Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

4 Basrur Math Kannada

ಶ್ರೀ ಜೀವೋತ್ತಮ ಮಠ ಬಸ್ರುರ

ಸಂಸ್ಥಾಪಕರು : ಶ್ರೀ ಜೀವೋತ್ತಮ ತೀರ್ಥ (೩) (ಶ್ರೀ ಜೀವೋತ್ತಮ ತೀರ್ಥ ಸ್ವಾಮೀಜಿಯವರ ಜನ್ಮಸ್ಥಳ)
ಸ್ಥಾಪನಾ ವರ್ಷ : ಶಕ ೧೪೭೨ ಸಾಧಾರಣ ಸಂವತ್ಸರ (ಕ್ರಿ.ಶ. ೧೫೫೦),
ದೇವಪ್ರತಿಮಾ : ಶ್ರೀ ದಿಗ್ವಿಜಯ ವಿಟ್ಠಲ (ಪಂಚಲೋಹ ಪ್ರತಿಮಾ) ಶ್ರೀ ಜೀವೋತ್ತಮ ತೀರ್ಥರಿಗೆ ಗಂಡಕಿ ಯಾತ್ರೆಯಲ್ಲಿ
ಪ್ರಾಪ್ತವಾಗಿತ್ತು.
ಪುನಃ ಪ್ರತಿಷ್ಠಾ : ಶ್ರೀ ದ್ವಾರಕಾನಾಥ ತೀರ್ಥ (೨೨) ಶಕ ೧೮೯೪ ಪರಿಧಾವಿ ಸಂವತ್ಸರ ವೈಶಾಖ ವದ್ಯ ಪಂಚಮಿ (೦೨-೦೬-೧೯೭೨)
ವಿಳಾಸ : ಶ್ರೀ ಗೋಕರ್ಣ ಮಠ, ಬಸ್ ಸ್ಟ್ಯಾಂಡ ಹತ್ತಿರ, ಬಸ್ರುರ, ಜಿಲ್ಲೆ ಉಡುಪಿ ೫೭೬ ೨೧೧
ಒಟ್ಟು ಭೂಪ್ರದೇಶ : ೯೨೦ ಚದರ ಮೀಟರ (೧.೬೬ ಎಕರೆ)
ಕಟ್ಟಡದ ವಿವರಗಳು : ಗರ್ಭಗ್ರಹ, ಸಂಧ್ಯಾಮಂಟಪ, ಅಗ್ರಶಾಲಾ, ಅರ್ಚಕ ನಿವಾಸ, ಗುರು ಭವನ, ಪಾರ್ಕಿಂಗಿಗೆ ಮುಕ್ತ ಸ್ಥಳ.
ಸಭಾಭವನ : ಶ್ರೀ ಜೀವೋತ್ತಮ ಸಭಾಗ್ರಹ, ೦೪-೦೩-೨೦೦೨ ರಂದು ಶ್ರೀ ವಿದ್ಯಾಧಿರಾಜ ತೀರ್ಥರಿಂದ ಉದ್ಘಾಟನೆ
ಪಂಚಪರ್ವ ಉತ್ಸವ : ವನಭೋಜನ - ಕಾರ್ತಿಕ ಶುಕ್ಲ ಚತುರ್ದಶಿ, ಪ್ರತಿಷ್ಠಾ ವರ್ಧಂತಿ

ಗಣಿತದ ಇತಿಹಾಸ


ಮಠ ಪರಂಪರೆಯ ಮೂರನೇ ಯತಿವರ್ಯ ಶ್ರೀ ಜೀವೊತ್ತಮ ತೀರ್ಥರು ಆಸೇತು ಹಿಮಾಚಲ ತೀರ್ಥಯಾತ್ರೆಮಾಡಿ ತಮ್ಮ ಅನುಭವಗಳನ್ನು ತೀರ್ಥಾವಳ ಎಂಬ ಪುಸ್ತಕದಲ್ಲಿ ಕಾವ್ಯರೂಪದಲ್ಲಿ ಬರೆದಿಟ್ಟಿದ್ದಾರೆ. ಯಾತ್ರಾ ಕಾಲದಲ್ಲಿ ಶಿಲಾ(ಗಂಡಕೀ)ನದಿಯಲ್ಲಿ ಅವರಿಗೆ ಮೂರು ವಿಟ್ಠಲನ ಪ್ರತಿಮೆಗಳು ದೊರಕಿದವು. ಅವುಗಳಲ್ಲಿ ಒಂದನ್ನು ಕೋಟಿತೀರ್ಥದ ಬಳಿ ಇರುವ ಮಠದಲ್ಲಿ ನಿವೇಶನ ಮರಳಿಪಡೆದ ನೆನಪಿಗೆ ಸ್ಥಾಪಿಸಿ ಭೂವಿಜಯ ವಿಟ್ಠಲನೆಂದು ನಾಮಕರಣಮಾಡಿದರು. ಎರಡನೇಯದನ್ನು ತಮ್ಮ ಜನ್ಮಸ್ಥಳವಾದ ಬಸ್ರೂರನಲ್ಲಿ ಶಕ ೧೪೭೨ ನೇ ಸಾಧಾರಣ ಸಂ.(ಕ್ರಿಶ ೧೫೫೦)ರಲ್ಲಿ ಸ್ಥಾಪಿಸಿ ತಮ್ಮ ಯಾತ್ರೆಯ ಸವಿನೆನಪಿಗಾಗಿ ದಿಗ್ವ್ವಿಜಯ ವಿಟ್ಠಲನೆಂದು ನಾಮಕರಣಮಾಡಿದರು. ವೈಷ್ಣವ ಪರಂಪರೆಯ ೨೭ ಮಠಗಳ ಸುಮಾರು ೬೨೭+ ಯತಿವರ್ಯರಲ್ಲಿ ಜೀವೋತ್ತಮರೆಂಬ ಹೆಸರು ಕೇವಲ ಇವರಿಗೆ ಮಾತ್ರ ಇದೆ.

