ವಟವ್ರಾಕ್ಷ
ಪರ್ತಗಾಳಿಮಠವು ಸಹ್ಯಾದ್ರಿ ಪರ್ವತದ ತಪ್ಪಲಿನಲ್ಲಿ ಇರುವ ಪವಿತ್ರವಾದ ಸಮುದ್ರಗಾಮಿನ ಈಷಾನ್ಯಪ್ಲವಾ ಕುಶಾವತಿ ನದಿಯ ತೀರದಲ್ಲಿದೆ. ಲೌಕಿಕ ಪ್ರಪಂಚದ ಜನವಸತಿಯಿಂದ ದೂರ, ಪ್ರಶಾಂತ ನಿಸರ್ಗ ರಮಣೀಯ ಸ್ಥಳದಲ್ಲಿದೆ. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಕೇಂದ್ರಮಠವು ಅಪೂರ್ವವಾದ ರಮಣೀಯ ಸೌಂದರ್ಯದಿಂದ ಆವೃತ್ತವಾದ ಸ್ಥಳದಿಂದ ಕೂಡಿದೆ. ಈ ಮಠದ ಪರಿಸರದಲ್ಲಿರುವ ಪುರಾತನವಾದ ಬೃಹತ್ ವಟವೃಕ್ಷವು ಋಷಿಗಳ ತಪಸ್ಸಿನ ಭೂಮಿಯಾಗಿತ್ತು. ಅಂದರೆ ಸುಮಾರು ಸಾವಿರಾರು ವರ್ಷಗಳಿಂದ ಈ ಪವಿತ್ರ ಸ್ಥಳವು ಧ್ಯಾನ ಕೇಂದ್ರವಾಗಿದೆ. ಈ ವಟವೃಕ್ಷದ ತಂಪಾದ ನೆರಳಿನಲ್ಲಿ ಪುರಾತನ ಕಾಲದಲ್ಲಿ ಪೈಂಗಿ ಎಂಬ ಋಷಿಯು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದನು ಮತ್ತು ಅಂದಿನಿಂದ ಅನೇಕ ಋಷಿಗಳು ಮತ್ತು ಯೋಗಿಗಳು ಈ ಪ್ರಶಾಂತ ಸ್ಥಳದಲ್ಲಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಬರುತ್ತಿದ್ದು ಇದನ್ನು ಬ್ರಹ್ಮಸ್ಥಾನ ಎಂದು ಕರೆಯಲಾಗುತ್ತಿದೆ. ವಟವೃಕ್ಷವು ಒಂದು ಪವಿತ್ರ ವೃಕ್ಷವಾಗಿದ್ದು ಇದು ನಿರಂತರ ಆಧ್ಯಾತ್ಮಿಕ ವೈಭವ ಮತ್ತು ಜೀವನದ ಶಾಶ್ವತ ಚಕ್ರದ ಪೌರಾಣಿಕ ಸಂಕೇತವಾಗಿದೆ. ವಟವೃಕ್ಷಕ್ಕೆ ಮರಣವನ್ನು ಅಥಾವಾ ಕ್ಷೀಣತೆ ಎಂಬುದಿಲ್ಲ. ಇದರ ಬಿಳಲು ಬೇರುಗಳು ನೆಲಕ್ಕೆ ಇಳಿಯುತ್ತವೆ ಮತ್ತು ಹೊಸ ಕಾಂಡಗಳಾಗಿ ಅಭಿವೃದ್ಧಿ ಹೊಂದುತ್ತವೆ, ಹೀಗಾಗಿ ಮರಕ್ಕೆ ಹೊಸ ಜೀವನ ಬೆಂಬಲವನ್ನು ನೀಡುತ್ತದೆ. ಈ ಮರವು ತನ್ನ ಕೊಂಬೆಗಳ ಮೇಲೆ ಹಲವಾರು ಪರಾವಲಂಬಿ ತರು ಲತೆಗಳು ಬೆಳೆಯುತ್ತವೆ ಮತ್ತು ಈ ವಟವೃಕ್ಷವು ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯವನ್ನು ನೀಡುತ್ತದೆ. ನಮ್ಮ ದೇಶದಲ್ಲಿ ಕೆಲವೇ ಕೆಲವು ಪುರಾತನ ವಟವೃಕ್ಷಗಳಿದ್ದು ಅವುಗಳಲ್ಲಿ ಇದೂ ಒಂದು. ಪರ್ತಗಾಳಿ ಮಠದ ಉತ್ತರಕ್ಕೆ ಸುಮಾರು ಇನ್ನೂರು ಮೀಟರ್‌ಗಳಷ್ಟು ದೂರದಲ್ಲಿ ಈ ಪುರಾತನ ವಟವೃಕ್ಷವುವಿದೆ, ಅದರ ಶಾಖೆಗಳು ಸುಮಾರು ೨೦೦ ಬಿಳಲು ಬೇರುಗಳನ್ನು ಹರಡಿಕೊಂಡಿವೆ. ಪೂರ್ವದಿಂದ ಪಶ್ಚಿಮಕ್ಕೆ ಸುಮಾರು ೨೩೫ ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ ೨೨೫ ಅಡಿಗಳಷ್ಟು ಮರದಿಂದ ಆವೃತ್ತವಾಗಿದೆ. ಇದರ ಅಸಂಖ್ಯಾತ ಬಿಳಲು ಬೇರುಗಳ ಕೆಳಗೆ ಹೆಜ್ಜೆ ಹಾಕುವಾಗ ಮರಗಳ ತೋಪಿನಲ್ಲಿ ನಡೆದಾಡುತ್ತಿರುವಂತೆ ಭಾಸವಾಗುತ್ತದೆ. ಎಲ್ಲಾ ದಿಕ್ಕುಗಳಿಂದ ತಂಪಾದ ಗಾಳಿಯನ್ನು ಬೀಸುವ ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ವಟವೃಕ್ಷ ಮತ್ತು ಅದರ ಮುಂಭಾಗದಲ್ಲಿರುವ ಈಶ್ವರಲಿಂಗವನ್ನು ಪರ್ತಗಾಳಿ ಮತ್ತು ಸುತ್ತಮುತ್ತಲಿನ ಜನರು ಪೂಜಿಸುತ್ತಾರೆ. ಈ ವಟವ್ರಕ್ಷವು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಐದು ಶತಮಾನಗಳಿಗೂ ಹೆಚ್ಚು ಕಾಲ ನಡೆಸಿದ ಆಧ್ಯಾತ್ಮಿಕ ಕ್ಷಣದ ಸಂಕೇತವಾಗಿದೆ. ಅದರ ಶಾಖೆಗಳು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿವೆ, ಮಠದ ಸ್ವಾಮೀಜಿಗಳು ದೂರದ ಸ್ಥಳದಲ್ಲಿ ವಾಸಿಸುವ ಶಿಷ್ಯರಿಗೆ ಧರ್ಮದ ಸಂದೇಶವನ್ನು ಸಾರುವ ಸಂಕೇತವಾಗಿದೆ. ಮಣ್ಣಿನಲ್ಲಿ ಆಳವಾಗಿ ಪ್ರವೇಶಿಸುವ ಬಿಳಲು ಬೇರುಗಳು ಗುರುಪೀಠದ ಕಡೆಗೆ ಶಿಷ್ಯನ ಭಕ್ತಿಯನ್ನು ಸಂಕೇತಿಸುತ್ತದೆ. ಅದರ ಪ್ರತಿಕೃತಿಯನ್ನು "ವಿದ್ಯಾಧಿರಾಜ್ ಪ್ರಶಸ್ತಿ" ಗೆ ಯೋಗ್ಯ ಸ್ಮರಣಿಕೆಯಾಗಿ ಆಯ್ಕೆ ಮಾಡಲಾಗಿದೆ.