
ಶ್ರೀಮದ್ ರಮಾಕಾಂತ ತೀರ್ಥ
ಜನ್ಮಸ್ಥಳ : ಲೋಲಿಯೆ, ಕಾಣಕೊಣ
ದೀಕ್ಷಾಗುರು : ಶ್ರೀ ಲಕ್ಷ್ಮಿಕಾಂತ ತೀರ್ಥ (೧೦)
ಶಿಷ್ಯ ಸ್ವೀಕಾರ : ಶ್ರೀ ಕಮಲಾಕಾಂತ ತೀರ್ಥ (೧೨)
ಮಹಾನಿರ್ವಾಣ : ಶ್ರೀಶಕೆ ೧೬೭೨ ಪ್ರಮೋದ ಸಂವತ್ಸರ ಮಾರ್ಗಶೀರ್ಷ ಶು-೧ (೨೯-೧೧-೧೭೫೦)
ವೃಂದಾವನ ಸ್ಥಳ : ಶ್ರೀ ವೀರವಿಟ್ಠಲ ಮಠ ಅಂಕೋಲಾ
ಗುರುಪೀಠಕಾಲಾವಧಿ : ೪೩ ವರ್ಷ ೦೩ ದಿನಗಳು
ಸ್ವಾಮೀಜಿಯ ಇತಿಹಾಸ
ಸ್ವಾನ್ತಾದೋಷಪ್ರಶಾನ್ತ್ಯರ್ಥಂ ಶಾಂತಸ್ವಾಂತಮುಪಾಶ್ರಯೇ ।
ಲಕ್ಷ್ಮೀಕಾಂತಕರೋದ್ಭೂತಂ ರಮಾಕಾಂತಯತೀಶ್ವರಮ್ ॥
ಶ್ರೀ ರಮಾಕಾಂತ ತೀರ್ಥರನ್ನು ಉಲ್ಲೇಖಿಸುವ ದಾಖಲೆಗಳಲ್ಲಿ ಮೊದಲನೆಯದು ಶಕೆ ೧೬೨೯ ರದ್ದು ಮತ್ತು
ಕೊನೆಯದು ೧೬೭೨. ಈ ಆಚಾರ್ಯರ ಕಾಲಾವಧಿಯಲ್ಲಿ ಮಠವು ಸಾಕಷ್ಟು ಉತ್ಕರ್ಷಕ್ಕೆ ಕಾರಣವಾಯಿತು. ಇವರು
ಮೂಲತಃ ಲೋಲಿಯೆ ಗ್ರಾಮದ ಶೆಳೀ ವಾಡೆಯ ಆಚಾರ್ಯ ಉಪನಾಮದ ಕುಟುಂಬಕ್ಕೆ ಸೇರಿದವರು. ಕಾಣಕೊಣ ಗ್ರಾಮದ
ಇನ್ನೂ ಕೆಲಯತಿವರ್ಯರು ಗೋಕರ್ಣಮಠದ ಪೀಠವನ್ನು ