Taking too long? Close loading screen.

Shree Samsthan Gokarn Partagali Jeevottam Math

PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

20 Mumbai Kannada

ಶ್ರೀ ರಾಮ ಮಂದಿರ ಮುಂಬೈ

ಸಂಸ್ಥಾಪಕರು : ಶ್ರೀ ದ್ವಾರಕಾನಾಥ ತೀರ್ಥ (೨೨)
ಶಿಲಾನ್ಯಾಸ : ಶ್ರೀಶಕೆ ೧೮೭೨ ವಿಕ್ರತಿ, ಮಾರ್ಗಶಿರ್ಷ ಶುಕ್ಲತ್ರಯೋದಶಿ (೨೨/೧೨/೧೯೫೦)
ಉದ್ಘಾಟನೆ : ಶ್ರೀಶಕೆ ೧೮೭೬ ಜಯ ಸಂವತ್ಸರ ಮಾಘ ಶುಕ್ಲದಶಮಿ (೦೨-೦೨-೧೯೫೫) ಗೋಕರ್ಣ ಮಠದ ಶ್ರೀ
ದ್ವಾರಕಾನಾಥ ತೀರ್ಥರ (೨೨) ಸಾನ್ನಿಧ್ಯದಲ್ಲಿ ಶ್ರೀ ಸಂಸ್ಥಾನ ಕಾಶಿ ಮಠದ ಶ್ರೀ ಸುಧೀಂದ್ರ ತೀರ್ಥ
ಸ್ವಾಮೀಜಿ ಅವರಿಂದ ದ್ವಾರಕಾನಾಥ ಭವನ ಉದ್ಘಾಟನೆ.
ದೇವ ಪ್ರತಿಷ್ಠಾ : ಶ್ರೀಶಕೆ ೧೮೮೭ ವಿಶ್ವಾವಸು ಸಂವತ್ಸರ ಮಾಘ ಶುಕ್ಲ ಅಷ್ಟಮಿ (೦೭-೦೨-೧೯೬೫)
ದೇವಪ್ರತಿಮಾ : ಶ್ರೀ ಸೀತಾ ಲಕ್ಷ್ಮಣ ಸಹಿತ ರಾಮಚಂದ್ರ (ಶಿಲಾ ವಿಗ್ರಹ)
ಇತರೆ ಪ್ರತಿಮೆ : ನವಗ್ರಹ ಶಿಲಾಪ್ರತಿಮೆ, ನಾಗಪ್ರತಿಮೆ.
ವಿಳಾಸ : ಶ್ರೀ ರಾಮ ಮಂದಿರ, ಶ್ರೀ ದ್ವಾರಕಾನಾಥ ಭವನ, ಕತ್ರಕ್ ರಸ್ತೆ ವಡಾಲಾ
ಮುಂಬೈ ೪೦೦ ೦೩೧ ಫೋನ ೦೨೨-೨೪೧೨೨೫೩೫
ಒಟ್ಟು ಪ್ರದೇಶ : ೧೦,೦೦೦ ಚ.ಮೀ
ಕಟ್ಟಡದ ವಿವರಗಳು : ಸಭಾಭವನ : ಶ್ರೀ ದ್ವಾರಕಾನಾಥ ಭವನ (ಹವಾ ನಿಯಂತ್ರಿತ)
: ಶ್ರೀ ವಿದ್ಯಾಧಿರಾಜ ಸಭಾಗ್ರಹ (ಹವಾ ನಿಯಂತ್ರಿತ)
: ಶ್ರೀ ಇಂದಿರಾಕಾಂತ ಸಭಾಗ್ರಹ (ಹವಾ ನಿಯಂತ್ರಿತ)
ಪಂಚ ಪರ್ವ ಉತ್ಸವ : ವರ್ಧಂತಿ ಉತ್ಸವ, ಗಣೇಶ ಚತುರ್ಥಿ, ರಾಮ ನವಮಿ ರಥೋತ್ಸವ

