Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

21 Kamalanath Kannada

ಶ್ರೀ ಕಮಲಾನಾಥ ತೀರ್ಥರು

ಜನ್ಮನಾಮ : ನಾರಾಯಣ ವೈಕುಂಠ ಆಚಾರ್ಯ
ಜನ್ಮಸ್ಥಳ : ಪರ್ತಗಾಳಿ
ಜನ್ಮತಿಥಿ : ಶ್ರೀ ಶಕೆ ೧೮೦೭ ಪಾರ್ಥಿವ ಸಂವತ್ಸರ ಕಾರ್ತಿಕ ಶುಕ್ಲ-೬ ಶುಕ್ರವಾರ (೧೩-೧೧-೧೮೮೫)
ಸಂನ್ಯಾಸ ದೀಕ್ಷೆ : ಶ್ರೀ ಶಕೆ ೧೮೨೯ ಪ್ಲವಂಗ ಸಂವತ್ಸರ ವೈಶಾಖ ಕೃಷ್ಣ-೫ ಶುಕ್ರವಾರ (೩೧-೦೫-೧೯೦೭)
ದೀಕ್ಷಾಸ್ಥಳ : ಪರ್ತಗಾಳಿ ಮಠ
ದೀಕ್ಷಾಗುರು : ಶ್ರೀ ಇಂದಿರಾಕಾಂತ ತೀರ್ಥ (೨೦)
ಗುರು ಪೀಠಾರೋಹಣ : ಶ್ರೀ ಶಕೆ ೧೮೬೪ ಚಿತ್ರಭಾನು ಸಂವತ್ಸರ ವೈಶಾಖ ಶುಕ್ಲ-೩ ಶನಿವಾರ (೧೮-೦೪-೧೯೪೨)
ಶಿಷ್ಯಸ್ವೀಕಾರ : ಶ್ರೀ ದ್ವಾರಕಾನಾಥ ತೀರ್ಥ (೨೨)
ಮಹಾನಿರ್ವಾಣ : ಶ್ರೀ ಶಕೆ ೧೮೬೫ ಸುಭಾನು ಸಂವತ್ಸರ ಚೈತ್ರ ಶುಕ್ಲ-೧೧ ಶುಕ್ರವಾರ (೧೬-೦೪-೧೯೪೩)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಶಿಷ್ಯ ಕಾಲಾವಧಿ : ೩೪ ವರ್ಷ ೧೦ ತಿಂಗಳು ೦೮ ದಿನಗಳು
ಗುರುಪೀಠ ಕಾಲಾವಧಿ : ೧೧ ತಿಂಗಳು ೨೯ ದಿನಗಳು
ಮಠಸೇವಾ ಕಾಲಾವಧಿ : ೩೫ ವರ್ಷ ೧೦ ತಿಂಗಳು ೧೬ ದಿನಗಳು
ಆಯುರ್ಮಾನ : ೫೭ ವರ್ಷ ೦೫ ತಿಂಗಳು ೦೫ ದಿನಗಳು

ಸ್ವಾಮೀಜಿಯ ಇತಿಹಾಸ

ಕಮಲನಾಥ ಪದಾಬ್ಜ ಭ್ರಮರಾಯತ್ ಮಾನಸಮ್ ।
ವಾತ್ಸಲ್ಯ ವಿನಾ ವನ್ದೇ ಕಮಲನಾಥ ಯೋಗಿನಾಮ್ ।
ಶ್ರೀ ಇಂದಿರಾಕಾಂತ ತೀರ್ಥರ ನಂತರ ಅವರ ಎರಡನೇ ಶಿಷ್ಯ ಶ್ರೀ ಕಮಲಾನಾಥ ತೀರ್ಥರು ಗುರುಪೀಠಾರೋಹಣ ಮಾಡಿದರು.
