Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

23 Vidyadhiraj Kannada

ಶ್ರೀ ವಿದ್ಯಾಧಿರಾಜ ತೀರ್ಥರು

ಜನ್ಮಸ್ಥಳ : ಶ್ರೀ ದಾಮೋದರ ನಿಲಯ, ನಾಯ್ಕನಕಟ್ಟೆ, ಬೈಂದೂರ ತಾಲೂಕು, ಉಡುಪಿ ಜಿಲ್ಲೆ.
ಜನ್ಮ ನಾಮ : ಸೇನಾಪುರ ರಾಘವೇಂದ್ರ ಲಕ್ಷ್ಮೀನಾರಾಯಣ ಆಚಾರ್ಯ
ಹುಟ್ಟಿದ ದಿನಾಂಕ : ಶ್ರೀ ಶಕೆ 1867 ಪಾರ್ಥಿವ ಸಂವತ್ಸರ ಶ್ರಾವಣ ಶುಕ್ಲ ಚತುರ್ದಶಿ ಬುಧವಾರ
(22/05/1945)
ಸಂನ್ಯಾಸ ದೀಕ್ಷೆ : ಶ್ರೀ ಶಕೆ 1888 ಪರಾಭವ ಸಂವತ್ಸರ ಮಾಘ ಕೃಷ್ಣ ದ್ವಿತೀಯ ಭಾನುವಾರ
(26/02/1967)
ಸಂನ್ಯಾಸ ದೀಕ್ಷಾ ವಯಸ್ಸು : 21 ವರ್ಷ 06 ತಿಂಗಳು 04 ದಿನ
ದೀಕ್ಷಾ ಸ್ಥಳ : ಶ್ರೀ ರಾಮಮಂದಿರ ವಡಾಲಾ, ಮುಂಬೈ
ದೀಕ್ಷಾಗುರು : ಶ್ರೀ ದ್ವಾರಕಾನಾಥ ತೀರ್ಥ (22)
ಗುರುಪೀಠಾರೋಹಣ : ಶ್ರೀ ಶಕೆ 1895 ಪ್ರಮಾಥೀಚ ಸಂವತ್ಸರ ಚೈತ್ರ ಶುಕ್ಲ ದ್ವಿತೀಯ 05/04/1973
ಶಿಷ್ಯತ್ವ : ಶ್ರೀ ವಿದ್ಯಾಧೀಶ ತೀರ್ಥ (24)
ಮಹಾನಿರ್ವಾಣ : ಶ್ರೀ ಶಕೆ 1943 ಪ್ಲವ ಸಂವತ್ಸರ ಆಷಾಢ ಶುಕ್ಲ ದಶಮಿ ಸೋಮವಾರ (19/07/2021)
ವೃಂದಾವನ ಸ್ಥಳ : ಪರ್ತಗಾಳಿ ಮಠ
ಶಿಷ್ಯತ್ವದ ಅವಧಿ : 06 ವರ್ಷಗಳು 01 ತಿಂಗಳು 10 ದಿನಗಳು
ಗುರುಪೀಠದ ಅವಧಿ : 48 ವರ್ಷ 03 ತಿಂಗಳು 14 ದಿನಗಳು
ಸನ್ಯಾಸಾವಧಿ : 54 ವರ್ಷ 04 ತಿಂಗಳು 23 ದಿನಗಳು
ಜೀವಿತಾವಧಿ : 75 ವರ್ಷ 10 ತಿಂಗಳು 27 ದಿನಗಳು
ಮಠದ ಸ್ಥಾಪನೆ: 1. ಕಾಯಂಕುಲಂ (ಕೇರಳ) 1976
2. ಬದರಿಕಾಶ್ರಮ 28/06/1989
3. ಬೆಳಗಾವಿ 18/05/1990
4. ದಾಂಡೇಲಿ 26/03/1992
5. ಮಡಗಾಂವ್ 19/11/1993
6. ಹುಬ್ಬಳ್ಳಿ 30/11/1996
7. ಫೆಬ್ರವರಿ 18/11/2000
8. ಕಂದಲೂರು 03/03/2002
9. ನಾಸಿಕ್ 04/04/2002
10 ಭದ್ರಾವತಿ 14/11/2003
ಸ್ಥಾನಾಂತರ ಪೂರ್ವಕ ಹೊಸ ಮಠ ಸ್ಥಾಪನೆ
1. ಯಲ್ಲಾಪುರ 08/04/1983
2. ಮಂಕಿ ಮಠ 01/06/1983

ಸ್ವಾಮೀಜಿಯ ಇತಿಹಾಸ

ಸಂಪ್ರದಾಯದ ಇಪ್ಪತ್ತೆರಡನೆಯ ಸ್ವಾಮೀಜಿ ಶ್ರೀಮದ್ ದ್ವಾರಕಾನಾಥ ತೀರ್ಥ ಸ್ವಾಮಿಗಳ ಶಿಷ್ಯರಾದ
ಶ್ರೀವಿದ್ಯಾಧಿರಾಜತೀರ್ಥರು ಗಂಗೊಳ್ಳಿಯ ಸೇನಾಪುರ ಲಕ್ಷ್ಮೀನಾರಾಯಣಾಚಾರ್ಯರು ಮತ್ತು ಅವರ ಪತ್ನಿ ಶ್ರೀಮತಿ.