ಗಣಿತದ ಇತಿಹಾಸ

ಉತ್ತರ ಮತ್ತು ದಕ್ಷಿಣ ಕನ್ನಡದ ಸಾರಸ್ವತರು ತಮ್ಮ ಉದ್ಯೋಗವನ್ನು ಅರಸುತ್ತಾ ೭ನೇ ಶತಮಾನದಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಹಂಚಿ ಹೋದರು. ಹೆಚ್ಚಿನವರು ಭಾರತದ ನಾಲ್ಕು ಅತಿದೊಡ್ಡನಗರಗಳಲ್ಲಿ ಒಂದಾದ ಮುಂಬೈಗೆ ತಲುಪಿದರು. ಒಬ್ಬರ ಹಿಂದೆ ಒಬ್ಬರಂತೆ ಹೊರಟು ಸಾರಸ್ವತ ಜನರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬೆಳೆಯಿತು. ಮುಂಬೈನಂತಹ ಭೃಹತ್ ನಗರದಲ್ಲಿ ಹರಡಿಹೋದ ಜನರಿಗೆ ಒಂದುಕಡೆ ಸೇರಲು ಒಂದು ಸ್ಥಳದ ಅವಶ್ಯಕತೆಯಿತ್ತು. ಸಾರಸ್ವತರು ಎಂದೂ ತಮ್ಮ ಕುಲದೇವರು ಮತ್ತು ಗುರುಪೀಠವನ್ನು ಬಿಟ್ಟಿರುವದಿಲ್ಲ. ಮದುವೆ. ಉಪನಯನ, ಧಾರ್ಮಿಕ ಕಾರ್ಯಕ್ರಮ ನಡೆಸಲು ಗುರುಗಳಮಾರ್ಗದರ್ಶನ ಪಡೆಯಲು ಪರ್ತಗಾಳಿಗೆ ಬರಬೇಕಾಗಿತ್ತು. ಆದ್ದರಿಂದ ತಮ್ಮ ಶಿಷ್ಯವೃಂದದ ಅನುಕೂಲಕ್ಕಾಗಿ ಗೋಕರ್ಣ ಮಠದ ಶಾಖಾಮಠ ಮುಂಬೈನಲ್ಲಿ ಸ್ಥಾಪಿಸಲು ನಿರ್ಧರಿಸಿ ಶ್ರೀ ದ್ವಾರಕಾನಾರ್ಥ ತೀರ್ಥರು (೨೨) ಮುಂಬೈನ ವಡಾಲಾ ಭಾಗದಲ್ಲಿ ಒಂದು ನೀವೇಶನವನ್ನು ಖರೀದಿಸಿದರು. ನೂತನ ಮಠಕ್ಕೆ ಶಿಲಾನ್ಯಾಸ ನೆರವೇರಿಸಲು ಶ್ರೀಗಳು ಗೋವಾದಿಂದ ಸಮುದ್ರ ಮಾರ್ಗವಾಗಿ ಮುಂಬೈನ ಗೇಟವೇ ಆಫ್ ಇಂಡಿಯಾದ ಮೂಲಕ ಪ್ರಥಮಬಾರಿಗೆ ಮುಂಬೈ ನಗರ ಪ್ರವೇಶಿಸಿದರು. ಅಂದು ಶ್ರಿಗಳವರನ್ನು ಸ್ವಾಗತಿಸಲು ಮುಂಬೈನ ಪ್ರತಿಷ್ಠಿತ ಗಣ್ಯ ವ್ಯಕ್ತಿಗಳು ಸಮಾಜ ಬಾಂಧವರು ಸೇರಿ ಗೇಟವೇ ಆಫ್ ಇಂಡಿಯಾದಲ್ಲಿ ಶ್ರೀ ದ್ವಾರಕಾನಾಥ ತೀರ್ಥ ಸ್ವಾಮಿಜಿಯವರನ್ನು ಸ್ವಾಗತಿಸಿದ ರೀತಿ ಮುಂಬೈ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅವಿಸ್ಮರಣಿಯ ದಿನ.
