ಪರ್ತಗಾಳಿಯ ನಾರಾಯಣ ಭೂತ
ಪರ್ತಗಾಳಿ ಮಠದಲ್ಲಿ ಶ್ರೀ ರಾಮಚಂದ್ರತೀರ್ಥರು ಶ್ರೀರಾಮನ ಶಿಲಾವಿಗ್ರಹ ಸ್ಥಾಪನೆಮಾಡಿ ರಾಮನವಮಿ ಉತ್ಸವ ಪ್ರಾರಂಭಿಸಿದರು. ಈ ಉತ್ಸವಕ್ಕಾಗಿಯೇ ಒಂದು ರಥವನ್ನು ಸಿದ್ಧಮಾಡಿದರು. ರಾಮನವಮಿ ರಾತ್ರಿಯಂದು ಶ್ರೀರಾಮನ ಉತ್ಸವಮೂರ್ತಿಯನ್ನು ರಥದಲ್ಲಿರಿಸಿ ರಥೋತ್ಸವವನ್ನು ಮಾಡಲಾಗುತ್ತಿತ್ತು. ಈ ಮೊದಲು ರಾಮನವಮಿ ಉತ್ಸವ ರಾಮನವಮಿಯ ದಿನದಂದು ಮಾತ್ರವಿದ್ದು ನಂತರ ಪಂಚಮಿಯಂದು ಪ್ರಾರಂಭವಾಗಿ ಗರುಡಪೂಜನ, ಧ್ವಜಾರೋಹಣ, ದಂಡಬಲೀ ಹೋಮಹವನ ಇತ್ಯಾದಿ ಕಾರ್ಯಕ್ರಗಳೂ ಸೇರಿದವು. ಕೆಲವೇ ವರ್ಷಗಳಲ್ಲಿ ಪರ್ತಗಾಳಿಯ ರಾಮನವಮಿ ಉತ್ಸವ ಎಷ್ಟೊಂದು ಪ್ರಖ್ಯಾತಿಗೊಂಡಿತೆAದರೆ ಪರ್ತಗಾಳಿಯ ಸುತ್ತಲಿನ ಗೋವಾ, ಕರ್ನಾಟಕದ ದಕ್ಷಿಣೊತ್ತರ ಜಿಲ್ಹೆಗಳ ಜನರೂ ರಾಮನವಮಿ ಉತ್ಸವಕ್ಕೆ ಬರತೊಡಗಿದರು.
ಪರ್ತಗಾಳಿ ಈ ರಾಮನವಮಿ ಸಪ್ತದಿನಾತ್ಮಕ ಉತ್ಸವ ಕಾರ್ಯಕ್ರಮ ಮಠದ ಅಭಿವೃದ್ಧಿ ಖ್ಯಾತಿಗಳಿಂದ ಶಿರಸಿಯ ಸೋದೆಮಠದವರಿಗೆ ಅಸೂಯೆಯಾಗತೊಡಗಿತು. ಈ ಹಿಂದೆ ಸೋದೆ ಮಠದ ವೈದಿಕರು ಪರ್ತಗಾಳಿಗೆ ಬಂದು ರಥೋತ್ಸವದ ಧಾರ್ಮಿಕವಿಧಿಯನ್ನು ನಡೆಸಿಕೊಡುತ್ತಿದ್ದರು. ಕಾಲಕ್ರಮೇಣ ಗೌಡಸಾರಸ್ವತ ಬ್ರಾಹ್ಮಣರಲ್ಲಿಯ ವೈದಿಕರು ಈ ಧಾರ್ಮಿಕ ವಿಧಿಯನ್ನು ಅಭ್ಯಾಸಮಾಡಿ ಅವರೇ ನಡೆಸತೊಡಗಿದರು. ಇದು ಅವರಲ್ಲಿ ದ್ವೇಶಕ್ಕೆ ಕಾರಣವಾಯಿತು. ಅದರಲ್ಲೂ ಉಭಯಮಠದವರಿಗೂ ಗೋಕರ್ಣದ ಬಳಿಯ ಹೆಗರೆ ಎಂಬ ಜಾಗೆಯ ಹಕ್ಕಿನ ಬಗ್ಗೆ ವ್ಯಾಜ್ಯನಡೆದಿದ್ದು ಅದರ ತೀರ್ಪು ಗೊಕರ್ಣಮಠದ ಪರವಾಗಿ ನೀಡಲಾಯಿತು. ಈ ವಿಷಯದಿಂದ ಇನ್ನೂ ವೈಷಮ್ಯ ಬೆಳೆಯತೊಡಗಿತು. ಸೋದೆಮಠಾಧಿಶರು ತಮ್ಮ ಆಧೀನದಲ್ಲಿರುವ ಪಿಶಾಚಯೋನಿಯ ನಾರಾಯಣಭೂತವೆಂಬ ಒಂದು ಕೃತ್ರಿಮ ಸೃಷ್ಟಿಯನ್ನು ರಾಮನವಮಿ ಉತ್ಸವಕ್ಕೆ ವಿಘ್ನತರುವಂತೆ ನಿರ್ದೇಶಿಸಿ ಕಳುಹಿಸಿದರು.