ಶ್ರೀಮತಿ ಬಾಯಿಯವರ ಎರಡನೆಯ ಮಗ. ಹಿಂದಿನ ಆಶ್ರಮದ ಹೆಸರು ರಾಘವೇಂದ್ರಾಚಾರ್ಯ. ಶ್ರೀದ್ವಾರಕಾನಾಥ ತೀರ್ಥ
ಸ್ವಾಮಿಗಳ ಹಿಂದಿನ ಆಶ್ರಮದ ಸೋದರಳಿಯ. ಅವರನ್ನು ಮುಂಬೈ ಸಂಸ್ಥಾನದ ವಡಾಲ ಮಠಕ್ಕೆ ಕರೆದೊಯ್ಯಲಾಯಿತು.
1967ರ ಫೆಬ್ರುವರಿ 26ರಂದುಅವರಿಗೆ ಸಂಭ್ರಮ ಮತ್ತು ಸಡಗರದಿಂದ ಸನ್ಯಾಸ ದೀಕ್ಷೆಯನ್ನು ನೀಡಲಾಯಿತು.
ಕೇವಲ ಶ್ರೀದ್ವಾರಕಾನಾಥ ತೀರ್ಥ ಸ್ವಾಮಿಗಳ ಪೂರ್ವಾಶ್ರಮದ ಸೋದರಳಿಯನೆಂದು ಇವರನ್ನು ಶಿಷ್ಯನೆಂದು ಆಯ್ಕೆ
ಮಾಡಿರಲಿಲ್ಲ. ಶಿಷ್ಯನನ್ನು ಆಯ್ಕೆ ಮಾಡುವ ಸಾಂಪ್ರದಾಯಿಕ ವಿಧಾನವಿದೆ. ಆ ವಿಧಾನದ ಪ್ರಕಾರವೇ ಆಯ್ಕೆ
ಮಾಡಲಾಗಿತ್ತು.ಪ್ರಥಮದಲ್ಲಿ ಗುರುಸ್ವಾಮಿಗಳು ಸಂಭಾವ್ಯ ಐವರನ್ನು ಶಿಷ್ಯಸ್ವಾಮಿಗಾಗಿ ಆರಿಸಿದರು. ನಂತರ ಅವರ
ಜಾತಕಗಳನ್ನು ಸಂಗ್ರಹಿಸಿ ಕೆಲವು ಜ್ಯೋತಿರ್ವಿದ್ವಾನರಿಗೆ ಹಸ್ತಾಂತರಿಸಿದರು. ಈ ಜ್ಯೋತಿಷಿಗಳನ್ನು ಸ್ವಾಮೀಜಿಯವರು
ಉದ್ದೇಶಪೂರ್ವಕವಾಗಿ ಮಠಕ್ಕೆ ಕರೆತಂದಿದ್ದರು. ಅವರಿಗೆ ಕೇವಲ ಜಾತಕಗಳನ್ನು ಮಾತ್ರ ನೀಡಲಾಯಿತು. ಈ ಜಾತಕಗಳು
ಯಾರದು ಎಂಬ ಬಗ್ಗೆ ಈ ಪಂಡಿತರಿಗೆ ಯಾವದೇ ಮಾಹಿತಿ ನೀಡಿರಲಿಲ್ಲ.