೨೨-೧೨-೧೯೫೦ರಂದು ನೂತನ ವಾಸ್ತು ರಚನೆಗೆ ಶಿಲಾನ್ಯಾಸ ಮಾಡಿ ಕಟ್ಟಡ ನಿರ್ಮಾಣಕ್ಕೆ ಸಮಿತಿಯನ್ನು ರಚಿಸಿದರು. ಮಹಾನಗರಪಾಲಿಕೆಯಿಂದ ಬೇಕಾದ ಅವಶ್ಯಕ ಮಂಜೂರಾತಿ, ವಾಸ್ತುಶಿಲ್ಪಜ್ಞರಿಂದ ಸೂಕ್ತ ಕಟ್ಟಡದ ನೀಲನಕ್ಷೆ, ಅವಶ್ಯಕ ಸಾಮಗ್ರಿಗಳನ್ನು ಸಂಗ್ರಹಿಸಿ ಕಟ್ಟಡದ ರಚನೆಯನ್ನು ಪೂರ್ಣಗೊಳಿಸಿ ಶಕೆ ೧೮೭೬ ಜಯ ಸಂವತ್ಸರ. ಮಾಘಶುಕ್ಲ ದಶಮಿಯಂದು ಶ್ರೀ ದ್ವಾರಕಾನಾಥ ತೀರ್ಥರು ಕಾಶಿಮಠದಿಂದ ಶ್ರೀ ಸುಧೀಂದ್ರ ತೀರ್ಥರೊಂದಿಗೆ ಆಗಮಿಸಿ ಅವರ ಅಮೃತಹಸ್ತದಿಂದ ಶ್ರೀ ದ್ವಾರಕಾನಾಥ ಭವನದ ಉಧ್ಘಾಟನೆ ನೆರವೇರಿಸಿದರು. ಕಾಲಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಂದ ಕೂಡಿರುತ್ತಿದ್ದ ಈ ಸ್ಥಳದಲ್ಲಿ ದೇವಪ್ರತಿಮೆಯನ್ನು ಪ್ರತಿಷ್ಠಾಪಿಸುವ ಇಚ್ಛೆಹೊಂದಿದ ಗುರುಗಳು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾ ದೇವರ ಶಿಲಾ ಪ್ರತಿಮೆಯನ್ನು ಶ್ರೀ ಶಕೆ ೧೮೮೭ರ ವಿಶ್ವಾವಸು ಸಂವತ್ಸರ. ಮಾಘಶುಕ್ಲ ಅಷ್ಟಮಿಯಂದು ಪ್ರತಿಷ್ಠಾ ಕಾರ್ಯವನ್ನು ನೆರವೇರಿಸಿದರು. ಪ್ರತಿವರ್ಷ ನಡೆಯುವ ರಾಮನವಮಿ ಉತ್ಸವ, ಅನ್ನ ಸಂತರ್ಪಣೆ, ಮುಂಬೈನಲ್ಲಿ ನಡೆಯುವ ಏಕಮೇವ ಬೃಹದ್ರಥೋತ್ಸವದಿಂದ ವಡಾಳಾದ ರಾಮ ಮಂದಿರ ದಕ್ಷಿಣದ ಅಯೋಧ್ಯಾ ಎಂದು ಪ್ರಖ್ಯಾತವಾಯಿತು. ರಾಮನಿರುವಲ್ಲಿ ಹನುಮನೆಂಬಂತೆ ಅಲಬೇಲಾ ಹನುಮಾನ ದೇವಸ್ಥಾನವು ರಾಮ ಮಂದಿರದ ಮುಂದಿದೆ.

