Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

8 Raghuchandra Kannada

ಶ್ರೀ ರಘುಚಂದ್ರ ತೀರ್ಥರು

ದೀಕ್ಷಾಗುರು : ಶ್ರೀ ದಿಗ್ವಿಜಯರಾಮಚಂದ್ರ ತೀರ್ಥರು (೭)
ಶಿಷ್ಯಸ್ವೀಕಾರ : ಶ್ರೀ ಲಕ್ಷ್ಮೀನಾರಾಯಣ ತೀರ್ಥ (೯)
ಮಹಾನಿರ್ವಾಣ : ಶ್ರೀ ಶಕೆ ೧೬೦೪ ದುಂದುಭಿ ಸಂವತ್ಸರ ಪುಷ್ಯ ಶುಕ್ಲ-೧೫ ಬುಧವಾರ (೧೩-೦೧-೧೬೮೩)
ವೃಂದಾವನ ಸ್ಥಳ : ಹೊನ್ನಾವರ ಶ್ರೀರಾಮ ಮಂದಿರ
ಗುರುಪೀಠ ಕಾಲಾವದಿ : ೧೩ ವರ್ಷ ೧೦ ತಿಂಗಳು ೧೯ ದಿನಗಳು

ಸ್ವಾಮೀಜಿಯ ಇತಿಹಾಸ

ಸ್ನಷ್ಟುಮಷ್ಟೌ ಮಠಾನ್ಯೇನ ಮಹಾನ್ಯಲಃ ಕೃತೋಽಪೀ ಸಃ |
ವಿಷ್ಣುನಾ ಚೋದಿತಸ್ತ್ಯತ್ಕೋ ರಘುಚಂದ್ರಗುರುಂ ಭನೆ ||
ಶ್ರೀಮದ್ ರಘುಚಂದ್ರ ತೀರ್ಥರು ಶ್ರೀ ಮಠ ಪರಂಪರೆಯಲ್ಲಿ ೮ ನೇ ಗುರುವರ್ಯರಾಗಿದ್ದು, ಶ್ರೀ ದಿಗ್ವಿಜಯ
ರಾಮಚಂದ್ರ ತೀರ್ಥರು ಅವರಿಗೆ ಆಶ್ರಮದೀಕ್ಷೆಯನ್ನು ನೀಡಿದರು. ಪರ್ತಗಾಳಿ ಮಠಕ್ಕಿಂತ ಹೆಚ್ಚಿನ ಸಮಯವನ್ನು
ಗೋಕರ್ಣದ ಮಠದ ವಾಸ್ತವ್ಯದಲ್ಲಿರುತ್ತಿದ್ದರು. ಅವರು ಅನೇಕ ತೀರ್ಥಯಾತ್ರೆಗಳನ್ನು ಮಾಡಿದ್ದಾರೆ ಎಂದು
ಉಲ್ಲೇಖಿಸಲಾಗಿದೆ.
ಮಧ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠವನ್ನು ಸ್ಥಾಪಿಸಿದರು. ಅವರು ಮಾಡಿದಂತೆ ತಾವೂ ಸಹ
ಅಷ್ಟಮಠವನ್ನು ಸ್ಥಾಪಿಸುವ ಆಲೋಚನೆ ಅವರಿಗೆ ಬಂದಿತು. ಹಾಗೆಯೇ ಗೋಕರ್ಣದಲ್ಲಿ ಎಂಟು ಬ್ರಹ್ಮಚಾರಿಗಳನ್ನು
ಆರಿಸಿ ಅವರಿಗೆ ಪ್ರಾಯಶ್ಚಿತ್ಯಾದಿ ವಿಧಿವಿಧಾನಗಳನ್ನು ನೀಡಿದರು. ಅವರಲ್ಲಿ ಮೂವರು ಶಿಷ್ಯರಿಗೆ ಆಶ್ರಮದೀಕ್ಷೆ ನೀಡಿದರು.
ಈ ಮಧ್ಯೆ ಒಬ್ಬ ಶಿಷ್ಯನ ನಿಧನವಾಯಿತು. ನಂತರ ನಾಲ್ಕನೇ ಶಿಷ್ಯನಿಗೆ ಆಶ್ರಮವನ್ನು ನೀಡಲಾಯಿತು. ಅವನೂ ತೀರಿಕೊಂಡ.
ಇದನ್ನು ನೋಡಿದ ಶ್ರೀಮದ್ ರಘುಚಂದ್ರತೀರ್ಥರು ಬೆಚ್ಚಿಬಿದ್ದರು. ಇದು ಏಕೆ ನಡೆಯುತ್ತಿದೆ ಎಂದು ಅವರಿಗೆ