ಎಲ್ಲಾ ಐದು ಜಾತಕಗಳನ್ನು ಅಧ್ಯಯನ ಮಾಡಿದ ನಂತರ, ಜ್ಯೋತಿಷಿಗಳು ಸಂನ್ಯಾಸ ಆಶ್ರಮಕ್ಕೆ ಹೆಚ್ಚು ಸೂಕ್ತವಾದದನ್ನು
ಆರಿಸಿ ಶ್ರೀದ್ವಾರಕಾನಾಥ ತೀರ್ಥ ಸ್ವಾಮಿಗಳಿಗೆ ಹಸ್ತಾಂತರಿಸಿದರು, ನಂತರ ಗುರುಸ್ವಾಮಿಗಳು ಇದು ರಾಘವೇಂದ್ರ
ಆಚಾರ್ಯರಿಗೆ ಸಂಬಂಧಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ವಮಠದ ಅನೇಕ ಅನುಯಾಯಿಗಳು
ಉಪಸ್ಥಿತರಿದ್ದರು. ಅವರೆಲ್ಲ ಈ ಆಯ್ಕೆಯನ್ನು ಸ್ವಾಗತಿಸಿದರು. ನಂತರ, ಕೆಲವು ಹಿತೈಷಿಗಳ ಒಂದು ನಿಯೋಗವನ್ನು
ವಟುವಿನ ಪೋಷಕರ ಹತ್ತಿರ ಕಳುಹಿಸಲಾಯಿತು. ಅವರು ಘಟನೆಯ ವಿವರವನ್ನು ಲಕ್ಷ್ಮೀನಾರಾಯಣಾಚಾರ್ಯರಿಗೆ
ತಿಳಿಸಿದರು. ಅವರು ಮತ್ತು ಅವರ ಧರ್ಮಪತ್ನಿಯವರು ತಮ್ಮ ನಿಯತ ಕರ್ತವ್ಯವನ್ನು ಲಕ್ಷದಲ್ಲಿಟ್ಟುಕೊಂಡು ವಟುವನ್ನು
ಶಿಷ್ಯನಾಗಿ ನೀಡಲು ಒಪ್ಪಿಕೊಂಡರು. ಆ ಬಳಿಕ ಸುದ್ದಿ ಎಲ್ಲೆಡೆ ಹಬ್ಬಿ ಎಲ್ಲರೂ ವಟುವಿನ ಆಯ್ಕೆಯ ಬಗ್ಗೆ ಸಂತಸ
ವ್ಯಕ್ತಪಡಿಸಿದರು. ನಂತರ, ಮೇಲೆ ಹೇಳಿದಂತೆ, ಅವರಿಗೆ ವಡಾಲ ಮಠದಲ್ಲಿ ಆಶ್ರಮವನ್ನು ನೀಡಲಾಯಿತು ಮತ್ತು ಅವರ
ಪೂರ್ವಾಶ್ರಮದ ಹೆಸರನ್ನು ಶ್ರೀ ವಿದ್ಯಾಧಿರಾಜ ತೀರ್ಥ ಎಂದು ಮರುನಾಮಕರಣ ಮಾಡಲಾಯಿತು.
ಗುರುಸ್ವಾಮಿಯವರ ಒಡನಾಟ ಶಿಷ್ಯ ಸ್ವಾಮಿಗಳಿಗೆ ಆರು ವರ್ಷಗಳಿಗೂ ಹೆಚ್ಚು ಕಾಲ ದೊರಕಿತು. ಈ ಅವಧಿಯಲ್ಲಿ
ಗುರುಸ್ವಾಮಿಯವರು ತಮ್ಮ ಶಿಶ್ಯನ ಅಧ್ಯಯನಕ್ಕೆ ತಮ್ಮ ಸಂಪೂರ್ಣ ಗಮನವನ್ನು ಮೀಸಲಿಟ್ಟರು, ಅಷ್ಟೇ ಅಲ್ಲ, ಅವರ
ದೃಷ್ಟಿ ವಿಶಾಲವಾಗಿರಬೇಕು, ಸಮಾಜಮುಖಿಯಾಗಬೇಕು, ಆಧುನಿಕ ವಿಜ್ಞಾನಗಳ ಜ್ಞಾನವನ್ನು ಹೊಂದಿರಬೇಕು ಮತ್ತು
ಆಧ್ಯಾತ್ಮಿಕತೆಯಲ್ಲಿಯೂ ಪ್ರವೀಣರಾಗಬೇಕು. ತತ್ವಶಾಸ್ತ್ರ, ವೇದ ವೇದಾಂತ ಇತ್ಯಾದಿ ಶಾಸ್ತ್ರಗಳಲ್ಲಿಯೂ ಕೂಡ
ಪಾರಂಗತರಾಗಿರಬೇಕು ಎಂಬುವದು ಗುರುಸ್ವಾಮಿಗಳ ಇಂಗಿತವಾಗಿದ್ದು ಅದರ ಬಗ್ಗೆ ಅವರು ಸಂಪೂರ್ಣ ಗಮನವಿಟ್ಟರು.