ಅಂದು ರಾಮನವಮಿ ಉತ್ಸವ ವೈಭವದಿಂದ ಪ್ರಾರಂಭವಾಗಿ ರಾಮದೇವರ ರಥೊತ್ಸವಕ್ಕೆ ಎಲ್ಲಿಲ್ಲದ ಜನಸಾಗರ ಸೇರಿತ್ತು. ವಾದ್ಯಘೋಷ, ವೈದಿಕರ ಮಂತ್ರಘೋಷ, ಭಕ್ತಸಮೂಹದ ಪುಂಡಲೀಕವರದ ಹರೀ ವಿಠ್ಠಲ ಘೋಷಣೆ ಮುಗಿಲು ಮುಟ್ಟಿತ್ತು. ಉತ್ಸಾಹದಿಂದ ಭಕ್ತಗಣ ರಥವನ್ನು ಎಳೆಯುತ್ತಾ ರಥೋತ್ಸವ ಮುಖ್ಯಪ್ರಾಣದೇವರ ಗುಡಿಯಬಳಿ ಬಂದಿತ್ತು. ಓಂದು ಕ್ಷಣ ಎನಾಯಿತು ಎಂಬುದು ಅರಿಯದಾಯಿತು ಯಾಕೋ ರಥಮುಂದಕ್ಕೆ ಕದಲುತ್ತಿಲ್ಲ. ಜನ ತಮ್ಮೆಲ್ಲಾ ಶಕ್ತಿಯನ್ನು ಹಾಕಿ ಎಳೆಯಿರಿ ಹೂ ಇನ್ನೂ ಜೊರಾಗಿ ಎನ್ನುತ್ತಾ ರಥದ ಹಗ್ಗವನ್ನು ಘಟ್ಟಿಯಾಗಿ ಎಳೆಯುತ್ತಾ ದೊಡ್ಡದಾಗಿ ಶ್ರೀನಿವಾಸಾ ವೆಂಕಟರಮಣಾ ಗೋವಿಂದಾ ಘೋಷಣೆಯನ್ನೂ ಮಾಡಿದರು. ಆದರೆ ರಥ ಮಾತ್ರ ಸ್ವಲ್ಪವೂ ಅಲುಗಾಡಲಿಲ್ಲ. ಈ ವಿಷಯ ಕೂಡಲೆ ಗುರುಗಳಲ್ಲಿ ವಿನಂತಿಸಿಕೊAಡರು. ಉತ್ಸವದ ಮುಂದಿನ ಕಾರ್ಯಕ್ರಮದ ಪರಾಮರ್ಶೆ ಮಾಡುತ್ತಿದ್ದ ಶ್ರೀ ದಿಗ್ವಿಜಯರಾಮಚಂದ್ರ ತೀರ್ಥರು ಒಂದುಕ್ಷಣ ಧ್ಯಾನಸ್ಥರಾಗಿ ಏನು ನಡೆಯುತ್ತಿದೆ ಎಂದು ಅರಿತರು. ಕಾರಣವೂ ವೇದ್ಯವಾಗಿತ್ತು. ಧಿಗ್ಗನೆ ಎದ್ದ ಶ್ರೀಗಳು ಅಲ್ಲಿಯೆ ಇದ್ದ ಒಂದು ನಾರಿಕೇಳವನ್ನು ಹಿಡಿದುಕೊಂಡು ರಥವಿದ್ದಲ್ಲಿಗೆ ಬಂದರು. ಅಲ್ಲಿ ವಿಘ್ನವೊಡ್ಡುತ್ತಿದ್ದ ನಾರಾಯಣ ಭೂತವನ್ನು ತಮ್ಮಕೈಯಲ್ಲಿದ್ದ ತೆಂಗಿನಕಾಯಿಯಲ್ಲಿ ಅಭಿಮಂತ್ರಿಸಿ ಅದನ್ನು ಮುಖ್ಯಪ್ರಾಣನ ಪಾದದಬಳಿ ಸ್ತಂಭನಗೊಳಿಸಿದರು. ರಥೋತ್ಸವವೂ ಸಾಂಗವಾಗಿ ನೆರವೇರಿತು.
ರಥೋತ್ಸವಕ್ಕೆ ವಿಘ್ನವೊಡ್ಡಲು ಬಂದ ನಾರಾಯಣಭೂತ ಮುಖ್ಯಪ್ರಾಣನ ಗುಡಿಯ ಕೆಳಗೆ ಶಾಶ್ವತ ಬಂಧಿಯಾದನು. ಇಗಲೂ ಅದರ ಪ್ರತಿಮೆ ಅಲ್ಲಿದೆ. ಅಂದಿನಿAದ ರಥೋತ್ಸವವು ಮಾರುತಿಗುಡಿಯ ಬಳಿ ಬಂದು ನಿಂತು ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಗುಡಿಯ ಮೆಲ್ಭಾಗದಿಂದ ಬಿಟ್ಟು ಅದನ್ನು ಪ್ರಜ್ವಲಿಸುವ ಕ್ರಮ ನಡೆದುಕೊಂಡು ಬಂದಿದೆ. ಅಲ್ಲದೆ ಭೂತರಾಜನಿಗೆ ಶ್ರೀಫಲದ ನೈವೇದ್ಯವೂ ನೀಡಲ್ಪಡುತ್ತದೆ. ಇತರ ಉತ್ಸವಾದಿಗಳಲ್ಲಿ ಪಲ್ಲಕಿಯು ಮುಖ್ಯಪ್ರಾಣದೇವರ ಗುಡಿಯಬಳಿ ಬರುತ್ತಲೆ ಮಾರುತಿಯೊಂದಿಗೆ ಭೂತರಾಜನಿಗೂ ತೆಂಗಿನಕಾಯಿಯ ನೈವೇದ್ಯ ಸಮರ್ಪಿಸಲಾಗುತ್ತದೆ.