ಶ್ರೀಮದ್ ಪುರುಷೋತ್ತಮ ತೀರ್ಥ
ದೀಕ್ಷಾಗುರು : ಶ್ರೀ ಜೀವೋತ್ತಮ ತೀರ್ಥರು (೩)
ದೀಕ್ಷಾ ಸ್ಥಳ : ಭಟ್ಕಳ ವಡೇರ ಮಠ
ಗುರು ಪೀಠಾರೋಹಣ : ೧೫೧೦ ಭಾದ್ರಪದ
ಶಿಷ್ಯ ಸ್ವೀಕಾರ : ಶ್ರೀ ಅಣುಜೀವೋತ್ತಮ ತೀರ್ಥರು (೫)
ಮಹಾನಿರ್ವಾಣ : ೧೫೧೦ ಸರ್ವಧಾರಿ ಸಂವತ್ಸರ ಮಾರ್ಗಶೀರ್ಷ ಕೃಷ್ಣ-೨ ಸೋಮವಾರ (೦೫-೧೨-೧೫೮೮)
ವೃಂದಾವನ ಸ್ಥಳ : ಗೋಕರ್ಣದ ಬ್ರಾಹ್ಮಣರ ರುದ್ರಭೂಮಿ.
ಗುರುಪೀಠದ ಕಾಲಾವಧಿ : ೩ ತಿಂಗಳು ೦೮ ದಿನಗಳು
ಗ್ರಂಥರಚನೆ : ೧. ಕರ್ಮಸಿದ್ಧಾಂತ
೨. ಸಂನ್ಯಾಸ ಪದ್ಧತಿ
ಸ್ವಾಮೀಜಿಯ ಇತಿಹಾಸ
ಕರ್ಮಸಿದ್ಧಾನ್ತಸಂನ್ಯಾಸಪದ್ಧತ್ಯಾದಿಕೃತಂ ಗುರುಮ್ ।
ಶ್ರಯೇ ಶ್ರೌತಾದಿಧರ್ಮೋಪದೇಷ್ಟಾರಂ ಪುರುಷೋತ್ತಮಮ್॥
ಶ್ರೀ ಪುರುಷೋತ್ತಮ ತೀರ್ಥರು ಶ್ರೀ ಜೀವೋತ್ತಮ ತೀರ್ಥರ ಶಿಷ್ಯರು. ಶ್ರೀ ಜೀವೋತ್ತಮತೀರ್ಥರು ಅವರಿಗೆ
ಭಟ್ಕಳದಲ್ಲಿ ಆಶ್ರಮವನ್ನು ನೀಡಿದರು ಮತ್ತು ಗುರುಗಳ ನಿರ್ವಾಣದ ನಂತರ ಅವರಿಗೆ ೧೫೧೦ರ ಭಾದ್ರಪದ ಮಾಸದಲ್ಲಿ
ಪಟ್ಟಾಭಿಷೇಕವಾಯಿತು. ಈ ಆಚಾರ್ಯರಿಗೆ ಸಂಸ್ಕಾರದ ಅರಿವಿತ್ತು. ನಿತ್ಯಕರ್ಮ ವ್ಯರ್ಥವಾಗಬಾರದೆಂದು,
ಶ್ರೌತಸ್ಮಾರ್ತಕರ್ಮವನ್ನು ಬ್ರಾಹ್ಮಣರು ಮಾಡಲೇಬೇಕೆಂದು ‘ಕರ್ಮಸಿದ್ಧಾಂತ’ ಎಂಬ ಗ್ರಂಥವನ್ನು ಬರೆದರು. ‘ಸಂನ್ಯಾಸಪದ್ದತಿ’
ಎಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾರೆ. ಶ್ರೀ ಪುರುಷೋತ್ತಮ ತೀರ್ಥರು ಶ್ರೀ ಅಣುಜೀವೋತ್ತಮ ಎಂಬ ಶಿಷ್ಯರಿಗೆ
ಆಶ್ರಮದೀಕ್ಷೆ ನೀಡಿ ೧೫೧೦ರ ಸರ್ವಧಾರಿ ಸಂವತ್ಸರ ಮಾರ್ಗಶೀರ್ಷ ವದ್ಯ ದ್ವಿತೀಯದಂದು ಗೋಕರ್ಣದಲ್ಲಿ
ವೃಂದಾವನಸ್ಥರಾದರು. ಗೋಕರ್ಣದಲ್ಲಿಯ ಬ್ರಾಹ್ಮಣರ ರುದ್ರಭೂಮಿಯ ಸಮೀಪ ಅವರ ವೃಂದಾವನವಿದೆ.