ತಾವು ಹೋದ ಕಡೆಯಲ್ಲೆಲ್ಲ ಶಿಷ್ಯನನ್ನು ಜೊತೆಗೂಡಿಸಿಕೊಂಡರು. ಮೂಲತಃ ಶ್ರೀವಿದ್ಯಾಧಿರಾಜತೀರ್ಥರು ಕನ್ನಡ ಮತ್ತು
ಇಂಗ್ಲಿಷ್ ಶಿಕ್ಷಣದ ಲಾಭ ಪಡೆದಿದ್ದರು. ಕೊಂಕಣಿ ಮಾತೃಭಾಷೆಯಾಗಿತ್ತು. ಅವರು ಮರಾಠಿ ಮತ್ತು ಹಿಂದಿ ಭಾಷೆಗಳ
ಜ್ಞಾನವನ್ನೂ ಪಡೆದರು. ಈ ವಿವಿಧ ಭಾಷೆಗಳ ಅಧ್ಯಯನದಿಂದಾಗಿ ಶ್ರೀವಿದ್ಯಾಧಿರಾಜತೀರ್ಥ ಸ್ವಾಮಿಗಳು ಅನೇಕ
ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಕೇವಲ ಮಾತನಾಡುವದಷ್ಟೇ ಅಲ್ಲದೇ ಅವರು ಈ ಭಾಷೆಗಳಲ್ಲಿ ಉತ್ತಮ
ವಾಂಗ್ಮಿಗಳಾಗಿದ್ದರು. ಪಟ್ಟಾಭಿಷೇಕದ ನಂತರ ಅವರು ಮಾಡಿದ ಆಶೀರ್ವಾದ ಭಾಷಣವು ಅವರ ಪ್ರಪ್ರಥಮ ಜಾಹೀರ
ಭಾಷಣವಾಗಿದ್ದರೂ ಕೂಡ ಅವರಿಗೆ ವಾಕ್ಚಾತುರ್ಯದ ಗುಣಗಳಿವೆ ಎಂದು ಹಲವರು ಊಹಿಸಿದ್ದು ನಿಜವಾಗಿತ್ತು.
ಶ್ರೀದ್ವಾರಕಾನಾಥ ತೀರ್ಥ ಸ್ವಾಮಿಗಳು ಮಾರ್ಚ್ 25, 1973 ರಂದು ಹಠಾತ್ ಸಮಾಧಿ ಹೊಂದಿದರು. ಹನ್ನೆರಡು ದಿನಗಳ
ನಂತರ, ಶಕೆ 1895 ಚೈತ್ರ ಶುದ್ಧ ದ್ವಿತೀಯ,ಏಪ್ರಿಲ್ 5, 1973 ರಂದು ಶಿಷ್ಯಸ್ವಾಮಿಗಳ ಪಟ್ಟಾಭಿಷೇಕವಾಯಿತು. ಅಂದು
ಪರ್ತಗಾಳಿ ಮಠದಲ್ಲಿ ಗೋವಾ, ಮುಂಬೈ ಮತ್ತು ದಕ್ಷಿಣ ಕನ್ನಡ ಉತ್ತರ ಕನ್ನಡ ಜಿಲ್ಲೆಗಳಿಂದ ಅಸಂಖ್ಯ ಶಿಷ್ಯರು
ಜಮಾಯಿಸಿದ್ದರು. ಇದೇ ವೇಳೆ ಸ್ವಾಮೀಜಿಯವರ ಮೊದಲ ಸಾರ್ವಜನಿಕ ಭಾಷಣ ನಡೆಯಿತು. ಶ್ರೀ
ವಿದ್ಯಾಧಿರಾಜಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೂ ಗುರುಗಳಂತೆ ಮಠದ ನಿರ್ವಹಣೆಗೆ ಹೆಚ್ಚಿನ ಗಮನ
ನೀಡುತ್ತಿದ್ದರು. ಜನರೊಂದಿಗೆ ಸಂಬಂಧ ಜೋಡಿಸುವ ಕಲೆ ಅವರಲ್ಲಿತ್ತು. ಸಮಾಜಸೇವೆಯಲ್ಲಿ ಅವರಿಗೆ ಆಸಕ್ತಿ ಇತ್ತು.
ಪಟ್ಟಾಭಿಷೇಕದ ನಂತರ ಖಂಡೋಲೆಯ ಶ್ರೀಗಣಪತಿ ದೇವಸ್ಥಾನದ ಸಭಾಮಂಟಪದ ಉದ್ಘಾಟನೆ ಅವರ ಪ್ರಪ್ರಥಮ

ಸಾರ್ವಜನಿಕ ಕಾರ್ಯಕ್ರಮವಾಗಿತ್ತು. ಈ ಸಮಯದಲ್ಲಿ ಅವರ ಲೋಕಸಂಗ್ರಹ ವೃತ್ತಿ ಕಂಡುಬಂದಿತು. ಗೋವಾದ ದಿವಂಗತ
ಮುಖ್ಯಮಂತ್ರಿ ದಿ. ದಯಾನಂದ ಬಾಂದೋಡ್ಕರ್‌ಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಅವರು ಸಾಮಾನ್ಯ ಜನರಿಗೆ
ನೀಡುತ್ತಿದ್ದರು.
