Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

3 Gokarn Kannada

ಜೀವೋತ್ತಮ ಮಠ, ಗೋಕರ್ಣ

ಸಂಸ್ಥಾಪಕರು : ಶ್ರೀ ಜೀವೋತ್ತಮ ತೀರ್ಥ (೩)
ಸ್ಥಾಪನಾ ವರ್ಷ : ಶಕ ೧೪೬೭ ವಿಶ್ವಾವಸು ಸಂವತ್ಸರ, (೧೫೪೫) ಕೋಟಿತೀರ್ಥದ ಹತ್ತಿರ
ದೇವ ಪ್ರತಿಮಾ : ಶ್ರೀ ಭೂವಿಜಯ ವಿಠ್ಠಲ (ಪಂಚಲೋಹ) (ಶ್ರೀ ಜೀವೋತ್ತಮ ತೀರ್ಥ ಸ್ವಾಮೀಜಿಯವರಿಗೆ ಗಂಡಕಿ
ಯಾತ್ರೆಯಲ್ಲಿ ಪ್ರಾಪ್ತವಾಗಿದ್ದು).
ನವೀಕರಣ : ಶ್ರೀ ರಾಮಚಂದ್ರ ತೀರ್ಥರಿಂದ (೬) ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಪುನರ್ನಿರ್ಮಾಣ : ೧೮೧೧ ರಲ್ಲಿ ಶ್ರೀ ಲಕ್ಷ್ಮೀನಾಥ ತೀರ್ಥರು (೧೬).
ಇತರೆ ಪ್ರತಿಮಾ : ೧೮೧೩ ರಲ್ಲಿ ಶ್ರೀ ಲಕ್ಷ್ಮೀನಾಥ ತೀರ್ಥರಿಂದ (೧೬) ಪರ್ತಗಾಳಿಯಲ್ಲಿನ ಮಠದ ಮುಂದಿನ ಮಾರುತಿ ಗುಡಿಗೆ
ಇದ್ದಂತಹ ಗೋಪುರ: ಗರುಡ, ಹನುಮಂತ (ಕಲ್ಲಿನ ವಿಗ್ರಹ)
ದ್ವಾರಪಾಲಕ : ೪ ಅಡಿ ಎತ್ತರದ ಕಾಷ್ಠ ಜಯ ವಿಜಯ ವಿಗ್ರಹ
ವಿಳಾಸ : ಶ್ರೀ ಜೀವೋತ್ತಮ ಮಠ, ಮುಖ್ಯ ರಸ್ತೆ, ಗೋಕರ್ಣ, ತಾ. ಕುಮಟಾ.
ವೃಂದಾವನ : ೧) ಶ್ರೀ ಪುರುಷೋತ್ತಮ ತೀರ್ಥ (೪) ಶಕೆ ೧೫೧೦ ಸರ್ವಧಾರಿ, ಮಾರ್ಗಶೀರ್ಷ ಬಹುಳ ದ್ವಿತೀಯ.
: ೨) ಶ್ರೀ ಕಮಲಾಕಾಂತ ತೀರ್ಥ (೧೨) ಶಕೆ ೧೬೭೯ ಈಶ್ವರ, ಪುಷ್ಯ ಶುಕ್ಲ ಅಷ್ಟಮಿ.
ಶಿಖರ ಕಲಶ : ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ (೨೩) ಅವರಿಂದ ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ
ಒಟ್ಟು ಪ್ರದೇಶ : ೯೫೦೦ ಚದರ ಮೀಟರ
ಕಟ್ಟಡದ ವಿವರ : ಗರ್ಭಗ್ರಹ, ಅರ್ಚಕ ನಿವಾಸ, ಸಂಧ್ಯಾಮಂಟಪ, ಅಗ್ರಶಾಲಾ, ಹನುಮಾನ ಗೋಪುರ, ಗುರು ಭವನ
ಪಂಚ ಪರ್ವ ಉತ್ಸವ : ವನಭೋಜನ - ಕಾರ್ತೀಕ ಪೂರ್ಣಿಮಾ, ಪ್ರತಿಷ್ಟಾ ವರ್ಧಂತಿ.