• ಮಠಪರಂಪರೆಯ ೧೬ನೇ ಯತಿವರ್ಯ ಶ್ರೀ ಲಕ್ಷ್ಮೀನಾಥ ತೀರ್ಥರು ಮಠದಲ್ಲಿ ಚಾತುರ್ಮಾಸ ಮತ್ತು ಜೀರ್ಣೊದ್ಧಾರ ಮಾಡಿದರು.
• ಮಠ ಪರಂಪರೆಯ ೧೭ನೇ ಯತಿವರ್ಯ ಶ್ರೀ ಆನಂದ ತೀರ್ಥ ಮತ್ತು ಶಿಷ್ಯ ಶ್ರೀ ಪೂರ್ಣಪ್ರಜ್ಞತೀರ್ಥರು, ಕಾಶಿ ಮಠಾಧೀಶ ಸುಮತೀಂದ್ರ
ಸ್ವಾಮೀಜಿಯವರೊಂದಿಗೆ ನಾಗರಮಠಕ್ಕೆ ಪ್ರಯಾಣ ಬೆಳಸಿದರು.
• ಮಠಪರಂಪರೆಯ ೨೦ನೇ ಯತಿವರ್ಯ ಶ್ರೀ ಇಂದಿರಾಕಾಂತ ತೀರ್ಥರು ಮಠದ ಜೀರ್ಣೊದ್ಧಾರ ಮಾಡಿದರು.
• ಕಾಶಿಮಠಾಧೀಶ ಶ್ರೀ ಸುಕ್ರತೀಂದ್ರ ತೀರ್ಥರು ಶಕೆ ೧೮೫೯ ಮಾಘ ಶುಕ್ಲಪಾಡ್ಯ (೦೧/೦೨/೧೯೩೮) ರಂದು ಗೋಕರ್ಣ ಮಠದ
೨೦ನೇ ಯತಿವರ್ಯ ಶ್ರೀ ಇಂದಿರಾಕಾಂತ ತೀರ್ಥ ಮತ್ತು ಅವರ ಶಿಷ್ಯ ಶ್ರೀ ಕಮಲಾನಾಥ ತೀರ್ಥರನ್ನು ಭೇಟಿಮಾಡಿದರು.
• ದೇವಾಲಯದ ಗರ್ಭಗುಡಿ ಜೀರ್ಣೋದ್ಧಾರ ಮಾಡುವ ನಿಮಿತ್ತ ತಮ್ಮ ಶಿಷ್ಯ ಶ್ರೀವಿದ್ಯಾಧಿರಾಜ ತೀರ್ಥರಿಂದ ಶ್ರೀ ದಿಗ್ವಿಜಯ ವಿಠ್ಠಲ
ದೇವರನ್ನು ಬಾಲಾಲಯದಲ್ಲಿ ಸ್ಥಾಪಿಸಿ ಗುರುಸ್ವಾಮಿ ಶ್ರೀ ದ್ವಾರಕಾನಾಥ ತೀರ್ಥ ಇವರ ಅಮೃತಹಸ್ತದಿಂದ ಶಕೆ ೧೮೯೪ ಪರಿಧಾವಿ
ಸಂವತ್ಸರ . ನಿಜ ವೈಶಾಖ ಬಹುಳ ಪಂಚಮಿ (೦೨-೦೬-೧೯೭೨)ಯಂದು ನೂತನ ಗರ್ಭಗುಡಿಯಲ್ಲಿ ಪುನಃಪ್ರತಿಷ್ಠೆ ಮಾಡಲಾಯಿತು.
• ಶ್ರಿಮದ್ ವಿದ್ಯಾಧಿರಾಜ ತೀರ್ಥರು ಮುಂಭಾಗ ಮತ್ತು ಎಡಬದಿಯ ಅಗ್ರಶಾಲೆಯನ್ನು ೧೯೯೮ರಲ್ಲಿ ಜೀರ್ಣೋಧ್ಧಾರ ಮಾಡಿದರು
• ಶ್ರಿಮದ್ ವಿದ್ಯಾಧಿರಾಜ ತೀರ್ಥರು ೧೪-೧೨-೨೦೦೦ ರಂದು ಶ್ರೀ ಜೀವೋತ್ತಮ ಸಭಾಗ್ರಹಕ್ಕೆ ಶಿಲಾನ್ಯಾಸ ಮಾಡಿ ೪-೩-೨೦೦೨ ರಲ್ಲಿ
ಉಧ್ಘಾಟನೆ ನೇರವೇರಿಸಿದರು.