ಕಾಕತಾಳೀಯವೆಂಬಂತೆ 1973ರಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥರು ಶ್ರೀಗುರು ಪೀಠಕ್ಕೆ ಬಂದ ದಿನವೇ ಶ್ರೀ ಸಂಸ್ಥಾನ
ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ಥಾಪನೆಯ ದಿನ. ಐದು ಶತಮಾನಗಳನ್ನು ಪೂರೈಸುವ ಹೊಸ್ತಿಲಲ್ಲಿರುವ
ಶ್ರೀಮಠವು ಇಪ್ಪತ್ತೆರಡು ಸದ್ಭಕ್ತ ಸ್ವಾಮೀಜಿಗಳ ಅಖಂಡ ಪರಂಪರೆಯನ್ನು ಹೊಂದಿತ್ತು. ಶ್ರೀ ವಿದ್ಯಾಧಿರಾಜ ತೀರ್ಥರು
ಪರಂಪರೆಯಲ್ಲಿ ಇಪ್ಪತ್ತಮೂರನೆಯ ಸ್ವಾಮಿಗಳು.
ಶ್ರೀ ಗುರುಪೀಠಕ್ಕೆ ಬಂದ ಕೂಡಲೇ ಶ್ರೀಮಠ ಸ್ಥಾಪನೆಯ ಪಂಚ ಶತಮಾನೋತ್ಸವವನ್ನು ಆಚರಿಸುವ ಇಂಗಿತವನ್ನು
ವ್ಯಕ್ತಪಡಿಸಿದರು. ಆದರೆ ಅವರು ವಾರಣಾಸಿ ಕ್ಷೇತ್ರದಲ್ಲಿ ಶ್ರೀಸಂಸ್ಥಾನದ ಹಳೆಯ ಮಠವನ್ನು ನವೀಕರಿಸುವ ಮೂಲಕ ತಮ್ಮ
ಕಾರ್ಯಭಾರವನ್ನು ಪ್ರಾರಂಭಿಸಿದರು. ಶ್ರೀಗುರುಪೀಠಾರೋಹಣದ ರಜತ ಮಹೋತ್ಸವದ ವರ್ಷದಲ್ಲಿ (1998) ಅವರು
ಅತ್ಯಂತ ದುರ್ಲಭ ಶ್ರೀ ಶೈಲಕ್ಷೇತ್ರದ (ದಾಮೋದರಕುಂಡ) ಯಾತ್ರೆ ಮಾಡಿ ವಾಸ್ಕೋ (ಗೋವಾ) ನಲ್ಲಿ ಭವ್ಯವಾದ ಹೊಸ
ಮಠವಾಸ್ತುವನ್ನು ನಿರ್ಮಿಸಿದರು.
19ನೇ ಮಾರ್ಚ್ 1999 ರಂದು (ಚೈತ್ರ ಶುಕ್ಲ ದ್ವಿತೀಯ, ಶಕೆ 1921) ಪರ್ತಗಾಳಿಯಲ್ಲಿನ ಮೂರು ಅಂತಸಿತ್ನ ಭವ್ಯ
ಝೀರ್ಣೋಧ್ಧಾರ ಮಾಡಿ ವಿಸ್ತರಿಸಿದ ವಾಸ್ತುವನ್ನು ವಿದಿವತ್ತಾಗಿ ಉದ್ಘಾಟಿಸಿದರು. ಕಳೆದ 31 ವರ್ಷಗಳಲ್ಲಿ ಮಾಡಿದ
ಕೆಲಸವನ್ನು ಹಿಂದಿನ ಐನೂರು ವರ್ಷಗಳಲ್ಲಿ ಮಾಡಲಾಗಿರಲಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಸ್ವಾಮೀಜಿಯವರು ಮಾಡಿದ ಎಲ್ಲಾ ಸಂಕಲ್ಪಗಳು ನೆರವೇರಿದವು. ಅಂತಹ ಕಾರ್ಯಗಳಲ್ಲಿ, ಹಳೆಯ ಮಠಗಳ
ಜೀರ್ಣೋದ್ಧಾರ ಮತ್ತು ವಿಸ್ತರಣೆ, ನೂತನವಾಗಿ ಸ್ಥಾಪಿಸಿದ ಸಾರಸ್ವತ ಸಮುದಾಯದ ಪ್ರದೇಶಗಳಲ್ಲಿ ನೂತನ ಮಠಗಳ