ಗಣಿತದ ಇತಿಹಾಸ

ಮಠ ಪರಂಪರೆಯ ೩ನೇ ಯತಿವರ್ಯರಾದ ಶ್ರೀ ಜೀವೊತ್ತಮ ತೀರ್ಥರು ಆಸೇತು ಹಿಮಾಚಲ ತೀರ್ಥಯಾತ್ರೆ ಮಾಡುತ್ತಾ ಗೋಕರ್ಣಕ್ಷೇತ್ರ ಸಂದರ್ಶಿಸಿ ಭಟ್ಕಳದ ವಡೇರ ಮಠವನ್ನು ತಲುಪಿದರು. ಹಿಂದೆ ಕೋಟಿತೀರ್ಥದ ಸನಿಹದಲ್ಲಿ ಶ್ರೀಗಳ ವಶದಲ್ಲಿ ವಡೇರ ಮಠದ ಒಂದು ನಿವೇಶನವಿತ್ತು. ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದವರು ಅಲ್ಲಿ ವಾಸ್ತವ್ಯ ಹೂಡಿದ್ದು ಕೆಲವು ದಿನ ಇಲ್ಲಿ ಇದ್ದು ಆಮೇಲೆ ಬೇರೆ ಸ್ಥಳವನ್ನು ಪಡೆದು ಮಠಕಟ್ಟಿ ಈ ಸ್ಥಳವನ್ನು ತೆರುವಗೊಳಿಸುವದಾಗಿ ಹೇಳಿ ಕಾಲಕ್ರಮದಲ್ಲಿ ಕೋಟಿತೀರ್ಥದ ಸ್ಥಳವು ತಮ್ಮದೆಂದು ವಾದಿಸುತ್ತಾ ಅಲ್ಲಿಯೇ ನೆಲೆನಿಂತರು. ವ್ಯಾಜ್ಯವು ನ್ಯಾಯಾಲಯಕ್ಕೆ ಹೊಗಿ ಆ ಸ್ಥಳವು ವಡೇರ ಮಠದವರಿಗೆ ಸೇರಿದ್ದೆಂದು ಇತ್ಯರ್ಥವಾಯಿತು. ಪರಭಾರೆಯಾದ ಆ ಭೂಮಿ ಮರಳಿ ವಶವಾದ ನೆನಪಿಗೆ ಆ ಸ್ಥಳದಲ್ಲಿ ತಮ್ಮ ಗಂಡಕೀಯಾತ್ರೆಯಲ್ಲಿ ಸಿಕ್ಕಿದ ಒಂದು ವಿಠ್ಠಲನ ವಿಗ್ರಹವನ್ನು ಸ್ಥಾಪಿಸಿ ಅದಕ್ಕೆ ಭೂವಿಜಯವಿಟ್ಠಲ ನಾಮಕರಣಮಾಡಿದರು. ಹೀಗೆ ಗೋಕರ್ಣದಲ್ಲಿ ಶಾಖಾ ಮಠದ ಸ್ಥಾಪನೆಯಾಯಿತು. ರೈಲು ಬಸ್ಸು ಇಲ್ಲದ ಆ ದಿನಗಳಲ್ಲಿ ಕಾಶಿಯಾತ್ರೆ ಮಾಡಲಾಗದ ಸಾಮಾನ್ಯ ಜನರು ದಕ್ಷಿಣಕಾಶಿಯೆಂದು ಪ್ರಸಿದ್ಧಿಪಡೆದ ಗೋಕರ್ಣಕ್ಕೆ ತಮ್ಮ ಪಿತೃಕಾರ್ಯ ಮತ್ತು ಕ್ಷೇತ್ರ ಸಂದರ್ಶನಕ್ಕೆ ಹೋಗುತ್ತಿದ್ದರು. ಮಠದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಆ ಸ್ಥಳವು ಇಕ್ಕಟ್ಟಾಗಿರುವದರಿಂದ ಬೇರೊಂದು ವಿಶಾಲವಾದ ಸ್ಥಳವನ್ನು ಸಂಪಾದಿಸಿ ನೂತನ ವಿಶಾಲವಾದ ಮಠವನ್ನು ಸ್ಥಾಪಿಸಿದರು.