ಗುರುಸ್ವಾಮಿಯವರ ಮೊದಲ ಶಿಷ್ಯ ಚಿಕ್ಕ ವಯಸ್ಸಿನಲ್ಲಿ ವೃಂದಾವನಸ್ಥರಾದರು. ಇದಾಗಿ ಹತ್ತು ವರ್ಷಗಳು ಕಳೆದವು ಮತ್ತು ಮಠದ
ಅನುಯಾಯಿಗಳ ಒತ್ತಾಯದ ಮೇರೆಗೆ ಶ್ರೀ ಇಂದಿರಾಕಾಂತ ತೀರ್ಥರನ್ನು ನೂತನ ಶಿಷ್ಯನನ್ನು ಸ್ವೀಕರಿಸಲು ಒತ್ತಾಯಿಸಿದರು.
ವಾಸ್ತವವಾಗಿ, ಅವರು ಸ್ವತಃ ಶಿಷ್ಯನನ್ನು ಸ್ವೀಕರಿಸಲು ಯೋಚಿಸುತ್ತಿದ್ದರು. ಮಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಜನರು
ಬರತೊಡಗಿದರು. ಹಣಕಾಸಿನ ವಹಿವಾಟು ಹೆಚ್ಚಾಗುತ್ತಿದ್ದು, ಇದನ್ನೆಲ್ಲ ಒರ್ವರೆ ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿತ್ತು.
ಆದ್ದರಿಂದ ಮಠಾನುಯಾಯಿಗಳ ಅಪೇಕ್ಷೆಯನ್ನು ಗೌರವಿಸಿ ಸ್ವಾಮೀಜಿ ಶಿಷ್ಯರನ್ನು ಸ್ವೀಕರಿಸಲು ಸಮ್ಮತಿಸಿದರು. ಸ್ವಾಮೀಜಿಯವರ
ಅನುಮತಿ ಪಡೆದು ಸೂಕ್ತ ವಟುವಿಗಾಗಿ ಹುಡುಕಾಟ ಆರಂಭವಾಯಿತು. ಸ್ವಾಮೀಜಿಯವರ ಅಭಿಪ್ರಾಯವನ್ನೂ ಕೇಳಲಾಯಿತು.
ನಿಜವಾಗಿ ಹೇಳಬೇಕೆಂದರೆ ಮಠದ ಪರಿಸರದಲ್ಲಿ ಎಲ್ಲರ ಕಣ್ಣೆದುರು ಬೆಳೆಯುತ್ತಿದ್ದ ಹುಡುಗನೊಬ್ಬ ಶಿಷ್ಯನಂತೆ ಕಾಣುತ್ತಿದ್ದ. ಅದು
ಸ್ವತಃ ಇಂದಿರಾಕಾಂತ ಸ್ವಾಮಿಯವರಿಗೂ ಮನಸ್ಸಿನಲ್ಲಿತ್ತು. ಮಠಾನುಯಾಯಿಗಳ ಕೋರಿಕೆಯ ಮೇರೆಗೆ ಸ್ವಾಮೀಜಿಯವರು
ಪರ್ತಗಾಳಿ ಗ್ರಾಮದ ಆಚಾರ್ಯ ಕುಟುಂಬದಲ್ಲಿ ಹುಟ್ಟಿ ಮಠದ ಪಾಠಶಾಲೆಯಲ್ಲಿ ಓದುತ್ತಿದ್ದ ನಾರಾಯಣ ಎಂಬ ಬಾಲಕನ
ಹೆಸರನ್ನು ಪ್ರಸ್ತಾಪಿಸಿದರು. ಇವರು ವೈಕುಂಠ ನಾರಾಯಣಾಚಾರ್ಯ ಮತ್ತು ಅವರ ಪತ್ನಿ ಅನ್ನಪೂರ್ಣಬಾಯಿಯವರ ಪುತ್ರ. ಸ್ವತಃ
ಇಂದಿರಾಕಾಂತಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಠದ ಪಾಠಶಾಲೆಯಲ್ಲಿ ಓದುತ್ತಿದ್ದರು. ಬುದ್ದಿವಂತ, ಅಧ್ಯಯನೋತ್ಸಾಹಿ,
ಕರಣಾಳು, ಮುಕ್ತಮನಸ್ಸಿನ, ಗುರು ಆಜ್ಞಾಧಾರಕ. ಚಿಕ್ಕವಯಸ್ಸಿನಲ್ಲೂ ಅಪಾರ ಬುದ್ದಿಮತ್ತೆ ಹೊಂದಿದ ಈ ವಟುವನ್ನು ತಮ್ಮ
ಉತ್ತರಾಧಿಕಾರಿಯಾಗಿ ಈಗಾಗಲೇ ಮನದಲ್ಲಿ ನಿಶ್ಚಯಿಸಿದ್ದರು.
