ವಿದ್ಯಾಧಿರಾಜ ಭವನ ವಾಸ್ಕೊ
ಸಂಸ್ಥಾಪಕರು : ಶ್ರೀ ದ್ವಾರಕಾನಾಥ ತೀರ್ಥ (೨೨)
ಶಿಲಾನ್ಯಾಸ : ಶ್ರೀ ಶಕೆ ೧೮೭೮ ಚೈತ್ರ ಬಹುಳ ದ್ವಿತೀಯ (೨೭-೦೪-೧೯೫೬) ಇಂದಿರಾಕಾಂತ ಸಭಾಗ್ರಹ ಶಿಲಾನ್ಯಾಸ.
ಉದ್ಘಾಟನೆ : ಶ್ರೀಶಕೆ ೧೮೮೫ ಶೋಭಕೃತ ಸಂವತ್ಸರ, ವೈಶಾಖ ಬಹುಳ-೭ (೧೬-೦೫-೧೯೬೩) ಇಂದಿರಾಕಾಂತ ತೀರ್ಥ
ಸಭಾಗ್ರಹ ಉದ್ಘಾಟನೆ.
ಶಿಲಾನ್ಯಾಸ : ವಿದ್ಯಾಧಿರಾಜ ಭವನದ ಶಿಲಾನ್ಯಾಸ, ಶಕೆ ೧೯೧೫ ಶ್ರೀಮುಖ ಸೌಂವತ್ಸರ, ಮಾರ್ಗಶೀರ್ಷ ಶುಕ್ಲ ಚತುರ್ಥಿ,
ಶುಕ್ರವಾರ (೧೭-೧೨-೧೯೯೩)
ಉದ್ಘಾಟನೆ : ವಿದ್ಯಾಧಿರಾಜ ಭವನ ಉದ್ಘಾಟನೆ, ಶಾಲಿವಾಹನ ಶಕ ೧೯೨೦, ಬಹುಧಾನ್ಯ ಸಂವತ್ಸರ ಮಾರ್ಗಶೀರ್ಷ
ಬಹುಳ ಪ್ರತಿಪದ (೦೪-೧೨-೧೯೯೮)
ವಿಳಾಸ : ಶ್ರೀ ವಿದ್ಯಾಧಿರಾಜ ಭವನ, ಮುರಗಾಂವ ಮಠ ಸಂಕುಲ ಎಫ್.ಎಲ್. ಗೋಮ್ಸ್ ರಸ್ತೆ,
ವಾಸ್ಕೋ-ಡ-ಗಾಮಾ ಗೋವಾ ೪೦೩ ೮೦೨ ಫೋನ ೦೮೩೨-೨೫೧೯೩೧೫
ವಾಸ್ತು ವಿಸ್ತಾರ : ೧೫೦೦ ಚದರ ಮೀಟರ, ಶಾಖಾಮಠಗಳಲ್ಲಿ ೧೦೮ ಅಡಿ ಎತ್ತರ
ಕಟ್ಟಡದ ಹೆಸರು : ವಿದ್ಯಾಧಿರಾಜ ಭವನ
ಸಭಾಭವನ : ದ್ವಾರಕಾನಾಥ ಸಭಾಭವನ
ಗಣಿತದ ಇತಿಹಾಸ
ಶ್ರೀ ವಿದ್ಯಾಧಿರಾಜ ಭವನವೆಂದು ಕರೆಸಿಕೊಳ್ಳುವ ಈ ಮಠ ವಾಸ್ತುವು ಗುರುಸ್ವಾಮಿ ಶ್ರೀ ದ್ವಾರಕಾನಾಥ ತೀರ್ಥರ ಹೆಸರಿನ ಹಳೆಯ ವಾಸ್ತುವಿಗೆ ಹೊಂದಿಕೊಂಡು ತಲೆ ಎತ್ತಿ ನಿಂತಿದೆ. ಸ್ವಾಮೀಜಿಗಳ ಸ್ಫೂರ್ತಿದಾಯಕ ಮಾರ್ಗದರ್ಶನ, ಸಮಿತಿಯ ಸದಸ್ಯರು ಮತ್ತು ಇಂಜಿನಿಯರ ಇವರ ಅವಿರತ ಪ್ರಯತ್ನದಿಂದಾಗಿ ಈ ಭವ್ಯ ಮಠವಾಸ್ತು ಎದ್ದು ನಿಂತಿದೆ.
ಶಕೆ ೧೯೧೫ ಶ್ರೀಮುಖ ಸಂವತ್ಸರ ಮಾರ್ಗಶೀರ್ಷ ಶುಕ್ಲ ಚತುರ್ಥಿ ಶುಕ್ರವಾರ (೧೭.೧೨.೧೯೯೩) ರಂದು ಈ ವಾಸ್ತುವಿನ ಶಂಖುಸ್ಥಾಪನೆ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಗಳ ದಿವ್ಯ ಕರಕಮಲಗಳಿಂದ ಜರುಗಿತು. ಶ್ರೀ ಸ್ವಾಮೀಜಿಗಳು ಶಕೆ ೧೯೨೦ ಬಹುಧಾನ್ಯ ಸಂವತ್ಸರ ಮಾರ್ಗಶೀರ್ಷ ಬಹುಳ ಪ್ರತಿಪದೆಯಂದು (೦೪-೧೨-೧೯೯೮) ಈ ವಾಸ್ತುವನ್ನು ಉದ್ಘಾಟಿಸಿದರು. ಶ್ರೀ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ನಮ್ಮ ಸಮಾಜಕ್ಕೆ ಈ ವಾಸ್ತುವಿನ ಮಹತ್ವದ ಬಗ್ಗೆ ವಿವರಿಸಿದರು.