Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

6 Ankola Math Kannada

ಶ್ರೀ ವೀರ ವಿಟ್ಠಲ ಮಠ ಅಂಕೋಲಾ

ಸ್ಥಾಪಕರು : ಶ್ರೀ ದಿಗ್ವಿಜಯರಾಮಚಂದ್ರತೀರ್ಥ (೭)
ಸ್ಥಾಪನ ವರ್ಷ : ಶಕ ೧೫೭೧ ವಿರೋಧಿ (ಕ್ರಿ.ಶ. ೧೬೪೯)
ದೇವ ಪ್ರತಿಮಾ : ಶ್ರೀ ವೀರ ವಿಟ್ಠಲ (ಪಂಚಲೋಹ ವಿಗ್ರಹ)
ಪುನಃ ಪ್ರತಿಷ್ಠಾ : ಶ್ರೀ ವಿದ್ಯಾಧಿರಾಜ ತೀರ್ಥ ಶಕ 1909 ಫಾಲ್ಗುಣ ಶುಕ್ಲ ತೃಯೋದಶಿ (೨೯-೦೨-೧೯೮೮)
: (ಗರ್ಭಗ್ರಹ ನವೀಕರಣ, ಶಿಖರ ಕಲಶ ಪ್ರತಿಷ್ಠಾ, ಬೃಂದಾವನ ನವೀಕರಣ)
ವಿಳಾಸ : ಶ್ರೀ ವೀರವಿಟ್ಠಲ ಮಠ, ಮಠಾಕೇರಿ, ಅಂಕೋಲಾ, 581 314
ಭೂ ಪ್ರದೇಶ : ೧೦,೦೦೦ ಚ.ಮೀ
ವೃಂದಾವನ : ಶ್ರೀ ದಿಗ್ವಿಜಯ ರಾಮಚಂದ್ರತೀರ್ಥ-7 (೨೪-೦೨-೧೬೬೯)
: ಶ್ರೀ ರಮಾಕಾಂತ ತೀರ್ಥ-೧೧ (೨೯-೧೧-೧೭೫೦)
: ಶ್ರೀ ಭೂವಿಜಯ ರಾಮಚಂದ್ರತೀರ್ಥ-೧೪ (೨೩-೧೧-೧೮೦೩)
ಕಟ್ಟಡದ ವಿವರಗಳು : ಗರ್ಭಗ್ರಹ, ಅರ್ಚಕ ನಿವಾಸ, ಗುರುಭವನ, ದ್ವಾರಕಾನಾಥ ಸಭಾಗ್ರಹ, ಭೋಜನಶಾಲೆ, ಪಾಕಶಾಲೆ,
ಸಭಾಭವನ : ಶ್ರೀ ದ್ವಾರಕಾನಾಥ ಸಭಾಗೃಹ
ಪಂಚಪರ್ವ ಉತ್ಸವ : ವರ್ಧಂತಿ ಉತ್ಸವ, ವನಭೋಜನ

ಗಣಿತದ ಇತಿಹಾಸ

ಕೆಲವು ಪ್ರಮುಖ ಘಟನೆಗಳು
• ಶಕ ೧೮೭೯ ಹೇವಿಲಂಬಿ ಸಂವತ್ಸರ ವೈಶಾಖ ಶುಕ್ಲ ದ್ವಿತೀಯ (೦೧/೦೫/೧೯೫೭)ರಂದು ಗರ್ಭಗ್ರಹದ ಜೀರ್ಣೋದ್ಧಾರ ಶ್ರೀ ದ್ವಾರಕಾನಾಥ ತೀರ್ಥರ ಹಸ್ತದಿಂದ ನೆರವೇರಿತು.
• ಶಕ ೧೮೯೦ ಕೀಲಕ ಸಂವತ್ಸರ ವೈಶಾಖ ಶುಕ್ಲ ತ್ರಯೋದಶಿ ೧೦-೦೫-೧೯೬೮ ಮಠಾಕೇರಿಯಲ್ಲಿರುವ ೯ ಗುಂಟೆ ಜಾಗವನ್ನು ಸರಕಾರಿ ಪ್ರೌಢಶಾಲೆ ಕಟ್ಟಲು ನೀಡಿ ದ್ವಾರಕಾನಾಥ ವಿದ್ಯಾಲಯ ಎಂದು ನಾಮಕರಣಮಾಡಿ ಶ್ರೀ ದ್ವಾರಕಾನಾಥ ತೀರ್ಥರ ಅಮೃತಹಸ್ತದಿಂದ ಉಧ್ಘಾಟನೆ ಮಾಡಲಾಯಿತು.
• ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಆಮಂತ್ರಣದ ಮೇರೆಗೆ ಬಾಹುಬಲಿ ಪ್ರತಿಷ್ಠೆ ಮುಗಿಸಿ ರಾತ್ರಿ ಅಂಕೋಲಾ ಮಠದಲ್ಲಿ ವಾಸ್ತವ್ಯ ಮಾಡಿ ಶಕ ೧೮೯೪ರ ಪರಿಧಾವಿ ಸಂ|| ಫಾಲ್ಗುನ ಬಹುಳ ಷಷ್ಠಿ (೨೫/೦೩/೧೯೭೩)ರಂದು ಮುಂಜಾನೆಯ ಪೂಜೆಮುಗಿಸಿ ಭಿಕ್ಷೆ ಸ್ವೀಕರಿಸಿ ಹೊರುಡುತ್ತಿದ್ದಂತೆ ಹೃದಯಾಘಾತವಾಗಿ ಪಾರ್ಥಿವ ಶರೀರವನ್ನು ತೊರೆದರು. ಅವರ ಸಮಾಧಿ ಪರ್ತಗಾಳಿ ಮಠದಲ್ಲಿ ಮಾಡಲಾಗಿದೆ.
• ಶಕ ೧೯೦೯ರ ಪ್ರಭವ ಸಂವತ್ಸರ ಫಾಲ್ಗುಣ ಶುಕ್ಲದ್ವಾದಶಿ (೨೯/೦೨/೧೯೮೮) ಶ್ರೀ ವಿದ್ಯಾಧಿರಾಜ ತೀರ್ಥರ ಹಸ್ತದಿಂದ ಶ್ರೀವೀರವಿಠ್ಠದೇವರ ಪುನರ್ ಪ್ರತಿಷ್ಠಾ, ಶಿಖರ ಕಲಶ ಪ್ರತಿಷ್ಠಾ.
• ಶಕ ೧೯೧೦ ವಿಭವ ಸಂವತ್ಸರ ಫಾಲ್ಗುಣ ಶುಕ್ಲ ದ್ವಾದಶಿ ೧೯-೦೩-೧೯೮೯ ರಂದು ಶ್ರೀ ವಿದ್ಯಾಧಿರಾಜ ತೀರ್ಥರ ಅಮೃತಹಸ್ತದಿಂದ ಶ್ರೀ ವಿದ್ಯಾಧಿರಾಜ ಸಭಾಗೃಹದ ಉಧ್ಘಾಟನೆ.
• ಶಕ ೧೯೧೧ರ ಶುಕ್ಲ ಸಂವತ್ಸರ ಫಾಲ್ಗುಣ ಶುಕ್ಲ ದ್ವಾದಶಿ (೦೮-೦೩-೧೯೯೦) ರಂದು ಜೀರ್ಣೋದ್ಧಾರಿತ ಮೂರು ವೃಂದಾವನಗಳಲ್ಲಿ ಶ್ರೀ ಮುಖ್ಯಪ್ರಾಣದೇವರ ಶಿಲಾವಿಗ್ರಹ ಪ್ರತಿಷ್ಠೆ.