ಪರ್ತಗಾಳಿ ಮಠ
ಸಂಸ್ಥಾಪಕರು : ಶ್ರೀ ರಾಮಚಂದ್ರತೀರ್ಥ (೬)
ಸ್ಥಾಪನಾ ವರ್ಷ : ಶಕ ೧೫೭೮ ದುರ್ಮುಖಿ (ಕ್ರಿ.ಶ. ೧೬೫೬)
ದೇವ ಪ್ರತಿಮಾ : ಶ್ರೀ ರಾಮ ಸೀತಾ ಲಕ್ಷ್ಮಣ (ಶಿಲಾವಿಗ್ರಹ)
ಉತ್ಸವ ಪ್ರತಿಮಾ : ಶ್ರೀ ರಾಮ ಸೀತಾ ಲಕ್ಷ್ಮಣ (ಪಂಚಲೋಹದ ವಿಗ್ರಹ)
ಪರಿವಾರ ದೇವತೆ : ಶ್ರೀ ಮುಖ್ಯಪ್ರಾಣ ಗೋಪುರ ಮಂದಿರ, ಹನುಮಂತ, ಗರುಡ, ಬ್ರಹ್ಮ
ವಿಳಾಸ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಪರ್ತಗಾಳಿ, ಪೋ: ಪೈಂಗಿಣಿ ೪೦೩ ೭೦೨
ವೃಂದಾವನ : ೧. ಶ್ರೀ ಶ್ರೀಕಾಂತ ತೀರ್ಥ (೧೩) ಶ್ರೀ ಶಕೆ ೧೭೦೮ ಪ್ರಭವ, ಆಷಾಢ ಶುಕ್ಲ-೯
: ೨. ಶ್ರೀ ಆನಂದ ತೀರ್ಥ (೧೭) ಶ್ರೀ ಶಕೆ ೧೭೫೦ ಸರ್ವಧಾರಿ, ಶ್ರಾವಣ ಶುಕ್ಲ-೯
: ೩. ಶ್ರೀ ಪೂರ್ಣಪ್ರಜ್ಞ ತೀರ್ಥ (೧೮), ಶ್ರೀ ಶಕೆ ೧೮೦೧ ಜ್ಯೇಷ್ಟ ಶುಕ್ಲ-೯
: ೪. ಶ್ರೀ ಪದ್ಮನಾಭ ತೀರ್ಥ (೧೯) ಶ್ರೀಶಕೆ ೧೮೧೪ ನಂದನ ಆಷಾಢ ಶುಕ್ಲ-೭
: ೫. ಶ್ರೀ ಇಂದಿರಾಕಾಂತ ತೀರ್ಥ (೨೦) ಶ್ರೀ ಶಕೆ ೧೮೬೪ ಚೈತ್ರ ಬಹುಳ-೭
: ೬. ಶ್ರೀ ಕಮಲಾನಾಥ ತೀರ್ಥ (೨೧) ಶ್ರೀಶಕೆ ೧೮೬೫ ಸುಭಾನು ಚೈತ್ರ ಶುಕ್ಲ-೧೨
: ೭. ಶ್ರೀ ದ್ವಾರಕಾನಾಥ ತೀರ್ಥ (೨೨) ಶ್ರೀಶಕೆ ೧೮೯೪ ಪರಿಧಾವಿ ಫಾಲ್ಗುಣ ಬಹುಳ-೬
ರಥ : ೪ ಮರದ ರಥಗಳು
ರಥ ಬೀದಿ : ೨೦೦ ಮೀಟರ ಉದ್ದ ೫೦ ಮೀಟರ ಅಗಲ
ಮಹಾದ್ವಾರ : ಎರಡು ಮಹಾದ್ವಾರ. ಕಾರವಾರ ಪಣಜಿ ರಸ್ತೆಯಲ್ಲಿರುವ ಮುಖ್ಯಮಹಾದ್ವಾರ
ಶಿಭಿಕಾ : ೨ ಬೆಳ್ಳಿ ಶಿಭಿಕೆ, ೧ ಬೆಳ್ಳಿ ಲಾಲ್ಕಿ
ಧ್ವಜಸ್ತಂಭ : ೨೨ ಅಡಿ ೪ ಇಂಚಿನ ಏಕಶಿಲಾ, 5 ಅಡಿ ಎತ್ತರದ ಚೌಕ ಕೂರ್ಮ್ ಪೀಠ.
