ಶ್ರೀ ದಿಗ್ವಿಜಯರಾಮಚಂದ್ರ ತೀರ್ಥರು
ದೀಕ್ಷಾಗುರು : ಶ್ರೀ ರಾಮಚಂದ್ರ ತೀರ್ಥ (೬)
ದೀಕ್ಷಾ ಸ್ಥಳ : ಪರ್ತಗಾಳಿ ಮಠ
ಶಿಷ್ಯಸ್ವಿಕಾರ : ಶ್ರೀ ರಘುಚಂದ್ರತೀರ್ಥರು (೮)
ಮಹಾನಿರ್ವಾಣ : ಶ್ರೀ ೧೫೯೦ ಕೀಲಕ ಸಂವತ್ಸರ ಮಾಘ ವದ್ಯ-೯ ಭಾನುವಾರ (೨೫-೦೨-೧೬೬೯)
ವೃಂದಾವನ ಸ್ಥಳ : ಶ್ರೀ ವೀರವಿಠ್ಠಲ ಮಠ ಅಂಕೋಲಾ
ಗುರುಪೀಠ ಕಾಲಾವಧಿ : ೩ ವರ್ಷ ೯ ತಿಂಗಳು ೨೨ ದಿನಗಳು
ಮಠ ಸ್ಥಾಪನೆ : ಶ್ರೀ ವೀರವಿಠ್ಠಲ ಮಠ ಅಂಕೋಲಾ
ಅಲೌಕಿಕ ಕೆಲಸ : ನಾರಾಯಣ ಭೂತದ ದಿಗ್ಬಂಧನ, ರಾಮನವಮಿ ದಿನ.
ಸ್ವಾಮೀಜಿಯ ಇತಿಹಾಸ
ಯೆನ ವಾತೆಃ ಪದೋರ್ಮೂಲೆ ಭೂತೋ ನಾರಾಯಣಭಿಧಃ |
ಸ್ತಬ್ಧಿಕೃತೊ ದಿಗ್ವಿಜಯರಾಮಚಂದ್ರಗುರುಂ ಭಜೆ ||
ಶ್ರೀ ದಿಗ್ವಿಜಯರಾಮಚಂದ್ರ ತೀರ್ಥರು ಪರ್ತಗಾಳಿಯಲ್ಲಿ ಮಠವನ್ನು ಸ್ಥಾಪಿಸಿದ ಶ್ರೀ ರಾಮಚಂದ್ರ ತೀರ್ಥರ
ಶಿಷ್ಯರು. ಶಿಷ್ಯಸ್ವೀಕಾರವು ಪರ್ತಗಾಳಿ ಮಠದಲ್ಲಿ ನಡೆಯಿತು ಮತ್ತು ಪರ್ತಗಾಳಿ ಮಠದಲ್ಲಿ ೧೫೮೭ ರಲ್ಲಿ ವೈಶಾಖ ವದ್ಯ
ತ್ರತೀಯದಂದು ಪ್ರಥಮ ದೊಡ್ಡ ಕಾರ್ಯಕ್ರಮವಾಗಿತ್ತು. ಗುರುವರ್ಯ ಶ್ರೀಮದ್ ರಾಮಚಂದ್ರ ತೀರ್ಥರು ರಿವಣ ಮಠದಲ್ಲಿ
ಮೋಕ್ಷಾರೂಢರಾದ ನಂತರ ಶ್ರೀಮದ್ ದಿಗ್ವಿಜಯರಾಮಚಂದ್ರ ತೀರ್ಥರಿಗೆ ಪಟ್ಟಾಭಿಷೇಕವಾಯಿತು. ಅವರು ಹೆಚ್ಚಿನ
ಸಮಯ ರಿವಣ ಮಠದಲ್ಲಿ ವಾಸ್ತವ್ಯದಲ್ಲಿರುತ್ತಿದ್ದರು. ಈ ಮಠದಲ್ಲಿ ಅವರಿಗೆ ತುಳಸಿಕಾಷ್ಠದ ಮಾರುತಿ ವಿಗ್ರಹ
ದೊರಕಿತು. ಅವರು ಮಾರುತಿಯ ಉಪಾಸಕರಾಗಿದ್ದರಿಂದ ಈ ವಿಗ್ರಹ ಅವರಿಗೆ ತುಂಬಾ ಸಂತೋಷ ನೀಡಿತು ಮತ್ತು ಅವರು
ಆ ವಿಗ್ರಹವನ್ನು ತಮಗಾಗಿ ರಿವಣ ಗುಹೆಯಲ್ಲಿ ತಪಶ್ಚರ್ಯಕ್ಕಾಗಿ ಇಟ್ಟುಕೊಂಡರು. ಅಲ್ಲಿ ಸಾಕಷ್ಟು ಸಮಯ ಕಳೆದನಂತರ
ತಮ್ಮ ಶಿಷ್ಯವರ್ಗದ ಆಗ್ರಹದ ಮೇರೆಗೆ ಅವರು ಪರ್ತಗಾಳಿ ಮಠದಲ್ಲಿ ವಾಸ್ತವ್ಯದಲ್ಲಿರಲು ಬಂದರು ಮತ್ತು ಈ
ಮಠದಲ್ಲಿಯೇ ಶ್ರೀಮದ್ ರಘುಚಂದ್ರ ತೀರ್ಥರಿಗೆ (೮) ಆಶ್ರಮ ದೀಕ್ಷೆಯನ್ನು ನೀಡಿ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.