ನಿರ್ಮಾಣ, ಶ್ರೀಮಠದ ಕಕ್ಷೆಯಲ್ಲಿ ದೇವಾಲಯಗಳ ಜೀರ್ಣೋದ್ಧಾರ ಮತ್ತು ಆ ದೇವಾಲಯಗಳಲ್ಲಿ ಹೊಸ ವಿಗ್ರಹಗಳ
ಪ್ರತಿಷ್ಠಾಪನೆ, ಯಜ್ಞಯಾಗ ಅನುಷ್ಠಾನದ ಮೂಲಕ ಧರ್ಮ ಮತ್ತು ಧಾರ್ಮಿಕತೆಯನ್ನು ಬಲಪಡಿಸಿದರು. ಬೇರೆ ಬೇರೆ
ಪ್ರದೇಶದಲ್ಲಿ ಚಾತುರ್ಮಾಸ ವೃತವನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಲ್ಲಿಯ ಸಮಾಜ ವೃಂದದ ನಡುವೆ ಕುಲದೇವರು
ಮತ್ತು ಗುರುಪೀಠದ ಮೇಲಿನ ಶೃಧ್ಧೆಯನ್ನು ಭೆಳೆಸಿದರು. ಸನ್ಯಾಸ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವೃತಗಳನ್ನು
ಕರ್ತವ್ಯನಿಷ್ಠೆಯಿಂದ ಪಾಲಿಸುವ ಮೂಲಕ ತಮ್ಮ ವೈಯಕ್ತಿಕ ಆಧ್ಯಾತ್ಮ ಸಾಧನೆ ಮತ್ತು ಸ್ವಾಧ್ಯಾಯರೂಪಿ
ಜ್ಞಾನಾರ್ಜನೆಯಮಹಾಯಜ್ಞವನ್ನು ಅಖಂಡವಾಗಿ ಮುಂದುವರೆಸಿದರು.
ಇಪ್ಪತ್ತನೇ ಶತಮಾನದ ಅಂತ್ಯದ ವೇಳೆಗೆ, ಶ್ರೀಸ್ವಾಮೀಜಿಯವರು ಶ್ರೀಗುರುಪೀಠಕ್ಕೆ ಆಗಮಿಸಿದರು ಮತ್ತು ಶ್ರೀಮಠದ
ಅಡಿಪಾಯವನ್ನು ಬಲಪಡಿಸುವ ಮತ್ತು ವಿಸ್ತರಿಸುವ ಮೂಲಕ ಸಮಾಜವನ್ನು ಹೆಚ್ಚು ಸಂಘಟಿತವಾಗಿ
ಮುಂದುವರೆಯುವಂತೆ ಮಾಡಿದರು, ಇಪ್ಪತ್ತೊಂದನೇ ಶತಮಾನದ ಸಂಭಾವ್ಯ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು
ಬೆಳೆಸಿಕೊಟ್ಟರು. ಸಂಪ್ರದಾಯವನ್ನು ಮುರಿಯದೆ ಎರಡು ಶತಮಾನಗಳನ್ನು ಜೋಡಿಸುವ ಅವರು ಮಾಡಿದ ಕೆಲಸಕ್ಕೆ
ಇತಿಹಾಸವೇ ಸಾಕ್ಷಿ.
ಪೀಠಕ್ಕೆ ಬಂದಾಗಿನಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ವ್ಯಾಪ್ತಿ ವಿಸ್ತಾರಪಡಿಸುತ್ತಲೇ ಬಂದರೂ
ಪೂಜ್ಯ ಸ್ವಾಮೀಜಿಯವರು ತಮ್ಮ ಸ್ವಾಧ್ಯಾಯ ಸಾಧನೆಯನ್ನು ಅವಿರತವಾಗಿ ಮುಂದುವರಿಸಿದರು. 1998ರಲ್ಲಿ
ಕಲ್ಯಾಣಪುರದಲ್ಲಿ ಪ್ರಾರಂಭಿಸಿದ ಶ್ರೀಮನ್ನ್ಯಾಯಸುಧಾ ಪಾಠವನ್ನು ಇದೇ ಸ್ಥಳದಲ್ಲಿ ಯಶಸ್ವಿಯಾಗಿ ಮುಗಿಸಿದ್ದು ಈ
ಸಾಧನೆಯ ಕಳಶ.