ಸ್ವಾಮೀಜಿ ತಮ್ಮ ಆಯ್ಕೆಯನ್ನು ಪ್ರಕಟಿಸಿದ ತಕ್ಷಣ ವಟುವನ್ನು ಮಠಕ್ಕೆ ನೀಡುವಂತೆ ಅವರ ಪೋಷಕರಿಗೆ ಬೇಡಿಕೆಯನ್ನು
ಇಡಲಾಯಿತು. ಈ ವಟುವಿನ ಜಾತಕವನ್ನು ಪರಿಶೀಲಿಸಿ, ಶ್ರೀ ರಾಮದೇವರ ಕೌಲನ್ನು ಪಡೆದು ಎಲ್ಲಾ ವಿಷಯಗಳ ಅನುಕೂಲಕರ
ಇರುವದನ್ನು ಗಮನಿಸಿದ ನಂತರ ವಟುವಿನ ಮಾತಾಪಿತೃರಿಂದ ವಟುವನ್ನು ಪಡೆದ ತಕ್ಷಣ, ಅವನನ್ನು ಮಠಕ್ಕೆ ಕರೆತಂದರು ಮತ್ತು
ಶ್ರೀಶಕೆ ೧೮೨೯ ಪ್ಲವಂಗ ಸಂವತ್ಸರ ವೈಶಾಖ ವದ್ಯ-೫ ಯಂದು ಪರ್ತಗಾಳಿ ಮಠದಲ್ಲಿಆಶ್ರಮದೀಕ್ಷೆಯನ್ನು ನೀಡಲಾಯಿತು, ಅವರಿಗೆ
ಶ್ರೀ ಕಮಲಾನಾಥ ತೀರ್ಥ ಎಂದು ನಾಮಾಭಿದಾನ ನೀಡಲಾಯಿತು. ಆ ಸಮಯದಲ್ಲಿ ಶಿಷ್ಯರಿಗೆ ೧೫ ವರ್ಷ ವಯೋಮಾನ.
ಚಿಕ್ಕ ವಯಸ್ಸಾದರು ಶಿಷ್ಯಸ್ವಾಮಿಯವರ ಅನುಭವ ಅಗಾಧವಾಗಿತ್ತು. ಗುರುವರ್ಯರ ಮೇಲ್ವಿಚಾರಣೆಯಲ್ಲಿ ಅವರು
ಎಲ್ಲಾ ಶಾಸ್ತ್ರಗಳ ಅಧ್ಯಯನವನ್ನು ಮುಂದುವರೆಸಿದರು. ಅಲ್ಲದೆ ವಿದ್ಯಾಭ್ಯಾಸದ ಹೊರತಾಗಿ ಚಿಕ್ಕವಯಸ್ಸಿನಲ್ಲೇ ಮಠದ
ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಾಯಿತು. ಗುರುಸ್ವಾಮಿಯವರು ತಮ್ಮ ಮೊದಲ ಶಿಷ್ಯನ ನಿಧನದಿಂದ ಮಾನಸಿಕವಾಗಿ
ಕುಸಿದಿದ್ದರು. ಮಠಕ್ಕೆ ಮಠಾನುಯಾಯಿಗಳ ಮತ್ತು ಸಂದರ್ಶಕರ ಸಂಖ್ಯೆ ಹೆಚ್ಚಿತ್ತು. ಗುರುವರ್ಯರು ಗ್ರಾಮದ ಮತ್ತು ಇತರ
ಧಾರ್ಮಿಕ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗಿತ್ತು. ಬೋಧನೆಗೆ ಸಾಕಷ್ಟು ಸಮಯ ಕಳೆಯುತ್ತಿತ್ತು. ಮಠದ ಆರ್ಥಿಕ ವಹಿವಾಟು

ಹೆಚ್ಚಿತ್ತು. ಈ ಎಲ್ಲಾ ಕಾರಣಗಳಿಂದ ಗುರುಸ್ವಾಮಿಗಳು ಶಿಷ್ಯಸ್ವಾಮಿಯವರಿಗೆ ಮಠದ ನಿರ್ವಹಣೆಯನ್ನು ವಹಿಸಿಕೊಟ್ಟರು, ಅದೂ
ಕೂಡ ಬಹಳ ವಿಶ್ವಾಸದಿಂದ. ಏಕೆಂದರೆ ಅವರು ಶಿಷ್ಯನ ಕಾರ್ಯಕುಶಲತೆ ಮತ್ತು ವ್ಯಾವಹಾರಿಕ ಕುಶಲತೆ ಬಗ್ಗೆ ವಿಶ್ವಾಸವಿತ್ತು.
ಮುಂದಿನ ೫೦ ವರ್ಷಗಳಲ್ಲಿ, ಈ ನಂಬಿಕೆಯು ಹುಸಿಯಾಗಲಿಲ್ಲ ಎಂದು ಶಿಷ್ಯಸ್ವಾಮಿಗಳು ಸಾಬೀತುಪಡಿಸಿದರು. ಅವರು
ಎಲ್ಲಾ ರೀತಿಯ ಹಣಕಾಸಿನ ವ್ಯವಹಾರಗಳನ್ನು ಎಷ್ಟು ಚಾಕಚ್ಕ್ಯತೆಯಿಂದ ನಿರ್ವಹಿಸುತ್ತಿದ್ದರೆಂದರೆ ಅದು ಮಠದ ಆರ್ಥಿಕ
ಅಡಿಪಾಯವನ್ನು ಬಲಪಡಿಸಿತು. ಶ್ರೀ ಇಂದಿರಾಕಾಂತಸ್ವಾಮಿಗಳ ೫೦ ವರ್ಷಗಳ ಸುದೀರ್ಘ ಕಾಲಕಿರ್ದಿಯಲ್ಲಿ ಸುಮಾರು ೧೫೦
ಸ್ಥಾವರ ಸ್ಥಿರಾಸ್ತಿಯಿತ್ತು. ಇವುಗಳಲ್ಲಿ ಸುಮಾರು ೨೫ ಸ್ಥಳಗಳನ್ನು ಮಾತ್ರ ಇಂದಿರಾಕಾಂತ ತೀರ್ಥರು ೧೯೦೬ ರವರೆಗೆ
ಖರೀದಿಸಿದ್ದರು ಅಥವಾ ದಾನರೂಪದಲ್ಲಿ ಪಡೆದಿದ್ದರು. ಉಳಿದ ೧೨೫ ಸ್ಥಳಗಳನ್ನು ಶ್ರೀ ಕಮಲಾನಾಥ ತೀರ್ಥರು ಅದಕ್ಕೆ