ಅರ್ಥವಾಗಲಿಲ್ಲ. ಅವರಿಗೆ ಬಹಳ ದುಃಖವಾಯಿತು. ಅಂತಹ ಮನಸ್ಥಿತಿಯಲ್ಲಿದ್ದಾಗ ಅವರಿಗೆ ಒಂದು ದೃಷ್ಟಾಂತವಾಯಿತು.
“ಮಧ್ವಾಚಾರ್ಯರ ಅಷ್ಟಮಠಸ್ಥಾಪನಾ ಮಹತ್ಕಾರ್ಯವನ್ನು ಅನುಕರಿಸುವುದು ಸರಿಯಲ್ಲ. ಇದು ಬೇರೆಯವರಿಗೆ
ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಮನಸ್ಸಿನಿಂದ ಈ ಆಲೋಚನೆಯನ್ನು ತೊಡೆದುಹಾಕಿ”. ದೃಷ್ಟಾಂತದ ಪ್ರಕಾರ ಅವರು
ತಮ್ಮ ಸಂಕಲ್ಪವನ್ನು ತ್ಯಜಿಸಿದರು.
ಈ ಶಿಷ್ಯರಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ತೀರ್ಥರು, ವ್ಯಾಸ ತೀರ್ಥರು ಮತ್ತು ಸಂಯಮಿಂದ್ರ ತೀರ್ಥರು ಮಾತ್ರ
ಉಳಿದರು. ಈ ಮೂವರಲ್ಲಿ ಯಾರನ್ನು ಮಠದ ಉತ್ತರಾಧಿಕಾರಿಯಾಗಿ ನೇಮಿಸಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಶ್ರೀ
ರಘುಚಂದ್ರ ತೀರ್ಥರ ಮುಂದೆ ಇತ್ತು. ಮೂವರೂ ವಿದ್ವಾಂಸರೂ, ಪಟ್ಟಕ್ಕೆ ಯೋಗ್ಯರೂ ಆಗಿದ್ದರು. ರಾಗಲೋಭಾದಿ
ಷಡ್ರಿಪುವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಕೊನೆಯಲ್ಲಿ ಅವರೂ ಕೂಡ ಮನುಷ್ಯರೇ ತಾನೇ. ಕೊನೆಗೆ ದಾರಿ
ಕಂಡುಕೊಂಡವರು ಅವರ ಶಿಷ್ಯರೇ. ಸಂಯಮಿಂದ್ರತೀರ್ಥರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಾರಣಾಶಿ ಮಠದಲ್ಲಿ ವಾಸ್ತವ್ಯ
ಮಾಡಿದರು. ವ್ಯಾಸತೀರ್ಥರು ತಾವಾಗಿಯೇ ಉತ್ತರಾಧಿಕಾರತ್ವವನ್ನು ತ್ಯಜಿಸಿ, ವಿರಕ್ತಿಯನ್ನು ಸ್ವೀಕರಿಸಿ ಶ್ರೀರಾಮನ
ಆರಾಧನೆಯನ್ನು ಮಾಡಿದರು ನಂತರ ಅವರು ಪರ್ತಗಾಳಿ ಮಠದಲ್ಲಿ ಸಮಾಧಿ ಹೊಂದಿದರು. ಮಠದ ಇತಿಹಾಸದಲ್ಲಿ
ಪಟ್ಟಾಭಿಷೇಕವಾಗದೇ ಶಿಷ್ಯರಾಗಿಯೇ ನಿರ್ವಾಣಕ್ಕೆ ಹೋದ ಇಬ್ಬರು ಯತಿಗಳ ಹೆಸರು ಮಾತ್ರ ಉಲ್ಲೇಖಿತವಾಗಿದೆ.
ಅವರಲ್ಲಿ ವ್ಯಾಸತೀರ್ಥರು ಮೊದಲಿಗರು ಮತ್ತು ೨೦ನೇ ಗುರುವರ್ಯ ಶ್ರೀ ಇಂದಿರಾಕಾಂತ ತೀರ್ಥರ ಶಿಷ್ಯರಾದ ನರಹರಿ

