ಶ್ರೀ ಲಕ್ಷ್ಮೀನಾರಾಯಣ ವೆಂಕಟರಮಣ ಮಠ
ಸಂಸ್ಥಾಪಕರು : ಶ್ರೀ ಭೂವಿಜಯರಾಮಚಂದ್ರತೀರ್ಥ (೧೪)
ಸ್ಥಾಪನಾ ವರ್ಷ : ಶಕೆ ಸುಮಾರು ೧೭೧೨ ಸಾಧಾರಣ (ಸುಮಾರು ಕ್ರಿ.ಶ. ೧೭೯೦)
ದೇವ ಪ್ರತಿಮಾ : ಶ್ರೀ ಲಕ್ಷ್ಮೀನಾರಾಯಣ ವೆಂಕಟರಮಣ (ಪಂಚಲೋಹದ ವಿಗ್ರಹ)
ಶಿಲಾನ್ಯಾಸ : ಶ್ರೀಶಕೆ ೧೯೦೦ ಕಾಲಯಕ್ತ ಸಂವತ್ಸರ. ವೈಶಾಕ ಶುಕ್ಲ ದ್ವಾದಶಿ (೧೯/೦೫/೧೯೭೮) ಶ್ರೀ ವಿದ್ಯಾಧಿರಾಜ ತೀರ್ಥರು
ನವೀಕರಣ : ಶ್ರೀ ವಿದ್ಯಾಧಿರಾಜ ತೀರ್ಥ (೨೩) ಶ್ರೀಶಕೆ ೧೯೦೪ ದುಂದುಭಿ, ಫಾಲ್ಗುಣ ಬಹುಳ ದಶಮಿ (೦೮-೦೪-೧೯೮೩)
ಹೊಸ ದೇವಾಲಯ, ಗರ್ಭಗೃಹ, ಗುರು ಭವನ, ಅರ್ಚಕ ನಿವಾಸ ಇತ್ಯಾದಿ.
ಇತರ ಪ್ರತಿಮಾ : ಗರುಡ, ಹನುಮಂತ.
ವಿಳಾಸ : ಶ್ರೀ ಲಕ್ಷ್ಮೀನಾರಾಯಣ ವೆಂಕಟ್ರಮಣ ಮಠ, ಮುಖ್ಯ ರಸ್ತೆ, ಯಲ್ಲಾಪುರ ೫೮೧೩ ೩೫೯,
ಫೋನ ೦೮೪೧೯-೨೬೦೨೨೭
ಭೂವಿಸ್ತೀರ್ಣ : ೪೦೫೦ ಚದರ ಮೀಟರ
ವಾಸ್ತು ವಿಸ್ತಿರ್ಣ : ೩೨೫೦ ಚದರ ಮೀಟರ
ಕಟ್ಟಡದ ವಿವರ : ಗರ್ಭಗ್ರಹ, ಗುರುಭವನ, ಅಗ್ರಶಾಲಾ, ಅರ್ಚಕನಿವಾಸ, ಅನ್ನಪೂರ್ಣ ಪಾಕಶಾಲಾ, ೧೪ ಕೊಠಡಿಗಳು, ಪಾರ್ಕಿಂಗ
ಸ್ಥಳ, ಬಫೆಗಾಗಿ ತೆರೆದ ಪ್ರದೇಶ ಇತ್ಯಾದಿ.
ಶಿಬಿಕಾ : ಮರದ ೨ ಶಿಬಿಕಾ
ಸಭಾಭವನ : ೧. ಶ್ರೀ ವೇದವ್ಯಾಸ ಸಭಾಮಂಟಪ,
: ೨. ರಾಧಾವೈಕುಂಠ ಸಭಾಗ್ರಹ.
