Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

????????????????????????????????????

೨೬ ಶ್ರೀ ಲಕ್ಷ್ಮೀ ನಾರಾಯಣ ವೆಂಕಟ್ರಮಣ ದೇವಸ್ಥಾನ ದಾಂಡೇಲಿ


ಸಂಸ್ಥಾಪಕರು : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಸ್ಥಾಪನಾ ವರ್ಷ : ಶಕ ೧೯೧೩ ಪ್ರಜಾಪತಿ ಸಂವತ್ಸರ ಫಾಲ್ಗುಣ ಬಹುಳ ಅಷ್ಟಮಿ (೨೬-೦-೧೯೯೨)
ದೇವ ಪ್ರತಿಮಾ : ಶ್ರೀ ವೆಂಕಟರಮಣ (ಶಿಲಾಪ್ರತಿಮೆ)
ವಿಳಾಸ : ಶ್ರೀ ಲಕ್ಷ್ಮೀನಾರಾಯಣ ವೆಂಕಟ್ರಮಣ ದೇವಸ್ಥಾನ ಅಂಬಿಕಾ ನಗರ ರಸ್ತೆ,
ದಾಂಡೇಲಿ ಉತ್ತರ ಕನ್ನಡ, ೫೮೧೩೨೫, ದೂರವಾಣಿ : ೦೮೨೮೪ ೨೩೩೧೨೫೪
ಭೂಪ್ರದೇಶ : ೭೫೦೭.೫೦ ಚದರ ಮೀಟರ
ಕಟ್ಟಡದ ವಿವರಗಳು : ಗರ್ಭಗ್ರಹ, ಗುರು ಭವನ, ಅರ್ಚಕ ನಿವಾಸ, ತೆರೆದ ಮೈದಾನ
ಮಹಾದ್ವಾರ : ಮುಖ್ಯರಸ್ತೆಯಲ್ಲಿ ಮಹಾದ್ವಾರ.
ಸಭಾಭವನ : ಶ್ರೀ ವಿದ್ಯಾಧಿರಾಜ ಸಭಾಭವನ, ಡೈನಿಂಗ ಹಾಲ್, ಅಡುಗೆ ಮನೆ, ಪಾರ್ಕಿಂಗ್‌ಗೆ ಮುಕ್ತ ಸ್ಥಳ.
ಶಿಲಾನ್ಯಾಸ : ಶಕೆ ೧೯೨೪ ಚಿತ್ರಭಾನು ಸಂವತ್ಸರ ಕಾರ್ತಿಕ ಬಹುಳ ದ್ವಿತೀಯ (೨೨-೧೨-೨೦೦೨)
ಉದ್ಘಾಟನೆ : ಶಕೆ ೧೯೨೫ ಸುಭಾನು ಸಂವತ್ಸರ ಆಷಾಡ ಬಹುಳ ಪ್ರತಿಪದೆ ಸೋಮವಾರ (೧೪-೦೭-೨೦೦೩)
ಪಂಚಪರ್ವ ಉತ್ಸವ : ವರ್ಧಂತಿ ಉತ್ಸವ

ಸಹ್ಯಾದ್ರಿ ಘಟ್ಟದ ಮೇಲಿನ ಉತ್ತರಕನ್ನಡ ಜಿಲ್ಹೆಯ ಉದ್ಯಮನಗರಿಯೆಂದು ಖ್ಯಾತಿಗೊಂಡ ದಾಂಡೇಲಿಯಲ್ಲಿ ಉದ್ಯಮದೊಂದಿಗೆ ಸಾರಸ್ವತ ಸಮೂಹವು ಬಂದು ಸೇರತೊಡಗಿತು. ಸಾರಸ್ವತ ಸಮಾಜ ಬೆಳೆದಂತೆಲ್ಲಾ ತಮ್ಮ ಸಮಾಜದ ಅಭಿವೃಧ್ದಿ, ಮಾರ್ಗದರ್ಶನ ಪಡೆದುಕೊಳ್ಳಲು ಧರ್ಮಗುರುಗಳನ್ನು ಆಮಂತ್ರಿಸಿದರು. ಸ್ವಕೀಯ ಶಿಷ್ಯವರ್ಗದ ಆಮಂತ್ರಣ ಮೇರೆಗೆ ಗೋಕರ್ಣ ಮಠಪರಂಪರೆಯ ೨೨ನೇ ಯತಿವರ್ಯರಾದ ಶ್ರೀಮದ್ ದ್ವಾರಕಾನಾಥ ತೀರ್ಥರು ಕ್ರಿ.ಶ ೧೯೫೮ರಲ್ಲಿ ದಾಂಡೇಲಿಗೆ ಆಗಮಿಸಿ ತಮ್ಮ ವಾಸ್ತವ್ಯದಲ್ಲಿ ಸಮಾಜದ ಸಾರವಂತಿಕೆ, ಸಂಸ್ಕೃತಿ ಉಳಿಸಿಕೊಂಡು ಎಲ್ಲಸಮಾಜ ಬಾಂಧವರು ಸಂಘಟಿತರಾಗಿ ಅಭಿವೃಧ್ದಿಹೊಂದುವಂತೆ ಸಂದೇಶ ನೀಡಿದರು.
ವಿಸ್ತಾರಗೊಳ್ಳುತ್ತಿರುವ ಊರಿನಲ್ಲಿ ಸಮಾಜವೂ ವಿಸ್ತಾರಗೊಂಡಂತೆ ಹೊಸದಾಗಿ ಬಂದು ನೆಲೆಸಿದ ಸಮಾಜ ಬಾಂಧವರ ಜೊತೆ ಪರಸ್ಪರ ಸ್ನೇಹ ಪರಿಚಯ, ಧಾರ್ಮಿಕ ಕಾರ್ಯಕ್ರಮಕ್ಕೆ, ಹಬ್ಬಹರಿದಿನ ಆಚರಿಸಲು ಅನಕೂಲಕರವಾಗುವಂತೆ ಒಂದು ದೇವಾಲಯ ಸಮಾಜಮಂದಿರ ಕಟ್ಟುವ ಅವಶ್ಯಕತೆ ಮನಗಂಡು ಗುರುಗಳಲ್ಲಿ ಭಿನ್ನವಿಸಿ ಶ್ರೀಗಳವರು ಒಂದು ಸ್ಥಾನಿಕ ಸಮಿತಿಯನ್ನು ರಚಿಸಿ ದೇವಮಂದಿರ, ಆಗ್ರಶಾಲೆ, ಸಭಾಮಂಟಪ ಇರುವ ಒಂದು ವಾಸ್ತುವಿನ ರಚನೆ ಮಾಡುವಂತೆ ಆದೇಶಿಸಿದರು.
ಶ್ರೀಗಳವರ ಅನುಗ್ರಹ ಆಶಿರ್ವಾದದಿಂದ ಸ್ಪೂರ್ತಿಗೊಂಡ ಸಮಿತಿಯು ದಾಂಡೇಲಿ ಮಧ್ಯವರ್ತಿ ಸ್ಥಳದಲ್ಲಿ ಸುಮಾರು ಎರಡೂಕಾಲು ಎಕರೆ ವಿಸ್ತಾರದ ಸ್ಥಳವನ್ನು ಖರೀದಿಸಿ ಶ್ರೀಗಳವರ ಮಾರ್ಗದರ್ಶನದಲ್ಲಿ ವಾಸ್ತುವಿನ ರಚನೆಯನ್ನು ಪ್ರಾರಂಭಿಸಿದರು. ಗುರುವರ್ಯ ಶ್ರೀ ವಿದ್ಯಾಧಿರಾಜ ತೀರ್ಥರು (೨೩) ತಮ್ಮ ಗುರುಗಳ ಕನಸನ್ನು ಸಾಕಾರಗೊಳಿಸಲು ಸ್ಥಾನಿಕ ಸಮಿತಿಗೆ ತಮ್ಮ ಸಹಾಯಹಸ್ತವನ್ನು ನೀಡಿ ಮಠವಾಸ್ತು ಅತೀಶೀಘ್ರವಾಗಿ ನಿರ್ಮಿಸಲು ನೆರವಾದರು.