ಸೇರಿಸಿದರು. ಸರ್ವ ವ್ಯವಹಾರಗಳನ್ನೂ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಆದರೆ ಕಮಲಾನಾಥ ತೀರ್ಥರು ಕೇವಲ ವ್ಯವಹಾರಿ ಮಾತ್ರವಲ್ಲ, ತಮ್ಮ ಗುರುಗಳಿಂದ ಸಾಕಷ್ಟು ಲೋಕಜ್ಞಾನವನ್ನು
ಸಂಪಾದಿಸಿದ್ದರು. ಅನೇಕ ಸಂದರ್ಭಗಳಲ್ಲಿ, ಗುರುವರ್ಯರು ಅವರ ಸಲಹೆಯನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಶಿಷ್ಯರು
ಗುರುವನ್ನು ಗೌರವಿಸುತ್ತಿದ್ದರು. ವಹಿವಾಟಿನ ಸೂತ್ರಗಳು ಶಿಷ್ಯನಿಗೆ ಒಪ್ಪಿಸಿದರೂ ಅವರು ಎಲ್ಲಕಾರ್ಯವನ್ನು ಗುರುಗಳ
ಅನುಮತಿಯೊಂದಿಗೆ ಮಾಡುತ್ತಿದ್ದರು. ಅವರು ಗುರುಗಳ ಗೌರವ ಘನತೆಗಳಿಗೆ ಕುಂದು ಬಾರದಂತೆ ನಡೆಸಿಕೊಂಡು ಬರುತ್ತಿದ್ದರು.
ಗುರುಸ್ವಾಮಿಯವರೊಂದಿಗೆ ಅನೇಕ ತೀರ್ಥಯಾತ್ರೆಗಳನ್ನು ಮಾಡಿದ್ದರು, ಸಂಚಾರದ ಸಮಯದಲ್ಲಿ ಅವರೊಂದಿಗೆ ಉಳಿದುಕೊಂಡು,
ಇತರ ಅವಶ್ಯಕ ಸಮಯದಲ್ಲಿ ಗುರುಗಳೊಂದಿಗೆ ಸಂಚಾರಕ್ಕೆ ಹೋಗದೆ, ಮಠದಲ್ಲಿಯೇ ಇದ್ದು ಮಠದ ಆಡಳಿತದೊಂದಿಗೆ
ಗುರುವರ್ಯರ ದೈನಂದಿನ ಕೆಲಸವನ್ನು ನಿರ್ವಹಿಸುತ್ತಿದ್ದರು.
ಶ್ರೀ ಕಮಲಾನಾಥ ತೀರ್ಥ ಸ್ವಾಮಿಗಳು ತುಂಬಾ ಕರುಣಾಮಯಿಯಾಗಿದ್ದರು. ಅವರು ಜನರ ಆರ್ಥಿಕ ಮತ್ತು ಇತರ
ತೊಂದರೆಗಳನ್ನು ತಿಳಿದು ಅವರಿಗೆ ಅವಶ್ಯಕ ಸಹಾಯಸಮಾಡುತ್ತಿದ್ದರು. ಮನೆಮನೆಗಳಲ್ಲಿ ಅಥವಾ ನೆರೆಹೊರೆಯಲ್ಲಿ ಯಾವುದೇ
ಕಾರಣಕ್ಕೂ ಜಗಳವಾದರೆ ಅದನ್ನು ಬಗೆಹರಿಸಲು ಮುಂದಾಗುತ್ತಿದ್ದರು. ಅದಕ್ಕಾಗಿ ಅವರು ತಮಗಾಗುವ ಅನಾನುಕೂಲತೆಯನ್ನು
ಗಮನಿಸುತ್ತಿರಲಿಲ್ಲ. ಇದಕ್ಕಾಗಿ ಅವರು ತಮ್ಮ ಊಟೋಪಚಾರ ಮತ್ತು ನಿದ್ರಾದಿಗಳಬಗ್ಗೆಯೂ ಗಮನ ಹರಿಸುತ್ತಿರಲಿಲ್ಲ. ವಿಶೇಷ
ಪ್ರಸಂಗಗಳಲ್ಲಿ ಅವಶ್ಯವಿದ್ದವರಿಗೆ ಅವರು ಆರ್ಥಿಕ ಸಹಾಯವನ್ನು ನೀಡುತ್ತಿದ್ದರು ಮತ್ತು ಅವರ ಸಾರ್ವಜನಿಕ ಕೆಲಸಗಳಲ್ಲಿ
ಗುರುವರ್ಯರು ಅವರನ್ನು ಬೆಂಬಲಿಸುತ್ತಿದ್ದರು.