ಪರ್ತಗಾಳಿ ಮಠದಲ್ಲಿ ಜೀವೋತ್ತಮ ವೈದಿಕ ಪಾಠಶಾಲೆಯ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ
ಶಿಸ್ತುಬದ್ಧ ಅಭ್ಯಾಸಕ್ರಮದ ಮೂಲಕ ವೇದಗಳು, ಸಂಸ್ಕೃತ, ಧರ್ಮಶಾಸ್ತ್ರ, ಜ್ಯೋತಿಷ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ.
ಪ್ರತಿ ವರ್ಷ ಸುಮಾರು ಐವತ್ತು ವಿದ್ಯಾರ್ಥಿಗಳು ಈ ಶಾಲೆಯಿಂದ ಅಭ್ಯ್ಶಕ್ರಮವನ್ನು ಪೂರ್ಣಗೊಳಿಸುತ್ತಾರೆ. ಐದು ವರ್ಷಗಳ
ಅಭ್ಯ್ಶಕ್ರಮದ ಈ ಗುರುಕುಲ ದೇಶಾದ್ಯಂತ ಖ್ಯಾತಿ ಗಳಿಸಿದೆ.

ಮಠ ಕ್ಷೇತ್ರದ ಹೊರಗೆ ಹೋಗಿ ಸಮಾಜದ ದುಃಖಗಳನ್ನು ಗುರುತಿಸಿ ಅವುಗಳನ್ನು ದೂರಪಡಿಸಲು ಸ್ವಾಮಿ ದ್ವಾರಕಾನಾಥ
ವಿಷ್ವಸ್ ಮಂಡಲಿ ಮತ್ತು ಶ್ರೀ ವಿದ್ಯಾಧಿರಾಜ್ ಧರ್ಮದಾಯ ವಿಶ್ವಸ್ಥ ಮಂಡಳಿ ಎಂಬ ಹೆಸರಿನ ಎರಡು ಚಾರಿಟೇಬಲ್
ಟ್ರಸ್ಟಗಳನ್ನು ಸ್ಥಾಪಿಸಿದರು.. ಈ ವಲಯಗಳು ಶಿಕ್ಷಣ, ಆರೋಗ್ಯ, ಸಾಮಾಜಿಕ ಸಂಸ್ಕಾರ ಇತ್ಯಾದಿ ಕ್ಷೇತ್ರದಲ್ಲಿ ಸಮಾಜಕ್ಕೆ
ಸಹಾಯ ಮಾಡುತ್ತಿವೆ. - ಕಳೆದ ಮೂವತ್ಮೂರು ವರ್ಷಗಳಲ್ಲಿ ಸ್ಥಳೀಯ ದೇವತೆಗಳ ಸನ್ನಿಧಾನದಲ್ಲಿ ಪೂಜ್ಯ
ಸ್ವಾಮೀಜಿಯವರ ಸಮ್ಮುಖದಲ್ಲಿ ಮಠಾನುಯಾಯಿ ವರ್ಗದವರಿಂದ ಧಾರ್ಮಿಕ ಹೋಮಹವನ ನೆರವೇರಿದವು. ಇವುಗಳಲ್ಲಿ
ಸಹಸ್ರಕುಂಭ ಮಹಾವಿಷ್ಣು, ಅತಿವಿಷ್ಣು ಮಹಾಸುದರ್ಶನ, ಅತಿರುದ್ರ, ಶತಕೋಟಿ ರಾಮನಾಮ ಮಹಾರುದ್ರ, ಶತಚಂಡಿ,
ರಕ್ಷತ್ರಯ ಹವನ ಇತ್ಯಾದಿ ಯಜ್ಞಗಳು ಸೇರಿರಿತ್ತವೆ.
ಶ್ರೀ ವಿದ್ಯಾಧಿರಾಜ ತೀರ್ಥರಿಂದ ಜರುಗಿದ ಮಠದ ಜೀರ್ಣೋದ್ಧಾರ
1. ವಾರಣಾಸಿ (1975),
2. 2-4. ಬಸ್ರೂರು, ಕಾರವಾರ, ವೆಂಕಟಾಪುರ (1979),
3. 5. ಗೋಕರ್ಣ ___ (1981),
4. 6. ಭಟ್ಕಳ (1981),
5. 7. ಪರ್ತಗಾಳಿ ಮಠ (1984, 86, 99)
8. ಅಂಕೋಲಾ (1988), 9. ಮಂಗಳೂರು (ನವಗ್ರಹ ಪ್ರತಿಷ್ಠಾ) (೧೯೯೧), ೧೦. ಗಂಗೊಳ್ಳಿ (೧೯೮೮), ೧೧.