ತೀರ್ಥರು ಎರಡನೆಯವರು. ಇವರಿಬ್ಬರ ವೃಂದಾವನಗಳು ಪರ್ತಗಾಳಿ ಮಠದ ಯಜ್ಞಶಾಲೆಯ ಹಿಂಭಾಗದ ಪೂರ್ವ ದಿಕ್ಕಿನಲ್ಲಿ
ಇದೆ.
ಈಗ ಉಳಿದವರು ಶ್ರೀಲಕ್ಷ್ಮೀನಾರಾಯಣತೀರ್ಥರು ಮಾತ್ರ. ಅವರಿಗೆ ಮುದ್ರೆ, ಪಾದುಕೆ, ಶ್ರೀ ರಾಮದೇವ ವೀರವಿಟ್ಠಲ
ವಿಗ್ರಹ, ಧರ್ಮಾಧ್ಯಕ್ಷರ ಗೌರವ ಹಾಗೂ ಮಠದ ಸಕಲ ಕಾರ್ಯಭಾರಗಳನ್ನು ಒಪ್ಪಿಸಿ ಗುರು ಶ್ರೀ ರಘುಚಂದ್ರ
ತೀರ್ಥಸ್ವಾಮಿಗಳು ಹೊನ್ನಾವರ ಮಠಕ್ಕೆ ತೆರಳಿದರು. ಅಲ್ಲಿ ಅವರು ಶಕೆ ೧೬೦೪ ದುಂದುಭಿ ಸಂವತ್ಸರ ಪೌಷ ಪೌರ್ಣಿಮೆಯ
ದಿನದಂದು ಮೋಕ್ಷಾರೂಢರಾದರು.
ಶ್ರೀಮದ್ ರಘುಚಂದ್ರ ತೀರ್ಥರು ತಮ್ಮ ಅಲ್ಪ ಕಾಲಾವಧಿಯಲ್ಲಿ ಮೂರು ಬಾರಿ ಗಂಗಾಯಾತ್ರೆ ಮಾಡಿದರು ಎಂದು
ಉಲ್ಲೇಖಿಸಲಾಗಿದೆ. ಅವರು ತೀರ್ಥಯಾತ್ರೆಯಲ್ಲಿದ್ದಾಗ ಕಾಶಿಯ ಬಿಂದುಮಾಧವ ಬೀದಿಯಲ್ಲಿರುವ ಸಂಸ್ಥಾನದ
ಆದ್ಯಮಠವನ್ನು ದುರಸ್ತಿಗೊಳಿಸಿದರು. ಮಠವು ಪುರಾತನವಾಗಿದ್ದರೂ ಅದರ ಭೂ ದಾಖಲೆಗಳು ಲಭ್ಯವಿರಲಿಲ್ಲ.
ಆದ್ದರಿಂದ, ರಮಜಾನ ಸನ್ ೧೦೬೯ರ ತಿಂಗಳ ೧೭ ನೇ ದಿನ, ಸ್ಥಳೀಯ ಸರ್ಕಾರದ ಆದೇಶದಂತೆ ಭೂಮಿಯನ್ನು ಖರೀದಿಸಲು
ಒಪ್ಪಂದ ಮಾಡಿಕೊಂಡರು. ಅಂದು ಜಾಗಸಹಿತ ಕಟ್ಟಡದ ಬೆಲೆ ರೂ. ೧೦೨೫ ಎಂದು ನಿರ್ಧರಿಸಿ ಶ್ರೀ ರಘುಚಂದ್ರ ತೀರ್ಥರು
ಮುಂಗಡವನ್ನು ಲಕ್ಷ್ಮಣದಾಸ್ ವಾಲಾಡ್ ವಿಠ್ಠಲದಾಸ್ ಇಬಾನ್, ಕಾಸಿದಾಸ್ ಮತ್ತು ಉಪಾಧ್ಯೆ ಗೋವರ್ಧನದಾಸ್ ಬಿನ್
ರಾಯ ಉಪಾಧ್ಯ ಮತ್ತು ಅಧ್ಯ ಉಪಾಧ್ಯಾಯರಿಗೆ ನೀಡಿದರು. ಒಪ್ಪಂದವನ್ನು ಕಾಶಿಯ ಖಾಜಿಯೊಂದಿಗೆ
ನೋಂದಾಯಿಸಿದ್ದು ಅದರಲ್ಲಿ ಸಾಕ್ಷಿಗಳಿಂದ ಸಹಿ ಹಾಕಿಸಲಾಗಿದೆ.
ಶ್ರೀ ರಘುಚಂದ್ರ ತೀರ್ಥರು ಹೊನ್ನಾವರದಲ್ಲಿ ಶ್ರೀ ಶಕೆ ೧೬೦೪ ದುಂದುಭಿ ಸಂವತ್ಸರ ಪೌಷ್ಯ ಪೂರ್ಣಿಮಾದಂದು
ಮೋಕ್ಷಾರೂಢರಾಧರು. ಅವರ ವೃಂದಾವನ ಹೊನ್ನಾವರದ ಶ್ರೀರಾಮ ಮಂದಿರದಲ್ಲಿದೆ.