: ೩. ಶ್ರೀ ಶ್ರೀನಿವಾಸ ಮಂಟಪ
ಸಮಾಜ ಸೇವೆ : ಜೀವೋತ್ತಮ ಜೀವನಸಾಥಿ (ಶ್ರೀ ವಿದ್ಯಾಧಿರಾಜ ತೀರ್ಥರ ಮಾರ್ಗದರ್ಶನದಲ್ಲಿ ವೈವಾಹಿಕ ವೆಬಸೈಟ)
ಪಂಚಪರ್ವ ಉತ್ಸವ : ವರ್ಧಂತಿ ಉತ್ಸವ : ಫಾಲ್ಗುಣ ಶುಕ್ಲ ದಶಮಿ, ಅನಂತ ಚತುರ್ದಶಿ, ವನಭೋಜನ : ಮಾರ್ಗಶಿರ್ಷ ಪೂರ್ಣಿಮಾ,
ವರಮಹಾಲಕ್ಷ್ಮಿ ವ್ರತ, ಆಷಾಢ ಏಕಾದಶಿ
ಗಣಿತದ ಇತಿಹಾಸ
ಸಹ್ಯಾದ್ರಿ ಪರ್ವತದ ಘಟ್ಟದ ಮೇಲಿನ ಉರುಗಳಲ್ಲೇ ಅತಿ ಪ್ರಾಚಿನ ಮಠ ಯಲ್ಲಾಪುರದ ಶ್ರೀ ಲಕ್ಷ್ಮೀನಾರಾಯಣ ವೆಂಕಟ್ರಮಣ ಮಠ. ಗೋಕರ್ಣ ಮಠ ಪರಂಪರೆಯ ೧೪ನೇ ಯತಿವರ್ಯರಾದ ಶ್ರೀ ಭೂವಿಜಯ ರಾಮಚಂದ್ರ ತೀರ್ಥರು ಯಲ್ಲಾಪುರದ ಮಠವನ್ನು ಸುಮಾರು ಕ್ರಿ.ಶ ೧೭೯೦ರ ಆಸುಪಾಸಿನಲ್ಲಿ ಕಟ್ಟಿದರು.
ಯಲ್ಲಾಪುರ, ಕರಾವಳಿಗೆ ಹೊಂದಿಕೊಂಡಿರುವ ಘಟ್ಟದ ಮೇಲಿನ ದಟ್ಟ ಅರಣ್ಯದಿಂದ ಕೂಡಿದ ಊರು. ಶ್ರೀಮಠದಿಂದ ಘಟ್ಟದ ಮೇಲಿನ ಭಾಗಕ್ಕೆ ಸಂಚರಿಸಲು ಪರ್ತಗಾಳಿ ರಿವಣದಿಂದ ಶ್ರೀಗಳವರ ಸವಾರಿ ಮೇಣೆಯ (ಮಾಚೂಲ) ಮೇಲೆ ಹೊರಟು ಕಾಡುದಾರಿಯಾಗಿ ಕಾಳಿನದಿಯನ್ನು ದಾಟಿ ಘಟ್ಟವನ್ನು ಕ್ರಮಿಸಿ ಯಲ್ಲಾಪುರಕ್ಕೆ ಬರುತ್ತಿತ್ತು. ಇಲ್ಲಿಂದ ಮುಂದೆ ಹುಬ್ಬಳಿ, ಶಿರಸಿ, ಸಿದ್ದಾಪುರ ಇತರ ಪ್ರದೇಶಕ್ಕೆ ಸಂಚರಿಸುತ್ತಿದ್ದರು. ಹೀಗೆ ಘಟ್ಟದ ಮೇಲುಭಾಗಕ್ಕೆ ಬರಲು ಯಲ್ಲಾಪುರ ಮಧ್ಯವರ್ತಿ ಸ್ಥಳವಾಗಿತ್ತು.
ಹಿಂದೆ ಮಂತ್ರಾಲಯದ ರಾಘವೇಂದ್ರ ಯತಿಗಳು ತಮ್ಮ ಸಂಚಾರ ಕ್ರಮದಲ್ಲಿ ಗೋಕರ್ಣಕೇತ್ರವನ್ನು ಸಂದರ್ಶಿಸುವ ಇಚ್ಚೆಯಿಂದ, ಗೋಕರ್ಣದಲ್ಲಿ ವೈಷ್ಣವ ಸಂಪ್ರದಾಯದ ಮಠ ಇರುವದನ್ನು ಅರಿತು ಗೋಕರ್ಣ ಮಠದ ಪೀಠಾಧೀಶರಿಗೆ ಪತ್ರಬರೆದು ತಾವು ತಡಸ ಉರಿಗೆ ಬರುತ್ತಿದ್ದು ಅಲ್ಲಿಂದ ಮುಂದೆ ಯಲ್ಲಾಪೂರ ಮೂಲಕ ಗೋಕರ್ಣದ ಹಾಟಕೇಶ್ವರ ದೇವಸ್ಥಾನಕ್ಕೆ ತಮಗೆ ಕರೆದುಕೊಂಡು ಹೋಗಬೇಕಾಗಿ ಬರೆದ ಪತ್ರವನ್ನು ಕಳಿಸಿದ್ದರು. ಅದರಂತೆ ಗುರುಗಳು ಶ್ರೀರಾಘವೇಂದ್ರ ಗುರುಗಳನ್ನು ಯಲ್ಲಾಪುರದಿಂದ ಗೋಕರ್ಣಕ್ಕೆ ಕರೆದುಕೊಂಡುಹೋಗಿ ಕ್ಷೇತ್ರ ದರ್ಶನಮಾಡಿಸಿ ಆದರಿಸಿ ಸತ್ಕರಿಸಿದ್ದಾರೆ. ಯಲ್ಲಾಪುರ ಮಠದ ಇತಿಹಾಸದಲ್ಲಿ ಇದೊಂದು ಅಪೂರ್ವ ಘಟನೆಯಾಗಿ ಸ್ಮರಣೆಯಲ್ಲಿರುತ್ತದೆ.
