀವಿತಾವಧಿಯ ಕೊನೆಯತನಕವೂ ಸುಧಾರಣಾವಾದದವರೊಂದಿಗೆ ರಾಜಿ
ಮಾಡಿಕೊಳ್ಳದೆ ಸಮಯದೊಂದಿಗೆ ಸನಾತನ ಧರ್ಮವನ್ನು ಮರುಮೌಲ್ಯಮಾಪನ ಮಾಡಿದರು ಮತ್ತು ತಮ್ಮ ಬೋಧನೆ
ಮತ್ತು ಪ್ರವಚನಗಳ ಮೂಲಕ ತಮ್ಮ ಸುದೀರ್ಘ ಚಿಂತನೆಯಿಂದ ಸೃಷ್ಟಿಸಿದ ನೂತನ ಆವಿಷ್ಕಾರದ ಮೂಲಕ ತಮ್ಮ
ಧರ್ಮಪೀಠದ ಸ್ಥಿರತೆಯನ್ನು ಕಾಯ್ದುಕೊಂಡರು.
ಶ್ರೀ ಶಕೆ ೧೮೧೪ ಆಷಾಢ ಶುಕ್ಲ-೭ಯಂದು ಗುರುವರ್ಯ ಶ್ರೀ ಪದ್ಮನಾಭತೀರ್ಥರು ವೃಂದಾವನಸ್ಥರಾದ ಹನ್ನೆರಡು
ದಿನಗಳ ನಂತರ ಅಂದರೆ ಆಷಾಢ ವದ್ಯ-೩ಯಂದು (ಜುಲೈ ೧೩, ೧೮೯೨) ಶ್ರೀಮದ್ ಇಂದಿರಾಕಾಂತ ತೀರ್ಥರ
ಪಟ್ಟಾಭಿಷೇಕವು ನೆರವೇರಿತು. ಅವರ ಕಾಲಕೀರ್ದಿಯು ೫೦ ವರ್ಷಗಳ ಸುದೀರ್ಘ ಕಾಲದವರೆಗೆ ವ್ಯಾಪಿಸಿತ್ತು. ಈ
ಕಾರ್ಯಕಾಲವು ಆನಂದದಿಂದಲ್ಲ, ಶಾಂತಿಯಿಂದಲ್ಲ, ಆದರೆ ಬಿರುಗಾಳಿಗಳಿಂದ ಕೂಡಿತ್ತು. ಹಿಂದಿನ ಯಾವ ಆಚಾರ್ಯರೂ
ಎದುರಿಸದ ದೊಡ್ಡ ಪ್ರಶ್ನೆಗಳು ಶ್ರೀ ಇಂದಿರಾಕಾಂತ ತೀರ್ಥರ ಮುಂದೆ ಉದ್ಭವಿಸಿದವು. ಈ ಪ್ರಶ್ನೆಗಳು ಹಲವು
ರೀತಿಯದ್ದಾಗಿದ್ದವು. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಇದು ಉದ್ಭವವಾಗಿತ್ತು. ಸ್ವಾಮಿಯವರು ತಮ್ಮ
ಸಮಾಜದಲ್ಲಿ ಸೃಷ್ಟಿಯಾದ ಧರ್ಮಮಾಲಿನ್ಯದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು. ಅದನ್ನು ಹೋಗಲಾಡಿಸಲು ಮತ್ತು
ಸಮಾಜದಲ್ಲಿ ಉಂಟಾಗಿದ್ದ ಕ್ಷೋಭೆಯಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಲು ಅವರು ಜನಸಂಪರ್ಕದಂತಹ
ಪರಿಣಾಮಕಾರಿ ಉಪಾಯಗಳನ್ನು ತಂದರು. ಸ್ವಾಮೀಜಿ ಹಿಂದಿನ ಆಚಾರ್ಯರಿಗಿಂತ ಹೆಚ್ಚು ಬಾರಿ ಜನಸಂಪರ್ಕ ನಡೆಸಿದರು.

ಒಟ್ಟು ಇಪ್ಪತ್ತೈದು ಬಾರಿ ದಿಗ್ವಿಜಯಕ್ಕಾಗಿ ಅಂದರೆ ಜನೋಪಯೋಗಿ ಕೆಲಸಗಳಿಗಾಗಿ ಮಠದಿಂದ ಹೊರಗೆ ಸಂಚರಿಸಿ
ಮಠಾನುಯಾಯಿಗಳ ಬಳಿ ಹೋಗಿದ್ದರು. ಅವರು ತಮ್ಮ ಸಮುದಾಯ ಎಲ್ಲಿದ್ದರೂ ಹೋಗುತ್ತಿದ್ದರು. ಅವರು
ಪೀಠಾರೋಹಣ ಮಾಡಿದ ವರ್ಷದಲ್ಲಿ ಅವರು ತಮ್ಮ ಮೊದಲ ದಿಗ್ವಿಜಯವನ್ನು ಮಾಡಿದರು ಮತ್ತು
ವೃಂದಾವನಸ್ಥರಾಗುವ ಪೂರ್ವದ ಆರು ತಿಂಗಳಿನಲ್ಲಿ ಕೊನೆಯ ಇಪ್ಪತ್ತೈದನೇ ದಿಗ್ವಿಜಯವನ್ನುಮಾಡಿದ್ದಾರೆ.
ಸ್ವಾಮೀಜಿಯವರು ಮಾಡಿದ ದಿಗ್ವಿಜಯವೆಂದರೆ ಧರ್ಮದ ಪುನರುಥ್ಥಾನದ ಅಖಂಡ ಯಾತ್ರೆಯಾಗಿತ್ತು. ಇದೊಂದು
ದರ್ಮಯಜ್ಞವಾಗಿತ್ತು. ಅವರು ಐವತ್ತು ವರ್ಷಗಳ ಕಾಲ ನಿರಂತರವಾಗಿ ಸಂಚಾರ ಮಾಡುತ್ತಿದ್ದರೆಂದಲ್ಲ, ಅವರು ಪರ್ತಗಾಳಿ
ಮಠದಲ್ಲಿದ್ದು ಸಮಯ ಸಿಕ್ಕಾಗಲೆಲ್ಲ ದಿಗ್ವಿಜಯಕ್ಕಾಗಿ ಹೋಗುತ್ತಿದ್ದರು. ಆದರೆ ಮಠದಲ್ಲಿದ್ದಾಗಲೂ ಅವರ
ಮಾರ್ಗದರ್ಶನ ಪಡೆಯಲು ಮತ್ತು ನೂತನ ಯುಗದ ಸುಧಾರಣೆಯ ಅಗತ್ಯವನ್ನು ಸ್ವಾಮೀಜಿಗೆ ಮನವರಿಕೆ ಮಾಡಲು ಕೆಲವು
ಯುವಕರು ಬರುತ್ತಿದ್ದರು. ಕೆಲವರು ಸ್ವಾಮಿಯ ನಿರ್ಣಯ ಪಡೆಯಲು ಹಳ್ಳಿಗಳಿಂದ ಬರುತ್ತಿದ್ದರು. ಸ್ವಾಮೀಜಿ
ಎಲ್ಲರೊಂದಿಗೆ ಸಮಾಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಚರ್ಚೆಮಾಡುತ್ತಿದ್ದರು,
ಹೊಸಮಾರ್ಗವನ್ನು ಕಂಡುಕೊಳ್ಳುತ್ತಿದ್ದರು, ಇದೊಂದು ವಾಕ್ಯಜ್ಞ ಅಲ್ಲದೆ ಧರ್ಮಯಜ್ಞವಾಗಿತ್ತು.
