Taking too long? Close loading screen.
PL-logo--146x119A

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

19 Padmanabha Kannada

ಶ್ರೀ ಪದ್ಮನಾಭತೀರ್ಥರು

ಜನ್ಮ ಸ್ಥಳ : ಹೊನ್ನಾವರ
ಜನ್ಮನಾಮ : ನಾರಾಯಣ ವೆಂಕಟೇಶ ಭಟ್ಟ
ಜನ್ಮ ತಿಥಿ : ಶ್ರೀ ಶಕೆ ೧೭೫೦ ಸರ್ವಧಾರಿ ಸಂವತ್ಸರ ಶ್ರಾವಣ ಶುಕ್ಲ-೨ ಮಂಗಳವಾರ (೧೨-೦೮-೧೮೨೮)
ಸಂನ್ಯಾಸ ದೀಕ್ಷೆ : ಶ್ರೀ ಶಕೆ ೧೭೬೧ ವಿಕಾರಿ ಸಂವತ್ಸರ ಮಾಘ ಶುಕ್ಲ-೫ ಶನಿವಾರ (೦೮-೧೨-೧೮೪೦)
ದೀಕ್ಷಾ ಸ್ಥಳ : ಶ್ರೀ ಜೀವೋತ್ತಮ ಮಠ ಗೋಕರ್ಣ
ದೀಕ್ಷಾಗುರು : ಶ್ರೀ ಪೂರ್ಣಪ್ರಜ್ಞ ತೀರ್ಥರು (೧೮)
ಗುರುಪೀಠಾರೋಹಣ : ಶ್ರೀ ಶಕೆ ೧೮೦೧ ಪ್ರಮಾದಿ ಸಂವತ್ಸರ ಜ್ಯೇಷ್ಠ ಶುಕ್ಲ-೧೪ ಮಂಗಳವಾರ (೦೩-೦೬-೧೮೭೯)
ಶಿಷ್ಯ ಸ್ವೀಕಾರ : ಶ್ರೀ ಇಂದಿರಾಕಾಂತ ತೀರ್ಥ (೨೦)
ಮಹಾನಿರ್ವಾಣ : ಶ್ರೀ ಶಕೆ ೧೮೧೪ ನಂದನ ಸಂವತ್ಸರ ಆಷಾಢ ಶುಕ್ಲ-೭ಮೀ (೦೧-೦೭-೧೮೯೨)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಶಿಷ್ಯಕಾಲಾವಧಿ : ೩೯ ವರ್ಷ ೧೩ ತಿಂಗಳು ೨೭ ದಿನಗಳು
ಗುರುಪೀಠಕಾಲಾವಧಿ : ೧೨ ವರ್ಷ ೦೯ ತಿಂಗಳು ೨೯ ದಿನಗಳು
ಮಠಸೇವಾ ಕಾಲಾವಧಿ : ೫೨ ವರ್ಷ ೦೫ ತಿಂಗಳು ೨೪ ದಿನಗಳು
ಆಯುರ್ಮಾನ : ೬೩ ವರ್ಷ ೧೦ ತಿಂಗಳು ೨೯ ದಿನಗಳು