ಈ ಕಾರ್ಯಕ್ರಮ ಪರ್ತಗಾಳಿ ಮಠದಲ್ಲಿ ನಡೆದ ಮೊದಲ ಆಶ್ರಮ ದೀಕ್ಷೆಯ ಸಮಾರಂಭವಾಗಿದೆ.
ಪರ್ತಗಾಳಿ ಮಠದಲ್ಲಿ ರಾಮನವಮಿ ಆಚರಣೆಗಾಗಿ ಶ್ರೀ ರಾಮಚಂದ್ರ ತೀರ್ಥರು ನಾಲ್ಕು ಚಕ್ರಗಳ ದೊಡ್ಡ ರಥವನ್ನು
ನಿರ್ಮಿಸಿಕೊಂಡರು. ಇದನ್ನು ತೇರು ಎಂದೂ ಕರೆಯುತ್ತಾರೆ. ಶ್ರೀ ರಾಮ ಜನ್ಮೋತ್ಸವದ ಪ್ರಾರಂಭವನ್ನು ಶ್ರೀ ದಿಗ್ವಿಜಯ
ರಾಮಚಂದ್ರ ತೀರ್ಥರು ಮತ್ತು ರಘುಚಂದ್ರ ತೀರ್ಥರು ವಿಸ್ತರಿಸಿದರು ಮತ್ತು ಈ ಉತ್ಸವವನ್ನು ಚೈತ್ರಶುಕ್ಲ ಚೈತ್ರ ಶುದ್ಧ
ಮಂಚಮಿಯಿಂದ ಪ್ರಾರಂಭಿಸಿದರು. ಗರುಡಪೂಜೆ, ಧ್ವಜಾರೋಹಣ, ದಂಡಬಲಿ, ಹೋಮಹವನ, ರಥವಿನಾಯಕ ಪೂಜೆ, ಶ್ರೀ
ರಾಮಜನ್ಮೋತ್ಸವ, ಮತ್ತು ರಾಮನವಮಿ ದಿವಸದಂದು ದೇವತಾ ಮೂರ್ತಿ ಸಹಿತ ರಥೋತ್ಸವ ಮೊದಲಾದ
ಮಹೋತ್ಸವದ ವಿವರಗಳನ್ನು ನಿರ್ಧರಿಸಿದರು. ಅದು ಇಂದಿನ ವರೆಗೂ ನಡೆಯುತ್ತ ಬಂದಿದೆ.
ಪ್ರತಿ ವರ್ಷ ಪರ್ತಗಾಳಿ ಮಠದಲ್ಲಿ ಶ್ರೀ ರಾಮಜನ್ಮೋತ್ಸವ ದೊಡ್ಡ ಪ್ರಮಾಣದಲ್ಲಿ ವಿಜ್ರಂಭಣೆಯಿಂದ
ಆಚರಿಸಲಾಗುತ್ತಿದೆ ಎಂಬ ವಿಷಯ ಗೋವಾ ಮತ್ತು ಕರ್ನಾಟಕದಲ್ಲಿ ಹಬ್ಬಿತ್ತು. ಸೋದೆ ಮಠಾಧಿಪತಿಗಳಿಗೆ ಇದು ಇರುಸು
ಮುರುಸಿನ ವಿಷಯವಾಯಿತು. ಹೆಗ್ರೆ ಗ್ರಾಮದ ವಿಚಾರವಾಗಿ ಎರಡು ಮಠಗಳ ನಡುವೆ ಹಲವು ವರ್ಷಗಳಿಂದ ವಾದ ವಿವಾದ
ನಡೆಯುತಿದ್ದು ನ್ಯಾಯಾಲಯದಲ್ಲಿ ಈ ವ್ಯಾಜ್ಯ ನಡೆದು ತೀರ್ಪು ಪರ್ತಗಾಳಿ ಮಠದ ಪರವಾಗಿ ಇತ್ಯರ್ಥಗೊಂಡಿತ್ತು.
ಪರ್ತಗಾಳಿಯಲ್ಲಿನ ಈ ಉತ್ಸವವನ್ನು ಅಶುಭವಾಗಿಸಲು ಸೋದೆ ಯತಿವರ್ಯರು ನಾರಾಯಣನೆಂಬ ಪಿಶಾಚಯೋನಿಗೆ
ಪರ್ತಗಾಳಿಗೆ ಹೋಗಿ ರಥೋತ್ಸವದಲ್ಲಿ ವಿಘ್ನಮಾಡುವಂತೆ ಪ್ರೆರೇಪಿಸಿದರು.
