Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

15 Ramanath Kannada

ಶ್ರೀ ರಮಾನಾಥ ತೀರ್ಥರು

ಜನ್ಮ ಸ್ಥಳ : ಕಾಣಕೊಣ ತಾಲೂಕಿನ ಪೈಂಗಿಣಿ.
ದೀಕ್ಷಾಗುರು : ಶ್ರೀ ಭೂವಿಜಯರಾಮಚಂದ್ರ ತೀರ್ಥ (೧೫)
ಶಿಷ್ಯಸ್ವೀಕಾರ : ಶ್ರೀ ಲಕ್ಷ್ಮೀನಾಥ ತೀರ್ಥ (೧೬)
ಮಹಾನಿರ್ವಾಣ : ಶ್ರೀ ಶಕೆ ೧೭೨೬ ರಕ್ತಾಕ್ಷಿ ಸಂವತ್ಸರ ಚೈತ್ರ ಶುಕ್ಲ ನವಮಿ ಸೋಮವಾರ (೧೯-೦೩-೧೮೦೪)
ವೃಂದಾವನ ಸ್ಥಳ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ವೆಂಕಟಾಪುರ ಭಟ್ಕಳ
ಗುರುಪೀಠದ ಅವಧಿ : ೩ ತಿಂಗಳು ೨೫ ದಿನಗಳು