ಶ್ರೀ ಇಂದಿರಾಕಾಂತತೀರ್ಥ ಸ್ವಾಮಿಗಳು ನಡೆಸಿದ ಇಪ್ಪತ್ತೈದು ಸಂಚಾರಗಳನ್ನು ಎರಡು ವಿಧಗಳಾಗಿ
ವರ್ಗೀಕರಿಸಬಹುದು. ಮೇಲೆ ಹೇಳಿದಂತೆ ಸಮಾಜದಲ್ಲಿ ಬಂದಿರುವ ಧರ್ಮಮಾಲಿನ್ಯವನ್ನು ನಾಶಮಾಡಲು ಬಹುಪಾಲು
ಸಂಚಾರ ಮಾಡಿದರು. ಈ ಸಂಚಾರದಲ್ಲಿ ಅವರು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅನೇಕ ಉರುಗಳು, ಮಲಬಾರ
ಪ್ರಾಂತ್ಯದ ಕ್ಯಾಲಿಕಟ್, ಕಾಸರಗೋಡ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿದರು, ಗೋವಾದ ಪ್ರಮುಖ ಗ್ರಾಮಗಳು, ಘಟ್ಟಗಳ
ಮೇಲಿನ ಶಹಾಪುರ, ಬೆಳಗಾವಿ, ಹಳಿಯಾಳ, ಕೊಲ್ಲಾಪುರ, ರಾಜಾಪುರ, ರತ್ನಾಗಿರಿ ಮತ್ತು ಮುಂಬೈ, ಪುಣೆ ಮತ್ತು
ಮಹಾರಾಷ್ಟ್ರ, ಮಹಾರಾಷ್ಟ್ರದ ಹೊರಗೆ ಬಹುಸಂಖ್ಯೆಯಲ್ಲಿ ವಾಸಿಸಿರುವ ತಮ್ಮ ಸಮುದಾಯದ ಹಳ್ಳಿಗಳಿಗೆ ಅನೇಕ ಬಾರಿ
ಸಂಚರಿಸಿದರು. ಇದಲ್ಲದೆ, ಅವರು ಭಾರತದಾದ್ಯಂತ ಸಂಚರಿಸಿ ಪುಣ್ಯತಮ ಸ್ಥಳಗಳ ತೀರ್ಥಯಾತ್ರೆಗಳನ್ನು ಮಾಡಿದರು.
ತಿರುಪತಿ, ತಿರುಚಿನಾಪಲ್ಲಿ, ಮಧುರೈ, ವಿಷ್ಣುಕಂಚಿ ಶಿವಕಂಚಿ, ರಾಮೇಶ್ವರ, ಧನುಷ್ಕೋಡಿ, ಕನ್ಯಾಕುಮಾರಿ,
ತಿರುವನಂತಪುರ, ಗುರುವಾಯೂರು, ಉಡುಪಿ, ಗೋಕರ್ಣ. ಕೊಂಕಣದ ಪುಲೇಗಣಪತಿ, ಚಿಪ್ಲುಣಿನ ಪರಶುರಾಮ ಮತ್ತು
ಕೊಲ್ಹಾಪುರದ ಅಂಬಾಬಾಯಿ ಪಂಢರಪುರದಲ್ಲಿ ವಿಠ್ಠಲನ ದರ್ಶನ ಪಡೆದನಂತರ ಉತ್ತರ ಭಾರತಕ್ಕೆ ಹೋದರು. ಅವರು
ಮಥುರಾ, ವೃಂದಾವನ, ಹೃಷಿಕೇಶ, ಪ್ರಯಾಗ, ಕಾಶಿ, ಗಯಾ, ಅಯೋಧ್ಯೆ ಮತ್ತು ಇತರ ಯಾತ್ರಾ ಸ್ಥಳಗಳನ್ನು ಭೇಟಿ
ಮಾಡಿದರು, ಮಧ್ಯದಲ್ಲಿ ಕ್ಷಿಪ್ರಾ, ಪೂರ್ವದಲ್ಲಿ ಉಜ್ಜಯಿನಿ, ಗೋಮತಿ, ಜಗನ್ನಾಥ ಮತ್ತು ಪಶ್ಚಿಮದಲ್ಲಿ ಅಕೋಲಾ,
ಗಿರ್ನಾರ್, ಸೋಮನಾಥ, ದ್ವಾರಕಾ ಇತ್ಯಾದಿ ಅನೇಕ ಪುಣ್ಯತಮ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಸ್ವಾಮೀಜಿ ಹಿಮಾಲಯಕ್ಕೆ
ಹೋಗಲಾರದೆ ಇರಲಾದಿತೇ? ಬದರಿನಾರಾಯಣ, ಬಿಲ್ವಕೇದಾರ, ರುದ್ರಪ್ರಯಾಗ, ನಂದಪ್ರಯಾಗ ಮುಂತಾದ ಎಲ್ಲ
ಸ್ಥಳಗಳಿಗೂ ಭೇಟಿ ನೀಡಿದರು. ವಿಸ್ತಾರವಾದ ಗೋಕರ್ಣ ಪರ್ತಗಾಳಿ ಮಠದ ಇತಿಹಾಸದಲ್ಲಿ ಮಹಾನ ಯತಿವರ್ಯರೆಂದು
ಪರಿಗಣಿಸಲಾಗಿದೆ.