ಕಾಲಕ್ರಮದಲ್ಲಿ ವ್ಯಾಪಾರ, ನೌಕರಿಗಾಗಿ ಬಂದ ಜನರು ಯಲ್ಲಾಪುರದಲ್ಲಿ ಮನೆಕಟ್ಟಿ ಇರತೊಡಗಿದರು. ಆನಂತರ ಸಾರಸ್ವತರ ವಸತಿ ಹೆಚ್ಚಿದಂತೆ ಶ್ರೀಮಠವನ್ನು ಸ್ಥಳಾಂತರಿಸಿ ನವೀಕರಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಒಂದು ಎಕರೆ ನೀವೇಶನದಲ್ಲಿ ಶ್ರೀಶಕೆ ೧೯೦೦ ಕಾಲಯಕ್ತ ಸಂವತ್ಸರ. ವೈಶಾಕ ಶುಕ್ಲ ದ್ವಾದಶಿ(೧೯/೦೫/೧೯೭೮) ರಂದು ನೂತನಮಠ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಗರ್ಭಗುಡಿ, ಗುರುಭವನ, ಅರ್ಚಕರ ನಿವಾಸಗಳಿಂದ ಕೂಡಿದ ಮಠವಾಸ್ತುವು ಶ್ರೀಗಳವರ ದಿವ್ಯಕರಕಮಲಗಳಿಂದ ಶ್ರೀಶಕೆ ೧೯೦೪ ದುಂದುಭಿ ಸಂವತ್ಸರ. ಫಾಲ್ಗುಣ ಬಹುಳ ದಶಮಿ(೦೮/೦೪/೧೯೮೩) ಯಂದು ವಿದ್ಯುಕ್ತವಾಗಿ ದೇವಪ್ರತಿಷ್ಠಾಕಾರ್ಯ ನೇರವೇರಿತು. ಮುಂದೆ ಪ್ರತಿವರ್ಷ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮಕ್ಕೆ ಶ್ರೀಗಳ ಆಗಮನದಿಂದ ಯಲ್ಲಾಪುರ ಮಠ ಮತ್ತು ಶಿಷ್ಯವೃಂದವೂ ಅಭಿವೃದ್ಧಿಹೊಂದಿ ೨೦೦೩ ರಲ್ಲಿ ಶ್ರೀಗಳವರ ಚಾತುರ್ಮಾಸ ನೇತ್ರದೀಪಕ ಚಾತುರ್ಮಾಸವಾಗಿ ಪ್ರಸಿದ್ದಿಯಾಯಿತು. ಚಾತುರ್ಮಾಸಕ್ಕೆ ಬೇಕಾದ ಗುರುಭವನದ ನವೀಕರಣ, ವಿಶಾಲ ಸಭಾಭವನ, ವಾಸ್ತವ್ಯದ ಕೊಠಡಿಗಳು, ವೇದವ್ಯಾಸ ಸಭಾಗ್ರಹದಿಂದ ಹಾಗೂ ಯಲ್ಲಾಪುರ ಜನರ ಆದರ ಆಥಿತ್ಯದಿಂದ ಎಲ್ಲರ ಜನಮನದಲ್ಲಿ ಚಾತುರ್ಮಾಸದ ಸ್ಮರಣೆ ಮನೆಮಾಡಿದೆ.