ಪ್ರಥಮ ಹಂತದ ಕಾಮಗಾರಿಯಲ್ಲಿ ದೇವಮಂದಿರ, ಮಂದಿರದ ಮುಂದೆ ಮಂಟಪ, ಮಂದಿರದ ಪಾರ್ಶ್ವದಲ್ಲಿ ಶ್ರೀಗಳವರ ವಾಸ್ತವ್ಯಕ್ಕೆ ಅನಕೂಲವಿರುವ ಗುರುಭವನ, ಮುಖ್ಯರಸ್ತೆಯಲ್ಲಿ ತಮ್ಮ ಸಮಾಜದ ಅಸ್ತ್ತಿತ್ವವನ್ನು ಸಾರುವ ಸುಂದರ ರಚನೆಯ ಮಹಾದ್ವಾರ ರಚನೆಯನ್ನ ಪೂರ್ಣಗೊಳಿಸಿದರು. ಶಕೆ ೧೯೧೪ ಪ್ರಜಾಪತಿ ಸಂವತ್ಸರ, ಫಾಲ್ಗುಣ ಬಹುಳ ಅಷ್ಠಮಿಯಂದು (೨೬/೦೩/೧೯೯೨) ಶ್ರೀ ವೆಂಕಟರಮಣ ದೇವರ ಕೃಷ್ಣಶಿಲೆಯ ವಿಗ್ರಹ ಶ್ರೀ ವಿದ್ಯಾಧಿರಾಜ ತೀರ್ಥರ ಅಮೃತಹಸ್ತದಿಂದ ವಿದ್ಯುಕ್ತವಾಗಿ ದೇವ ಪ್ರತಿಷ್ಠೆ, ಶಿಖರಕಲಶ ಪ್ರತಿಷ್ಠಾಪನಾ ಕಾರ್ಯಕ್ರಮವು ಸಂಭ್ರಮ ಮತ್ತು ವೈಭವದಿಂದ ಸಂಪನ್ನಗೊಂಡಿತು.
ಕಾಲಾಂತರದಲ್ಲಿ ವಿಸ್ತಾರಗೊಂಡ ಸಾರಸ್ವತ ಸಮಾಜದ ಅವಶ್ಯಕತೆ ಅನಕೂಲವಾಗುವಂತೆ, ಸಮಾಜಬಾಂಧವರ ಶುಭಶೋಭನಾದಿ ಕಾರ್ಯಕ್ರಮಗಳು, ಇತರೆ ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆಗೆ ಅನುಕೂಲವಾಗುವಂತೆ ಸಕಲ ಸೌಕರ್ಯದಿಂದ ಕೂಡಿದ ಸಭಾಭವನ ಅವಶ್ಯಕತೆಯ ಸೂಚನೆಯನ್ನು ಶ್ರೀಗಳವರಲ್ಲಿ ಅರಿಕೆಮಾಡಿ ಅವರ ಆಶಿರ್ವಾದ ಮಾರ್ಗದರ್ಶನದಂತೆ ವಿಶಾಲ ಸಭಾಗೃಹ, ಪಾಕಶಾಲೆ, ಭೊಜನಶಾಲೆ, ಕೊಳವೆಬಾವಿ ಸಹಿತ ಅವಶ್ಯವಿರುವ ಪರಿಕರ ಪೀಠೋಪಕರಣ ಹೊಂದಿದ ಕಟ್ಟಡವನ್ನು ಪೂರ್ಣಗೊಳಿಸಿದರು. ದಾಂಡೇಲಿ ನಗರದಲ್ಲೇ ಭವ್ಯವಾದ ಶ್ರೀ ವಿದ್ಯಾಧಿರಾಜ ಸಭಾಭವನ ಶ್ರೀ ಗಳವರ ಅಮೃತ ಹಸ್ತದಿಂದ ಶಕೆ ೧೯೨೫ ಸುಭಾನು ಸಂವತ್ಸರ ಆಷಾಢ ಬಹುಳ ಪ್ರತಿಪದೆ ಸೋಮವಾರ (೧೪-೦೭-೨೦೦೩) ರಂದು ಉಧ್ಘಾಟನೆಯಾಯಿತು. ತನ್ನಿಮಿತ್ತ ದೇವಪ್ರತಿಷ್ಠೆಯ ವರ್ಧಂತಿ ಉತ್ಸವಕ್ಕೆ ಪ್ರತಿ ವರ್ಷ ಶ್ರೀಗಳವರು ಬರುವಂತೆ ಆಮಂತ್ರಣ ನೀಡಿ ಅವರ ಮಾರ್ಗದರ್ಶನ, ಆಶಿರ್ವಾದದಿಂದ ಸಮಾಜವು ಅಭಿವೃದ್ದಿಗೊಂಡಿತು.