ಶ್ರೀ ಇಂದಿರಾಕಾಂತ ತೀರ್ಥ ಸ್ವಾಮಿಗಳನ್ನು ಪರಿಚಯಿಸುವ ಸಂದರ್ಭದಲ್ಲಿ, ಈ ಗುರುಶಿಷ್ಯರ ಜಂಟಿ ಕಾಲಕಿರ್ದಿಯಲ್ಲಿ ನಡೆದ
ಮಹತ್ವದ ಸಾಮಾಜಿಕವಾಗಿ ಬೆಳವಣಿಗೆಗಳನ್ನು ಚರ್ಚಿಸಲಾಗಿದೆ. ಗುರುಗಳ ಎಲ್ಲ ನಿರ್ಧಾರಗಳಲ್ಲೂ ಶಿಷ್ಯರ ಸಹಮತವಿರುತ್ತಿತ್ತು.
ಅಂತಿಮ ನಿರ್ಧಾರವನ್ನು ಗುರುಸ್ವಾಮಿಯವರು ತೆಗೆದುಕೊಂಡರು ಅದು ಶಿಷ್ಯನ ಅಭಿಪ್ರಾಯದ ಮೇರೆಗೆ.
ಈ ಗುರುಶಿಷ್ಯರು ಇತರ ಕೆಲವು ರೀತಿಯ ಸುಸ್ಥಿರ ಕೆಲಸಗಳನ್ನೂ ಮಾಡಿದ್ದಾರೆ. ಇವರ ಆಳ್ವಿಕೆಯಲ್ಲಿ ಕಾರವಾರದ
ಮುರಳೀಧರ ಮಠ ಸ್ಥಾಪನೆಯಾಯಿತು. ಗೋಕರ್ಣ ಮತ್ತು ವೆಂಕಟಾಪುರ ಮಠಗಳನ್ನು ಜೀರ್ಣೋದ್ಧಾರ ಮಾಡಲಾಯಿತು. ಪರ್ತಗಾಳಿ
ಮಠದ ಒಂದು ಭಾಗವನ್ನು ನೂತನೀಕರಣ ಮಾಡಿ ಮತ್ತು ಇನ್ನೊಂದು ಭಾಗವನ್ನು ಜೀರ್ಣೊದ್ಧಾರ ಮಾಡಲಾಯಿತು. ಮಠದ
ಹೊರಗಿನ ಅಂಗಳದಲ್ಲಿ ಅತಿಥಿಗಳಿಗಾಗಿ ಬಂಗಲೆಯನ್ನು ನಿರ್ಮಿಸಿದರು. ಅಂದು ಬಳಸುತ್ತಿದ್ದ ಬೃಹತ್ ರಥಕ್ಕೆ ಹೊಸ ಚಕ್ರಗಳನ್ನು
ಅಳವಡಿಸಲಾಯಿತು.