ಶಕೆ ೧೮೬೪ರ ರಾಮ ನವಮಿಯ ಉತ್ಸವವು ಪೂರ್ಣಗೊಂಡಿತು ನಂತರ ತರುಣ ಮಂಡಳಿಯ ನಾಟ್ಯೋತ್ಸವವು
ಪ್ರಾರಂಭವಾಯಿತು. ಸಭೆಯ ಕೋರಿಕೆಯಂತೆ ಗುರುಗಳು ಮತ್ತು ಶಿಷ್ಯ ಸ್ವಾಮಿಗಳು ನಾಟಕದಲ್ಲಿ ಸ್ವಲ್ಪ ಹೊತ್ತು
ಕುಳಿತುಕೊಳ್ಳುತ್ತಿದ್ದರು. ಸ್ವಾಮೀಜಿ ಆಸನದ ಮೇಲೆ ಕುಳಿತುತ್ತಿದ್ದು ಸ್ವಲ್ಪ ಸಮಯದ ನಂತರ ಮೈಯಲ್ಲಿ ಅಸ್ವಸ್ಥತೆಯ
ಮೈಯುರಿಯ ಅನುಭವವಾಗತೊಡಗಿತು. ತಕ್ಷಣ ತಮ್ಮ ಶಯನಕಕ್ಷೆಗೆ ತೆರಳಿ ವಿಶ್ರಾಂತಿ ಪಡೆದರು.
ಮರುದಿನ ಸ್ನಾನ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮಧ್ಯಾಹ್ನ ಭಿಕ್ಷೆಯನಂತರ ರಕ್ತಸಿಕ್ತ
ವಾಂತಿಯಾಯಿತು. ಗುರುವರ್ಯರ ಅನಾರೋಗ್ಯದ ಸುದ್ದಿ ಎಲ್ಲೆಡೆ ಪಸರಿಸಿತು. ದೂರದ ಊರುಗಳಿಂದ
ಮಠಾನುಯಾಯಿಗಳು ಬರತೊಡಗಿದರು.
ಶ್ರೀಶಕೆ ೧೮೬೪ರ ಚೈತ್ರ ವದ್ಯ-೭ ಬೆಳಿಗ್ಗೆ ಸ್ವಲ್ಪ ಆರಾಮವೆನಿಸಿತ್ತು. ಆದರೆ ಅದು ದೀಪ ಆರುವ ಮೊದಲು
ದೊಡ್ಡದಾಗಿ ಉರಿಯುವಂತಿತ್ತು. ಸಾಯಂಕಾಲ ಪ್ರಕೃತಿ ಹಠಾತ್ತನೆ ಹದಗೆಟ್ಟಿತು. ರಾತ್ರಿ ೧೨ಗಂಟೆಗೆ ಶ್ರೀರಾಮದೇವರ
ಮುಂದಿನ ಕಂಬದಬಳಿ ಅವರನ್ನು ಕುಳ್ಳಿರಿಸಲಾಯಿತು. ವೇದಘೋಷ ಮತ್ತು ಗೀತಾ ಪಾರಾಯಣ ಪ್ರಾರಂಭವಾಯಿತು.
ಅವರು ನಿತ್ಯ ಪೂಜಿಸುವ ಸರ್ವಶಕ್ತ ರಾಮದೇವರು ಮತ್ತು ಅವರು ಪ್ರೀತಿಸಿದ ವಿಶಾಲವಾದ ಸ್ವಸಮಾಜದೊಂದಿಗೆ
ಆಚಾರ್ಯರು ಈ ಭೂಮಿಯ ಸಂಪರ್ಕವನ್ನು ತೊರೆದು ವೈಕುಂಠಕ್ಕೆ ಪಯಣಿಸಿದರು. ಅವರ ವೃಂದಾವನ ಪರ್ತಗಾಳಿ
ಮಠದಲ್ಲಿದೆ.