ಅಂದುಕೊಂಡಂತೆ ರಾಮನವಮಿ ಉತ್ಸವವು ಸಂಭ್ರಮ ಸಡಗರದಿಂದ ಆರಂಭವಾಯಿತು. ನವಮಿಯ ದಿನ ಜನರು
ಮಹಾರಥವನ್ನು ಎಳೆಯಲು ಪ್ರಾರಂಭಿಸಿದರು. ಸ್ವಲ್ಪ ದೂರ ಸಾಗಿದ ಮೇಲೆ ರಥ ಸ್ಥಂಭಿಭೂತವಾಯಿತು. “ಎಳೆಯಿರಿ
ಎಳೆಯಿರಿ, ಪಾಂಡುರಂಗ ಹರೀವಿಟ್ಠಲ” ನಾದದಿಂದ ರಥಬೀದಿಯಲ್ಲಿ ಜನರು ರಥವನ್ನು ಎಳೆದರು. ಎನು ಮಾಡಿದರು ರಥ
ಅಲುಗಾಡಲಿಲ್ಲ. ಶ್ರೀ ದಿಗ್ವಿಜಯ ರಾಮಚಂದ್ರ ತೀರ್ಥರಿಗೆ ಈ ವಿಷಯ ತಿಳಿಯಪಡಿಸಿದರು. ಅಂತಃದೃಷ್ಟಿಯಿಂದ ಅವರಿಗೆ
ಏನಾಗಿದೆ ಎಂಬುದರ ಅರಿವಾಯಿತು. ಅವರು ಹತ್ತಿರದಲ್ಲಿದ ತೆಂಗಿನಕಾಯಿಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಮಂತ್ರ
ಶಕ್ತಿಯಿಂದ ನಾರಾಯಣ ಭೂತವನ್ನು ಆ ತೆಂಗಿನಕಾಯಿಯಲ್ಲಿ ಆವಾಹಿಸಿದರು. ಈ ತೆಂಗಿನಕಾಯಿಯನ್ನು ಸ್ವಾಮೀಜಿಯವರು
ಮುಖ್ಯ ಪ್ರಾಣ ದೇವರ ಪಾದಗಳ ಕೆಳಗೆ ಸ್ಥಂಭಿತಗೊಳಿಸಿದರು. ಅದು ಇಂದಿಗೂ ಮಾರುತಿ ದೇವರ ಪಾದತಳದಲ್ಲಿದೆ. ಈ
ವಿಘ್ನವನ್ನು ದಾಟಿದ ನಂತರ ಮತ್ತೆ ರಥೋತ್ಸವ ಸಂಬ್ರಮದಿಂದ ಜರುಗಿತು.
ಅಂದಿನಿಂದ ಮಹಾರಥವು ಮುಖ್ಯಪ್ರಾಣ ದೇವರ ಗುಡಿಯ ಬಳಿಗೆ ಬಂದಾಗ ಎಣ್ಣೆಯಲ್ಲಿ ಅದ್ದಿದ ಎರಡು
ಉದ್ದನೆಯ ಬಟ್ಟೆಯನ್ನು ಗೋಪುರದ ಮೇಲಿನಿಂದ ಕೆಳಗೆ ಇಳಿಸಿ ಪ್ರಜ್ವಲಿಸಿವ ಸಂಪ್ರದಾಯವು ಪ್ರಾರಂಭವಾಯಿತು. ಜೊತೆಗೆ
ತೆಂಗಿನಕಾಯಿಯನ್ನೂ ಭೂತರಾಜನಿಗೆ ಅರ್ಪಿಸಿಸುತ್ತಾರೆ. ಶ್ರೀರಾಮದೇವರ ಪಲ್ಲಕ್ಕಿಯು ಮುಖ್ಯಪ್ರಾಣ ದೇವರ ಗುಡಿಯ
ಹತ್ತಿರ ಬಂದಾಗ ಭೂತರಾಜನಿಗೆ ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ.
ರಾಮನವಮಿ ಉತ್ಸವವನ್ನುಈ ರೀತಿಯಲ್ಲಿ ಸಾಂಗವಾಗಿ ಜರುಗಿಸಿದ ಸ್ವಾಮೀಜಿಯವರು ಮತ್ತೆ ರಿವಣ ಮಠಕ್ಕೆ
ಮರಳಿದರು. ಅಲ್ಲಿ ಮಾರುತಿ ದೇವರ ಆರಾಧನೆಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ಆಚಾರ್ಯರು ಅಂಕೋಲೆ ಮಠದ
ವಾಸ್ತವ್ಯಕ್ಕೆ ಹೋಗಿದ್ದರು. ಅಲ್ಲಿಯೇ ಅವರು ಶ್ರೀಶಕೆ ೧೫೯೦ ಕೀಲಕ ಸಂವತ್ಸರ ಮಾಘ ವದ್ಯ ನವಮಿಯಂದು
ಮೋಕ್ಷಾರೂಡರಾದರು. ಅವರ ವೃಂದಾವನ ಅಂಕೋಲಾದ ಶ್ರೀ ವೀರವಿಠ್ಠಲ ಮಠದಲ್ಲಿದೆ.