ವಡಾಲಾದ ಗಣಪತಿ ಉತ್ಸವವೂ ಮುಂಬೈನ ಪ್ರತಿಷ್ಟಿತ ಗಣಪತಿ ಉತ್ಸವಗಳಲ್ಲಿ ಒಂದು. ಹನ್ನೊಂದು ದಿನಗಳಕಾಲ ವಿಜ್ರಂಭಿಸುವ ಈ ಧಾರ್ಮಿಕ ಉತ್ಸವಕ್ಕೆ ಮುಂಬೈನ ಪ್ರತಿಷ್ಠಿತ ವ್ಯಕ್ತಿಗಳು, ರಾಷ್ಟ್ರಮಟ್ಟದ ರಾಜಕಾರಣಿಗಳು, ಪ್ರಖ್ಯಾತ ಸಿನಿಮಾನಟರು ಬರುತ್ತಾರೆ. ಗಣೇಶೋತ್ಸವ ಸಮಿತಿಯಿಂದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವ ನಮ್ಮ ಸಮಾಜದ ಒಂದು ಅತಿ ದೊಡ್ಡ ಸಂಸ್ಥೆ ಎಂದು ಖ್ಯಾತಿಗೊಂಡಿದೆ. ಪ್ರತಿವರ್ಷ ಗಣೇಶೋತ್ಸವ ಸಮಿತಿಯಿಂದ ಸಭಾಕಾರ್ಯಕ್ರಮ ನಡೆಸಿ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಿ, ಅವಶ್ಯಕ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡುತ್ತಿದ್ದಾರೆ.
ಮುಂಬೈನ ವಡಾಲ ರಾಮಮಂದಿರದ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಲ್ಲಿ ಪನವೇಲಿನ ಶಾಂತಿಕುಂಜ ಸೇವಾಶ್ರಮವೂ ಒಂದು. ವೃದ್ಯಾಪ್ಯದಲ್ಲಿರುವ ಸಮಾಜಬಾಂಧವರಿಗೆ ಸಕಲ ರೀತಿಯ ಸೌಕರ್ಯವನ್ನು ಒದಗಿಸಲಾಗುತ್ತಿದೆ. ಮುಂಬೈನಗರದಿಂದ ೪೦ಕಿ.ಮಿ ಅಂತರದಲ್ಲಿರುವ ೧೩ ಎಕರೆ ವಿಸ್ತಾರದ ಈ ಸ್ಥಳದಲ್ಲಿ ಮರಾಠಿ ಮಾಧ್ಯಮದಲ್ಲಿ ಶಾಲೆ. ವೈದ್ಯಕೀಯ ಸೌಲಭ್ಯ, ಒಂದು-ಎರಡು ಬೆಡ್‌ಹೊಂದಿರುವ ಕೊಠಡಿಗಳು, ಎರಡು ಬೆಡ್‌ನ ಸ್ವತಂತ್ರ ಚಿಕ್ಕ ಮನೆಗಳು, ಸುಂದರವಿನ್ಯಾಸದ ದೇವಾಲಯ, ತಿರುಗಾಡಲು ವಿಶಾಲ ರಸ್ತೆ, ಸಾಮೂಹಿಕ ಭೋಜನಾಲಯ, ಮುಂತಾದ ಸೌಕರ್ಯಗಳಿಂದ ಕೂಡಿದ್ದು ನಗರದ ಗೌಜು ಗದ್ದಲದಿಂದ ದೂರವಿರುವ ಪ್ರಶಾಂತ, ಸುರಕ್ಷಿತ ಪ್ರದೇಶದಲ್ಲಿ ವ್ಯವಸ್ತೆ ಕಲ್ಪಿಸಿದ್ದಾರೆ.
ಶ್ರೀ ದ್ವಾರಕಾನಾಥ ತೀರ್ಥರ ದೂರದೃಷ್ಟಿಯಿಂದ ಸ್ಥಾಪಿಸಿದ ಗೋಕರ್ಣಮಠದ ಶಾಖೆ ಮುಂಬೈ ಬೃಹನ್ನಗರಿಯ ವಡಾಳಾದ ಶ್ರೀ ರಾಮ ಮಂದಿರ ಸಾರಸ್ವತ ಸಮಾಜದವರ ಘನತೆಯನ್ನು, ಮಠದ ಕೀರ್ತಿಪತಾಕೆಯನ್ನು ಸಾರುವಂತೆ ತಲೆಯೆತ್ತಿ ನಿಂತಿದೆ.