ಭಟ್ಕಳ, ಪಶ್ಚಿಮ ಕರಾವಳಿಯ ಸುಪ್ರಸಿದ್ದ ಬಂದರು ಆಗಿದ್ದು ವಿಜಯನಗರದ ಕಾಲದಿಂದಲೂ ವಿದೇಶದಿಂದ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತಿದ್ದು ಸ್ವದೇಶಿ ಸಾಮಗ್ರಿಗಳಾದ ಅಕ್ಕಿ, ಸಕ್ಕರೆ, ಸಾಂಬಾರು ಪದಾರ್ಥಗಳನ್ನು ರಪ್ತು ಮಾಡುತ್ತಿತ್ತು. ಬ್ರಿಟೀಷ, ಪೋರ್ಚ್ಯುಗೀಸ ಮತ್ತು ಡಚ್ಚರು ವ್ಯಾಪಾರಕ್ಕೆ ಬರುತ್ತಿದ್ದರು. ಪೋರ್ಚ್ಯುಗೀಸರು ಭಟ್ಕಳದಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಿ ಪಶ್ಚಿಮ ಕರಾವಳಿಯ ಗೋವಾದ ತನಕ ತಮ್ಮ ಆಡಳಿತ ನಡೆಸುತ್ತಿದ್ದು ಕೆಳದಿಯ ಸಾಮಂತ ರಾಜರಿಂದ ಸಕ್ಕರೆ, ಅಕ್ಕಿಯನ್ನು ಕಪ್ಪ-ಕಾಣಿಕೆ ರೂಪದಲ್ಲಿ ಪಡೆಯುತ್ತಿದ್ದರು. ೧೫೧೦ ರಿಂದಲೆ ಸ್ಥಳೀಯ ಮುಸ್ಲಿಮ ವ್ಯಾಪಾರಸ್ತರಿಗೂ ಪೋರ್ಚ್ಯುಗೀಸ ವ್ಯಾಪಾರಸ್ತರಿಗೂ ವ್ಯಾಪಾರದಲ್ಲಿ ಜಗಳ ವ್ಯಾಜ್ಯ ನಡೆಯುತ್ತಿದ್ದವು. ೧೫೧೬ ರಲ್ಲಿನಡೆದ ಜಗಳದಲ್ಲಿ ಸ್ಥಳಿಯ ವ್ಯಾಪಾರಸ್ತರು ೨೪ ಪೋರ್ಚ್ಯುಗೀಸರನ್ನು ಕೊಂದು ಸುಮಾರು ೧೦,೦೦೦ ಪೌಂಡ ಮೊತ್ತದ ಸರಕುಗಳನ್ನು ಲೂಟಿಮಾಡಿದರು. ೧೫೧೮ ರಲ್ಲಿ ಭಟ್ಕಳದ ಅಧಿಕಾರಿ ಪೋರ್ಚ್ಯುಗೀಸರಿಗೆ ಕಪ್ಪಕೊಡಲು ನಿರಾಕರಿಸಿದಾಗ ಪೋರ್ಚ್ಯುಗೀಸ ವೈಸರಾಯ ಮೂರು ಹಡಗಿನಲ್ಲಿ ಸೇನೆಯೊಂದಿಗೆ ಬಂದು ಭಟ್ಕಳ ಬಂದರಿಗೆ ಬರುವ ಮತ್ತು ಹೋಗುವ ವ್ಯಾಪಾರಿ ಹಡಗುಗಳಿಗೆ ತಡೆಯುಂಟುಮಾಡಿದನು. ಇದರಿಂದ ರಾಜಿ ಒಪ್ಪಂದ ಮಾಡಿಕೊಂಡ ಭಟ್ಕಳ ಅಧಿಕಾರಿ ಎಂದಿನಂತೆ ಕಪ್ಪ ನೀಡಿದನು. ತದನಂತರ ಮುಂದಿನ ೨೦ ವರ್ಷಗಳು ಇದೆ ರೀತಿ ಸಾಗಿದವು. ನಂತರ ೧೫೪೨ರಲ್ಲಿ ಭಟ್ಕಳದ ರಾಣಿ ಮತ್ತೆ ಕಪ್ಪಕೊಡಲು ನಿರಾಕರಿಸಿದಾಗ ಗೋವಾದ ಗವರ್ನರ ಮಾರ್ತಿಮ ಆಫೋನ್ಸೊ ಡಿಸೊಜಾ ೧೪೦೦ ಯೋಧರೊಂದಿಗೆ ಎರಡು ಹಡಗಿನಲ್ಲಿ ಭಟ್ಕಳ ಬಂದರ ವಶಪಡಿಸಿಕೊಂಡು ನಗರವನ್ನು ಪ್ರವೇಶಿಸಿ ಮನೆ ಅಂಗಡಿಗಳಿಗೆ ಬೆಂಕಿ ಹಚ್ಚಿ, ನಾಗರೀಕರ ಅಮಾನುಷ ಹತ್ಯೆ ಮಾಡಿದನು. ಇದರಿಂದ ಜನರಲ್ಲಿ ಭೀತಿ ಮತ್ತು ಅಸುರಕ್ಷತೆ ಮನೆಮಾಡಿತು.
(ಗೋವಾ ಕೆನರಾ ರಿಲೇಷನ್ಸ ೧೪೯೮-೧೭೬೩, ಪುಸ್ತಕದ ಪುಟ ಸಂಖ್ಯೆ ೬೭ ರಿಂದ ೬೯ ರ ಆಯ್ದ ಭಾಗದ ಕನ್ನಡ ಭಾಷಾಂತರ)

ಪೋರ್ಚ್ಯುಗೀಸ ವ್ಯಾಪಾರಸ್ತರಿಂದ ಉಂಟಾಗುತ್ತಿರುವ ದೊಂಬಿ ಲೂಟಿ ನಾಗರಿಕರ ಹತ್ಯೆಗಳನ್ನು ಕಂಡ ಶ್ರೀ ಜೀವೊತ್ತಮ ತೀರ್ಥರು ಪೋರ್ಚ್ಯುಗೀಸ, ಬ್ರಿಟೀಷರಿಲ್ಲದ ಕೇವಲ ಕ್ಷೇತ್ರದರ್ಶನಕ್ಕೆ ಬರುವ ಭಕ್ತಾದಿಗಳಿಂದ ಶಾಂತ ವಾತಾವರಣದಿಂದ ಕೂಡಿದ ಗೋಕರ್ಣ ಕೇತ್ರವನ್ನು ತಮ್ಮ ಕೇಂದ್ರ ಮಠವನ್ನಾಗಿ ಯೋಜಿಸಿ ಭಟ್ಕಳದಿಂದ ಮಠವನ್ನು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಸ್ಥಳಾಂತರಿಸಿದರು.