ಶಿಖರ ಕಲಶ : ಸ್ವರ್ಣಲೇಪಿತ ಶಿಖರ ಕಲಶ
ಗೋಶಾಲೆ : ೬೦+ ಜಾನುವಾರುಗಳು
ಪಾಠಶಾಲೆ : ಶ್ರೀ ಇಂದಿರಾಕಾಂತ ಸಂಸ್ಕೃತ ವೈದಿಕ ಪಾಠಶಾಲೆ
ಗ್ರಂಥ ಭಂಡಾರ : ಶ್ರೀ ಕಮಲಾನಾಥ ಸಂಸ್ಕೃತ ಪುಸ್ತಕ ಭಂಡಾರ.
ಪುರಸ್ಕಾರ : ಪ್ರತಿ ವರ್ಷ ವಿದ್ಯಾಧಿರಾಜ್ ಪುರಸ್ಕಾರ (ನಗದು + ಟ್ರೋಫಿ + ಮಾನಪತ್ರ)
: ಪ್ರತಿ ವರ್ಷ ಜೀವೋತ್ತಮ ಪುರಸ್ಕಾರ (ನಗದು + ಟ್ರೋಫಿ + ಮಾನಪತ್ರ)
ನದಿ : ಕುಶಾವತಿ (ಈಶಾನ್ಯಪ್ಲವ)
ಪವಿತ್ರ ವೃಕ್ಷ : ಅಶ್ವಥ, ಧಾತ್ರಿ, ಶಮಿ, ವಟ, ಪಾರಿಜಾತ.
ಒಟ್ಟು ವಿಸ್ತೀರ್ಣ : ತೆಂಗು, ಗೇರು, ಮಾವು, ಹಲಸು, ಇತ್ಯಾದಿ ಮರವಿರುವ ೨೦೦ ಎಕರೆ ಭೂಮಿ
ಕಟ್ಟಡದ ವಿಸ್ಥಿರ್ಣ : ೩೫,೦೦೦ ಚದರ ಮೀಟರ
ಕಟ್ಟಡದ ವಿವರಗಳು : ಗರ್ಭಗ್ರಹ, ಗುರುಭವನ, ಅಗ್ರಶಾಲಾ, ಅರ್ಚಕ ನಿವಾಸ, ಸಭಾಗ್ರಹ, ಪಾಠಶಾಲೆ, ಶಿಕ್ಷಕರ ಕೊಠಡಿ,
ಪಾಕಶಾಲಾ, ಭೋಜನ ಶಾಲಾ, ಅತಿಥಿ ಗಳಿಗೆ ೩೦ ಹವಾನಿಯಂತ್ರಿತ ಕೊಠಡಿ. ೧೫ ಸಾದಾ ಕೊಠಡಿ
ಮ್ಯೂಸಿಯಂ, ಗೋಶಾಲಾ, ಕಛೇರಿ, ಗೋಡೌನ ಇತ್ಯಾದಿ.