ಬೆಂಗಳೂರಿನಲ್ಲಿರುವ ಒಂದು ಸಣ್ಣ ಮಠವನ್ನು ಭವ್ಯ ಸ್ಮಾರಕವನ್ನಾಗಿ ರೂಪಾಂತರ (1985), 12. ವಾಸ್ಕೋದ
ಮಠವಾಸ್ತುವಿನ ಪಕ್ಕದಲ್ಲಿ ಬಹುಮಹಡಿ ಭವ್ಯ ಕಟ್ಟಡ (1998).
- ನೂತನ ಮಠವಾಸ್ತು:
1. ಯಲ್ಲಾಪುರ (೧೯೮೩), ೨. ಮಂಕಿ (1983), 3. ಹುಬ್ಬಳ್ಳಿ (1989), 4. ಬದರಿಕಾಶ್ರಮ (1989), 5. ಬೆಳಗಾವಿ
(1990), 6. ದಾಂಡೇಲಿ (1992), 7. ಮಡಗಾಂವ್ (1993), 8. ಪರ್ವರಿ (2000), 9. ಭದ್ರಾವತಿ (೨೦೦೩), ೧೦.
ನಾಸಿಕ (2002), 11. ಕಂಡ್ಲುದಲೂರ (2002).
ಹಳೆಯ ಮಠಗಳಲ್ಲಿ ಕಲ್ಯಾಣ ಮಂಟಪಗಳ ನಿರ್ಮಾಣ
(1) ಭಟ್ಕಳ (ಶ್ರೀನಾರಾಯಣತೀರ್ಥ ಕಲ್ಯಾಣ ಮಂಟಪ) - 1981,
(2) ಮಂಗಳೂರು (ಶ್ರೀದ್ವಾರಕಾನಾಥ ಭವನ) -1982,
(3) ರೇವಣ (ಶ್ರೀ ರಾಮಚಂದ್ರ ತೀರ್ಥ ಮಂಟಪ) - 1984,
(4) ಗಂಗೊಳ್ಳಿ (ಶ್ರೀದ್ವಾರಕಾನಾಥ ತೀರ್ಥ ಸಭಾಂಗಣ) - 1984,
(5) ಬೆಂಗಳೂರು (ಶ್ರೀವಿದ್ಯಾಧಿರಾಜ್ ಸಭಾಂಗಣ) - 1985,
(6) ಅಂಕೋಲಾ (ಶ್ರೀವಿದ್ಯಾಧಿರಾಜ ಸಭಾಂಗಣ) - 1989,
(7) ಡಿಚೋಲಿ (ಶ್ರೀ ಅಣುಜೀವೋತ್ತಮತೀರ್ಥ ಮಂಟಪ) - 1996,
(8) ಕಾರವಾರ (ಶ್ರೀ ಇಂದಿರಾಕಾಂತ ಸಭಾಂಗಣ) -2001.
ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿಯವರು ತಮ್ಮ ಆಳ್ವಿಕೆಯಲ್ಲಿ ಮಠ ಪರಂಪರೆಯಲ್ಲಿನ ಬಹುತೇಕ ಯತಿಗಳ
ವೃಂದಾವನಗಳ ಜೀರ್ಣೋದ್ಧಾರ ಮಾಡಿದರು. ಪೂಜ್ಯ ವಿದ್ಯಾಧಿರಾಜತೀರ್ಥ ಸ್ವಾಮೀಜಿಯವರು ಹಲವು
ದೇವಸ್ಥಾನಗಳಲ್ಲಿ ನೂತನ ವಿಗ್ರಹ ಪ್ರತಿಷ್ಠೆ ನೆರವೇರಿಸಿದರು.
ಮೂಲ ಮಠವನ್ನು ವಾರಣಾಸಿ ಪ್ರದೇಶದಲ್ಲಿ ಸ್ಥಾಪನೆ ಮಾಡಿದ್ದು ಶ್ರೀ ನಾರಾಯಣ ತೀರ್ಥರು. ಮಠ ಮತ್ತು ಸಮಾಜದ
ನಡುವಿನ ಸಂಬಂಧವು ಹೇಗಿರಬಹುದು ಮತ್ತು ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದ ಕಾರಣ, ಆ ಕಾಲದಲ್ಲಿ
ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ತಮ್ಮ ಮಠ ಸಂಪ್ರದಾಯದ ಪತಾಕೆಯನ್ನು ಹಾರಿಸುವದು, ಮತ್ತು ಪುಣ್ಯ ಪ್ರಾಪ್ತಿಗಾಗಿ ದೂರ
ದೂರ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುವುದು ಇದೇ ಮಠಗಳನ್ನು ಸ್ಥಾಪಿಸುವ ಮುಖ್ಯ
ಉದ್ದೇಶ ಆಗಿರುತ್ತಿತ್ತು.