ಸ್ವಾಮೀಜಿಯ ಇತಿಹಾಸ

ನ್ಯಾಯವ್ಯಾಕರಣಾಭಿಜ್ಞಾ ಮಧ್ವಸಿದ್ದಾಂತತತ್ಪರಮ್ |
ಪದ್ಮನಾಭಗುರುಂ ವಂದೇ ಮಧ್ವಸಿದ್ಧಾಂತಲಬ್ಧಯೇ॥
ಮಠಪರಂಪರೆಯ ಹತ್ತೊಂಬತ್ತನೆಯ ಗುರುವರ್ಯರಾದ ಶ್ರೀ ಪದ್ಮನಾಭತೀರ್ಥರು ಶ್ರೀ ಶಕೆ ೧೭೫೦ರ ಸರ್ವಧಾರಿ
ಸಂವತ್ಸರದಲ್ಲಿ ಹೊನ್ನಾವರದಲ್ಲಿ ಜನಿಸಿದರು. ಅಣ್ಣನ ಹೆಸರು ವೆಂಕಟೇಶ ಭಟ್ಟ. ಶ್ರೀ ಶಕೆ ೧೭೬೧ರ ವಿಕಾರಿ ಸಂವತ್ಸರ
ಮಾಘ ಶುಕ್ಲ-೫ಮಿ ಯಂದು ಅವರು ಗೋಕರ್ಣ ಮಠದಲ್ಲಿ ಸಂನ್ಯಾಸದೀಕ್ಷೆ ಪಡೆದರು. ಗುರುಗಳು ವಿದ್ವಾಂಸರಾಗಿದ್ದರು
ಮತ್ತು ಸ್ವತಃ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಿದ್ದರು. ಆದುದರಿಂದ ಶ್ರೀ ಪದ್ಮನಾಭತೀರ್ಥರ ವಿದ್ಯಾಭ್ಯಾಸವು ಸ್ವತಃ ಶ್ರೀ
ಪೂರ್ಣಪ್ರಜ್ಞ ತೀರ್ಥ ಸ್ವಾಮಿಗಳ ಉಸ್ತುವಾರಿಯಲ್ಲಿ ನಡೆಯಿತು. ಶ್ರೀಮದಾಚಾರ್ಯರು ಬರೆದ ಬ್ರಹ್ಮಸೂತ್ರಗಳ ವ್ಯಾಖ್ಯಾನ,
ನ್ಯಾಯ, ವ್ಯಾಕರಣ, ತರ್ಕ ಇತ್ಯಾದಿಗಳಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದರು. ಶ್ರೀ ಪದ್ಮನಾಭ ತೀರ್ಥರು
ಗುರುವಿನಂತೆಯೇ ತೀರ್ಥಯಾತ್ರೆಯನ್ನೂ ಮಾಡಿದರು. ತಿರುಪತಿ, ಧನುಷ್ಕೋಡಿ, ಅನಂತಕ್ಷೇತ್ರ (ತಿರುವನಂತಪುರ),
ಮಂಜೇಶ್ವರ, ಉಡುಪಿ, ಬಸ್ರೂರು, ಗೋಕರ್ಣ ಮುಂತಾದೆಡೆ ಪ್ರವಾಸ ಮಾಡುವುದು ಈ ಪೀಠಾದೀಷ್ಠಿತ ಗುರುವರ್ಯರ
ನಿಯಮವಾಗಿತ್ತು ಮತ್ತು ಅದನ್ನು ಶ್ರೀ ಪದ್ಮನಾಭತೀರ್ಥರೂ ಅನುಸರಿಸಿದರು.
ಗುರುವಿನಂತೆಯೇ ಶಿಷ್ಯರೂ ದೀರ್ಘಾಯುಷ್ಯಿಯಾಗಿದ್ದರು. ಗುರುಶಿಷ್ಯರ ಜೋಡಿ ಎಷ್ಟು ಪೂರಕವಾಗಿತ್ತೆದರೆ ಗುರುಗಳು
ತೀರ್ಥಯಾತ್ರೆ ಅಥವಾ ಸಂಚಾರಕ್ಕಾಗಿ ಮಠದಿಂದ ಹೊರಗೆ ಹೋದರೂ ಮಠದ ವ್ಯವಸ್ಥೆ ಅಥವಾ ನಿರ್ವಹಣೆಯಲ್ಲಿ ಏನೂ
ಕೊರತೆಯಾಗುತ್ತಿರಲಿಲ್ಲ. ಎಲ್ಲಾ ರೀತಿಯ ದೈನಂದಿನ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿದ್ದವು ಅಲ್ಲದೆ ನೈಮಿತ್ತಿಕ
ಕಾರ್ಯಗಳು ಸಹ ಸರಾಗವಾಗಿ ನಡೆಯುತ್ತಿದ್ದವು. ಆದ್ದರಿಂದ ಗುರುಗಳ ಸಂಪೂರ್ಣ ವಿಶ್ವಾಸ ಮತ್ತು ಆಶೀರ್ವಾದವನ್ನು
ಪಡೆದರು. ಮಠದ ಹಿತದೃಷ್ಟಿಯಿಂದ ಶಿಷ್ಯರು ಯಾವುದೇ ಕಾರ್ಯಮಾಡಿದರೂ ಗುರುಗಳ ಒಪ್ಪಿಗೆ ಇರುತ್ತಿತ್ತು.
ಮಠದ ಮಾಲಿಕತ್ವದ ಬಗ್ಗೆ ಪೊರ್ಚುಗೀಸ ಸರಕಾರದ ಪ್ರಕರಣವನ್ನು ಈ ಮೊದಲು ವಿವರಿಸಲಾಗಿದೆ. ಆ ಹೊತ್ತಿಗಾಗಲೇ
ಗುರುವರ್ಯ ಶ್ರೀ ಪೂರ್ಣಪ್ರಜ್ಞ ತೀರ್ಥರು ನಿರ್ವಾಣವನ್ನು ಹೊಂದಿದ್ದರು.
ಶ್ರೀ ಪದ್ಮನಾಭತೀರ್ಥರ ಕಾಲದಲ್ಲಿ ಲಭ್ಯವಿರುವ ಹೆಚ್ಚಿನ ಕಾಗದ ಪತ್ರಗಳು ಮಠದ ವ್ಯವಹಾರಕ್ಕೆ ಸಂಬಂಧಪಟ್ಟವು.
ಜಮೀನು ಖರೀದಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕಾರ ಪತ್ರ ನೀಡಲಾಗಿದೆ. ಈ ಆಚಾರ್ಯರು ಸಂಸ್ಥಾನಕ್ಕೆ ಅನೇಕ
ಭೂಮಿಯನ್ನು ಖರೀದಿಸಿ ಹಾಗೂ ಅದರಿಂದ ಆದಾಯವನ್ನೂ ಹೆಚ್ಚಿಸಿದರು.

ಶ್ರೀ ಪದ್ಮನಾಭತೀರ್ಥರ ನಿರ್ವಾಣ ಶಕೆ ೧೮೧೪ ನಂದನ ಸಂವತ್ಸರ ಆಷಾಢ ಶು-೭ಯಂದು ಪರ್ತಗಾಳಿ
ಮಠದಲ್ಲಾಯಿತು.