Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

10 Laksmikanth Kannada

ಶ್ರೀಮದ್ ಲಕ್ಷ್ಮೀಕಾಂತ ತೀರ್ಥ

ದೀಕ್ಷಾಗುರು : ಶ್ರೀ ಲಕ್ಷ್ಮೀನಾರಾಯಣ ತೀರ್ಥ (೯)
ಶಿಷ್ಯಸ್ವೀಕಾರ : ಶ್ರೀ ರಮಾಕಾಂತ ತೀರ್ಥರು (೧೧)
ಮಹಾನಿರ್ವಾಣ : ಶ್ರೀ ಶಕೆ ೧೬೨೯ ಸರ್ವಜಿತು ಸಂವತ್ಸರ ಮಾರ್ಗಶೀರ್ಷ ಶುಕ್ಲ ದ್ವಿತೀಯಾ ಶನಿವಾರ (೨೬-೧೧-೧೭೦೭)
ವೃಂದಾವನ ಸ್ಥಳ : ಶ್ರೀರಾಮಮಂದಿರ ಹೊನ್ನಾವರ
ಗುರುಪೀಠದ ಅವಧಿ : ೪ ವರ್ಷ ೮ ತಿಂಗಳು ೧೭ ದಿನಗಳು

ಸ್ವಾಮೀಜಿಯ ಇತಿಹಾಸ

ಲಕ್ಷ್ಮೀಕಾಂತಗುರುಂ ವಂದೇ ದೀನಸಜ್ಜನ ತಾರಕಮ್ |
ಲಕ್ಷ್ಮೀಕಾಂತ ಕೃಪಾಪಾತ್ರಂ ಜ್ಞಾನವೈರಾಗ್ಯಸಾಗರಮ್ ||
ಶ್ರೀ ಲಕ್ಷ್ಮೀನಾರಾಯಣ ತೀರ್ಥರ ಮಹಾನಿರ್ವಾಣದ ನಂತರ ಅವರ ಶಿಷ್ಯ ಶ್ರೀ ಲಕ್ಷ್ಮೀಕಾಂತ ತೀರ್ಥರಿಗೆ ಶ್ರೀ ಶಕೆ
೧೬೧೬ ರಲ್ಲಿ ಪಟ್ಟಾಭಿಷೇಕವಾಯಿತು. ಅವರು ಪರ್ತಗಾಳಿ ಮತ್ತು ಹೊನ್ನಾವರ ಎರಡೂ ಮಠಗಳಲ್ಲಿ ವಾಸ್ತವ್ಯ
ಮಾಡುತ್ತಿದ್ದರು.
ಶ್ರೀ ಲಕ್ಷ್ಮೀಕಾಂತ ತೀರ್ಥರ ಕಾಲದ ಲಭ್ಯವಿರುವ ದಾಖಲೆಗಳ ಪ್ರಕಾರ, ಅವರ ಕಾಲಾವಧಿಯಲ್ಲಿ ಸಂಸ್ಥಾನವು
ಭೂದಾನದ ರೂಪದಲ್ಲಿ ಅನೇಕ ಭೂಮಿಯನ್ನು ಪಡೆದಿದ್ದಾರೆ. ೧೬೧೩ರಲ್ಲಿ ಮಠದ ಭಕ್ತರು ರಥೋತ್ಸವಕ್ಕೆ ಲೋಲಯೆ
ಗ್ರಾಮದಲ್ಲಿ ಭೂಮಿಯನ್ನು ದಾನವಾಗಿ ನೀಡಿದರು. ೧೬೧೯ರಲ್ಲಿ ಮಡಕೈ ಹರ ಕಾಮತ, ಪೈಂಗಿಣಿ ಮತ್ತು ನೇತ್ರಾವಳಿಯ
ಭಕ್ತರು ತಮ್ಮ ಜಮೀನನ್ನು ನೀಡಿದರು. ೧೬೨೬ರಲ್ಲಿ ನಗರಸೆ ಗ್ರಾಮದ ಭಕ್ತರು ಮತ್ತೊಂದು ಭೂಮಿಯನ್ನು ದಾನ

ಮಾಡಿದರು. ೧೬೨೭ರಲ್ಲಿ ಅಂಕೋಲೆಯ ಪಿಳಗಾಂವಕರ ಕಾಮತ ಶೇಣ್ವಿ ಮತ್ತು ೧೬೨೯ರಲ್ಲಿ ಫಟ್ ಶೇಣ್ವಿ ತೇಲಂಗ ಮತ್ತು
ಮುಡಗೇರಿ ಸಮಸ್ತ ದೇಸಾಯಿ ಅವರು ನೀಡಿದ ದೇಣಿಗೆ ಪತ್ರದ ದಾಖಲೆಗಳು ಲಭ್ಯವಿದೆ.
ಅವರ ಹೆಸರನ್ನು ಉಲ್ಲೇಖಿಸುವ ಶಕೆ ೧೬೨೯ ರ ಕೊನೆಯ ದಾಖಲೆಯು ಲಭ್ಯವಿದೆ. ಶ್ರೀ ಶಕೆ ೧೬೨೯ ಸರ್ವಜಿತು
ಸಂವತ್ಸರ ಮಾರ್ಗಶೀರ್ಷ ಶುಧ್ಧ ದ್ವಿತೀಯದಂದು