ಪಂಚ ಪರ್ವ ಉತ್ಸವ : ಶ್ರೀ ರಾಮಜನ್ಮೋತ್ಸವ, ವರ್ಧಂತಿ ಉತ್ಸವ ಚೈತ್ರ ಶುಕ್ಲ ದ್ವಿತೀಯ, ಪುಣ್ಯತಿಥಿ,
ಗಣಿತದ ಇತಿಹಾಸ
ಗೋಕರ್ಣ ಮಠ ಪರಂಪರೆಯ ಆರನೇಯ ಯತಿವರ್ಯ ಶ್ರೀ ರಾಮಚಂದ್ರ ತೀರ್ಥ ಶ್ರೀಪಾದ ವಡೇರ ಸ್ವಾಮಿಜೀಯವರಿಗೆ ದೈವಿ ಸೂಚನೆಯಂತೆ ಗೋಕರ್ಣಮಠದ ಹಿಂಬಾಗದಲ್ಲಿ ಶೋಧ ಕಾರ್ಯ ನಡೆಸುತಿದ್ದಾಗ ಶಿಲಾಗರ್ಭದಲ್ಲಿ ವಿಶ್ವಕರ್ಮನಿರ್ಮಿತ ಶ್ರೀರಾಮ ಲಕ್ಷ್ಮಣ ಸೀತಾ ಮತ್ತು ಶ್ರೀ ಮಾರುತಿ ಹೀಗೆ ನಾಲ್ಕು ಪ್ರತಿಮೆಗಳು ದೊರಕಿದವು. ಇವುಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾಗ ಈ ಶಿಲಾ ಮೂರ್ತಿಗಳನ್ನು ಹೊತ್ತ್ತು ಕೊಂಡು ಉತ್ತರ ದಿಕ್ಕಿಗೆ ಪ್ರಯಾಣಿಸುವಂತೆ ಮತ್ತು ಎಲ್ಲಿ ಮೂರ್ತಿವಾಹಕರಿಗೆ ಪ್ರತಿಮೆಗಳು ಭಾರವೆನಿಸುವದೋ ಅಲ್ಲಿಯೇ ಅವುಗಳನ್ನು ಪ್ರತಿಷ್ಠಾಪಿಸುವಂತೆ ದೈವಿ ಸೂಚನೆಯಾಯಿತು. ಅದೇ ಸೂಚನೆಯಂತೆ ಶಿಲಾಪ್ರತಿಮೆಗಳೊಂದಿಗೆ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸಿದರು. ಶ್ರೀಕ್ಷೇತ್ರ ಗೋಕರ್ಣದಿಂದ ಹೊರಟು ಕಾರವಾರ ಮಾರ್ಗವಾಗಿ ಮಾಶೆ, ಪೈಂಗಿಣಿಗೆ (ಪೈಂಗಿ ಋಷಿಯ ಆಶ್ರಮಕ್ಕೆ) ರಾತ್ರಿ ಬಂದು ತಲುಪಿದಾಗ ಮೂರ್ತಿವಾಹಕರಿಗೆ ಪ್ರತಿಮೆಗಳು ಭಾರವೆನಿಸಿದವು. ಆದರೆ ಆ ಸ್ಥಳದಲ್ಲಿ ನೀರಿನ ಆಸರೆ ಇಲ್ಲದಿರುವದರಿಂದ ಹೇಗೆ ಮಠ ನಿರ್ಮಾಣ ಮಾಡುವದು ಎಂಬ ಚಿಂತೆಯಲ್ಲಿರುವಾಗ ರಾತ್ರಿ ಆವರಿಗೆ ದೈವಿ ಸೂಚನೆಯಾಯಿತು. ಮರುದಿನ ಬೆಳಿಗ್ಗೆ ಶ್ರೀಗಳವರು ಮುಕ್ಕಾಮ ಮಾಡಿದ ಸ್ಥಳಕ್ಕೆ ಧೇನುವು ಬರಲಿದೆ. ಅದನ್ನು ಪೂಜಿಸಿ ಯೋಗ್ಯ ಸ್ಥಳವನ್ನು ತೋರಿಸುವಂತೆ ಪ್ರಾರ್ಥಿಸುವದು ಆಗ ಆ ಧೇನುವು ಯೋಗ್ಯಮಾರ್ಗದರ್ಶನ ಮಾಡುವದು. ಎಲ್ಲಿ ಧೇನುವು ಕ್ಷೀರಧಾರೆಯನ್ನು ಸ್ರವಿಸುವದೋ ಅಲ್ಲಿಯೇ ಮೂರ್ತಿಯನ್ನು ಪ್ರತಿಷ್ಟಾಪಿಸುವದು ಎಂಬ ಸೂಚನೆಯಾಯಿತು. ಅದರಂತೆ ಮರುದಿನ ಮುಂಜಾವಿನಲ್ಲಿ ಧೇನುವು ಪ್ರತ್ಯಕ್ಷವಾಗಿದ್ದು ಅದನ್ನು ಪೂಜಿಸಿ ಪ್ರಾರ್ಥಿಸಿಕೊಂಡಾಗ ತನ್ನೊಂದಿಗೆ ಬರುವಂತೆ ಸೂಚಿಸಿ ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯುತ್ತಾ ಇಕ್ಕಟ್ಟಾದ ಅರಣ್ಯಮಾರ್ಗವಾಗಿ ಉತ್ತರದಿಕ್ಕ್ಕಿಗೆ ಹೊರಟಿತು. ಅದರ ಹಿಂದೆಯೆ ಶ್ರೀಗಳವರು ಪರಿವಾರಸಹಿತ ಮೂರ್ತಿವಾಹಕರೊಂದಿಗೆ ಹಿಂಬಾಲಿಸಿದರು. ಹಾಗೆ ಮುಂದುವರಿಯುತ್ತಾ ಪರ್ವತ ಕಾನನದಿಂದ ಕೂಡಿದ ರಮಣೀಯ ಪ್ರದೇಶದ ಸಮುದ್ರಗಾಮಿನಿ ಈಶಾನ್ಯಪ್ಲವಾ ಕುಶಾವತಿ ನದಿತೀರದಲ್ಲಿ ಧೇನುವು ಕ್ಷೀರಧಾರೆಯನ್ನು ಸ್ರವಿಸಿತು. ಅಲ್ಲಿಯೇ ಶ್ರೀಗಳವರು ಶ್ರೀ ರಾಮ, ಲಕ್ಷ್ಮಣ ಮತ್ತು ಸೀತೆಯರ ಶಿಲಾ ಪ್ರತಿಮೆಗಳನ್ನು ಸ್ಥಾಪಿಸಿದರು. ಹೀಗೆ ಶ್ರೀ ರಾಮಚಂದ್ರ ತೀರ್ಥ ಸ್ವಾಮಿಜಿಯವರು ಶಕೆ ೧೫೭೮ ದುರ್ಮುಖಿ ಸಂ. (ಕ್ರಿಸ್ತಶಕ ೧೬೫೬) ಮಠಸ್ಥಾಪಿಸಿದ ಈ ಪರ್ವತ ಕಾನನಗಳಿಂದ ಕೂಡಿದ ಪ್ರದೇಶವು ಮುಂದೆ ಪರ್ತಗಾಳಿಯೆಂದು ಪ್ರಸಿದ್ದಿಗೊಂಡಿತು. ಮುಂದೆ ಧೇನುವು ಮತ್ತೆ ಉತ್ತರ ದಿಕ್ಕಿಗೆ ಪ್ರಯಾಣಿಸಲು ಅದನ್ನು ಹಿಂಬಾಲಿಸಲು ಆ ಧೇನುವು ಋಷಿವನದಲ್ಲಿ (ಈಗಿನ ರೀವಣ)ದಲ್ಲಿ ಮತ್ತೊಮ್ಮೆ ಕ್ಷೀರಧಾರೆಯನ್ನು ಸ್ರವಿಸಿತು. ಶ್ರೀಗಳು ದೈವಿ ಸಂದೇಶದಂತೆ ಗೋಕರ್ಣದಲ್ಲಿ ಸಿಕ್ಕಿದ ಮಾರುತಿ ವಿಗ್ರಹವನ್ನು ಅಲ್ಲಿ ಸ್ಥಾಪಿಸಿದರು. ಕಾಲಾಂತರದಲ್ಲಿ ಅಲ್ಲಿ ಒಂದು ಶಾಖಾಮಠವನ್ನು ಸ್ಥಾಪಿಸಿದರು.