ಶ್ರೀ ಕಮಲಾನಾಥತೀರ್ಥರು ತಮ್ಮ ಪೂರ್ವಾಶ್ರಮದಲ್ಲಿದ್ದ ಜಮೀನನ್ನು ಮಠಕ್ಕೆ ದಾನ ಮಾಡಿ ಆ ಆದಾಯದಿಂದ ಚೈತ್ರ
ಶುದ್ಧ ಚತುರ್ಥಿಯಿಂದ ಶ್ರೀ ರಾಮಜನ್ಮೋತ್ಸವ ಆಚರಣೆಗೆ ವ್ಯವಸ್ಥೆ ಮಾಡಿದ್ದು ಶ್ರೀ ಕಮಲನಾಥತೀರ್ಥರ ಪ್ರಮುಖ ಕಾರ್ಯಗಳಲ್ಲಿ
ಒಂದಾಗಿದೆ. ಆದ್ದರಿಂದ, ಪಂಚಮಿಯಿಂದ ಪ್ರಾರಂಭವಾಗುವ ರಾಮ ನವಮಿಯ ಆಚರಣೆಯು ಚತುರ್ಥಿಯಿಂದಲೇ ಪ್ರಾರಂಭವಾಯಿತು.
ಗುರುವರ್ಯರ ಅಪ್ಪಣೆಯಂತೆ ಅವರು ಆರಿಸಿದ (ಶ್ರೀ ದ್ವಾರಕಾನಾಥ)ಶಿಷ್ಯನಿಗೆ ತಾವೂ ಪೀಠಾರೋಹಣ ಮಾಡಿದ ನಂತರ ಆಶ್ರಮ
ದೀಕ್ಷೆಯನ್ನು ನೀಡಿದರು. ಶ್ರೀ ಕಮಲನಾಥ ತೀರ್ಥರ ಸ್ವತಂತ್ರ ಕಾಲಕಿರ್ದಿಯು ಕಡಿಮೆ ಅವಧಿಯದ್ದಾಗಿತ್ತು. ಕೇವಲ ೧೧ ತಿಂಗಳು
ಮತ್ತು ೨೯ ದಿನಗಳು. ಶ್ರೀ ಇಂದಿರಾಕಾಂತ ತೀರ್ಥರು ಶ್ರೀ ಶಕೆ ೧೮೬೪ರ ಚೈತ್ರ ವದ್ಯ-೭ಯಂದು ಮಹಾನಿರ್ವಾಣವಾದ ನಂತರ
ವಿಧಿಯುಕ್ತವಾಗಿ ಅವರ ವೃಂದಾವನ ಪ್ರವೇಶದ ಕಾರ್ಯಗಳನ್ನು ನೆರವೇರಿಸಿದ ನಂತರ ಅಕ್ಷಯ ತ್ರತಿಯಾದಂದು ಅವರ ಪಟ್ಟಭೀಷೇಕ
ಕಾರ್ಯಕ್ರಮ ನೆರವೇರಿತು.
ಆದರೆ ಒಂದು ವರ್ಷಪೂರ್ಣಗೊಳ್ಳಲು ಇನ್ನು ಒಂದು ದಿನ ಬಾಕಿ ಇರುವಾಗ ಶ್ರೀ ಶಕೆ ೧೮೬೫ರ ಚೈತ್ರ ಶುದ್ಧ-೧೧ ಶುಕ್ರವಾರ
(ಏಪ್ರಿಲ್ ೧೬, ೧೯೪೩) ಸಂಜೆ ೦೫:೦೦ ಗಂಟೆಗೆ ಅವರು ಇಹಲೋಕ ತ್ಯಜಿಸಿದರು. ಅವರ ವೃಂದಾವನ ಗೋಕರ್ಣ ಪರ್ತಗಾಳಿ
ಮಠದಲ್ಲಿದೆ. ಗೋಕರ್ಣ ಪರ್ತಗಾಳಿ ಮಠದ ಗುರ್ವರ್ಯರಲ್ಲಿ ಕಾಣಕೊಣ ಮಹಲ್‌ನ ನಾಲ್ವರು ಆಚಾರ್ಯರಲ್ಲಿ ಇವರು
ಕೊನೆಯವರು. ಅವರ ನಿರ್ವಾಣವು ಅನುಯಾಯಿಗಳಿಗೆ ಮತ್ತು ಗ್ರಾಮಸ್ಥರಿಗೆ ಬಹಳ ದುಃಖವನ್ನುಂಟುಮಾಡಿತು.