ಸ್ವಾಮೀಜಿಯ ಇತಿಹಾಸ

यस्य रोषाड्कुराज्जातो भस्मसादकरोच्छिखी ।
गृहान्दुहैविकाणां तं रमानाथगुरुं भजे ॥
ಶ್ರೀ ರಮಾನಾಥ ತೀರ್ಥರು ಶ್ರೀ ಭೂವಿಜಯರಾಮಚಂದ್ರ ತೀರ್ಥರ ಶಿಷ್ಯರು. ಪೈಂಗಿಣಿಯ ಭಟ್ಟಭೂತೆ ವಂಶದಲ್ಲಿ
ಜನಿಸಿದರು. ಪರ್ತಗಾಳಿ ಗುರುಪೀಠವನ್ನೇರಿದ ಇವರು ಕಾಣಕೋಣ ತಾಲೂಕಿನ ಮೂರನೇ ಯತಿವರ್ಯರು. ಅವರು
ರಾಪಾನುಗ್ರಹ ಸಮರ್ಥರು ಎಂದು ಬಣ್ಣಿಸಲಾಗಿದೆ. ಒಂದು ವರ್ಷ ಅವರು ಶಿವರಾತ್ರಿಗೆ ಗೋಕರ್ಣಕ್ಕೆ ಹೋಗಿದ್ದರು. ಆ
ಸಮಯದಲ್ಲಿ ನಡೆದ ಘಟನೆ ಹೀಗಿದೆ. ಶ್ರೀಗಳವರು ಸಮುದ್ರ ಸ್ನಾನಕ್ಕೆ ಹೊಗಿದ್ದರು. ಬರುವಾಗ ಮಧ್ಯಾಹ್ನ ಆಗಿದ್ದರಿಂದ
ಮೇಲೆ ಬಿಸಿಲಿನ ತೀವ್ರ ತಾಪ ಮತ್ತು ಅವರ ಪಾದದ ಕೆಳಗಿನ ಉಸುಕಿನ ನೆಲವು ಶ್ರೀಗಳವರ ಮತ್ತು ಅವರ ಪರಿವಾರಕ್ಕೆ
ಸಾಕಷ್ಟು ತೊಂದರೆ ಉಂಟುಮಾಡುತ್ತಿತ್ತು. ಆದರೆ ಅಲ್ಲಿಯ ಕೆಲವು ದ್ರವಿಡ ಬ್ರಾಹ್ಮಣರು ಅವರನ್ನು ಬಂದ ಮಾರ್ಗದಿಂದ
ಮರಳಿಹೋಗಲು ಬಿಡಲಿಲ್ಲ. ಎಷ್ಟು ಸೌಜನ್ಯದಿಂದ ವಿನಂತಿಸಿದರೂ ಅದು ಪ್ರಯೋಜನಕಾರಿಯಾಗಲಿಲ್ಲ, ಇದರಿಂದ
ಶ್ರೀಗಳವರು ಅಸಹನೆಯಿಂದ ಕೋಪಗೊಂಡರು. ಶ್ರೀಗಳವರ ಕೋಪಾಗ್ನಿಯು ಆ ಓಣಿಯಲ್ಲಿರುವ ಬ್ರಾಹ್ಮಣರ ಮನೆಗೆ
ತಗುಲಿ ಬೆಂಕಿ ಹೊತ್ತಿಕೊಂಡಿತು ಮತ್ತು ಬ್ರಾಹ್ಮಣರು ಬೆಂಕಿಯನ್ನು ನಂದಿಸಲು ಓಡಿಹೋದರು. ರಸ್ತೆ ತೆರವುಗೊಳಿಸಲಾಯಿತು
ಮತ್ತು ಶ್ರೀಗಳವರು ಅವರು ತಮ್ಮ ಪರಿವಾರದೊಂದಿಗೆ ಸುರಕ್ಷಿತವಾಗಿ ಮಠಕ್ಕೆ ಮರಳಿಬಂದರು.
ಬಳಿಕ ವೆಂಕಟಾಪುರ ಮಠಕ್ಕೆ ತೆರಳಿದರು. ಅಲ್ಲಿ ಅವರು ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾದರು. ದಿನನಿತ್ಯದ
ಪೂಜೆಗೆ ಸ್ನಾನವು ಅಗತ್ಯವಾಗಿತ್ತು. ಹಾಗಾಗಿ ಜ್ವರವು ಉಲ್ಬಣಗೊಂಡಿತು. ಗುಣವಾಗದ ಜ್ವರದಿಂದ ನಿರ್ವಾಣದ ಸಮಯ
ಹತ್ತಿರವಾಗುತ್ತಿರುವದನ್ನು ಅರಿತರು. ಆ ಸಮಯದಲ್ಲಿ ೧೧ ವರ್ಷದ ವಟುವಿಗೆ ಸಂನ್ಯಾಸದೀಕ್ಷೆ ನೀಡಿ ತಲೆಯ ಮೇಲೆ ವರದ
ಹಸ್ತವನ್ನು ಇಟ್ಟರು. ಈ ವಟುವಿನ ಆವಿಷ್ಕಾರವೂ ಒಂದು ವಿಧಿ ನಿಯಾಮಕ ಎಂದು ಹೇಳಲಾಗುತ್ತದೆ.
ಈ ಅನಾರೋಗ್ಯದ ಸಮಯದಲ್ಲಿಯೇ ಶ್ರೀರಮಾನಾಥ ತೀರ್ಥಸ್ವಾಮಿಗಳು ೧೭೨೬ ರಕ್ತಾಕ್ಷಿ ಸಂವತ್ಸರ ಅಧಿಕ ಚೈತ್ರ
ಶುಕ್ಲ ನವಮಿಯಂದು ವೆಂಕಟಾಪುರ ಮಠದಲ್ಲಿ ಮೋಕ್ಷಾರೂಢರಾದರು.
ಶ್ರೀ ರಮಾನಾಥ ತೀರ್ಥರ ಗುರುಗಳಾದ ಗುರುಗಳಾದ ಶ್ರೀ ಭೂವಿಜಯರಾಮಚಂದ್ರ ತೀರ್ಥರ ಕಾರ್ಯಭಾರದ ಕುರಿತು
ಮಾಹಿತಿ ನೀಡುವಾಗ, ಅವರು ತೀರ್ಥಯಾತ್ರೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು ಹಾಗಾಗಿ ಶಿಷ್ಯಸ್ವಾಮಿ ಶ್ರೀ ರಮಾನಾಥ
ತೀರ್ಥರು ಸಂಸ್ಥಾನದ ಉಸ್ತುವಾರಿ ನೋಡಿಕೊಳ್ಳುತಿದ್ದರು ಎಂದು ಹೇಳಲಾಗುತ್ತದೆ. ಶ್ರೀ ಭೂವಿಜಯರಾಮ
ಚಂದ್ರತೀರ್ಥರು ತೀರ್ಥಯಾತ್ರೆಯಲ್ಲಿದ್ದಾಗಲೂ ಗುರುಶಿಷ್ಯರ ನಡುವೆ ಪತ್ರವ್ಯವಹಾರ ನಡೆಯುತ್ತಿತ್ತು. ಅಧಿಕ ಜೇಷ್ಠ ಶುಕ್ಲ
ಷಷ್ಠಿ ಶಕೆ ೧೭೨೩ ರ ಪತ್ರದಲ್ಲಿ ಗುರುಸ್ವಾಮಿ ಬರೆಯುತ್ತಾರೆ, “ ವೈಶಾಖ ಶುಧ್ಧ ಷಷ್ಠಿ ಯಂದು ರಾಯಸವನ್ನು
ಕಳುಹಿಸಿದರೂ ಉತ್ತರ ಬಂದಿಲ್ಲ. ಆದರೂ ಕೇಳೋಶಿ ಕುಶಸ್ಥಲಿಕಾರ್ ಮತ್ತು ಸುಂಕೇರಿ ಪೇಠಕರ ಅವರ ಜಾತಿಯ ಬಗ್ಗೆ
ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಯಿತು ಎಂಬುದರ ಬಗ್ಗೆ ಬರೆದು ತಿಳಿಸುವದು. ಕಳೆದ ವರ್ಷ ವೆಂಕಟೇಶ ಕಾಮತಿ
ಮಹಾಮಾಯಿ ಅವರು ತಾಮ್ರದ ಹೊಸ ಥಾಲಿಯನ್ನು ದೋಣಿಯಲ್ಲಿ ಪರ್ತಗಾಳಿಗೆ ಕಳುಹಿಸಿದ್ದರು. ಅದು ಪರ್ತಗಾಳಿಗೆ

ತಲುಪಿದ್ದರೆ ಉತ್ತಮ. ಇಲ್ಲದಿದ್ದರೆ ಅದು ಎಲ್ಲಿದೆ ಎಂದು ಹುಡುಕಿ ತೆಗೆದು ವೆಂಕಟೇಶ ಕಾಮತ ಮಹಾಮಾಯಿ ಇವರಿಗೆ
ಪತ್ರ ಬರೆದು ಕಳಿಸಿ ತರಬೇಕು.”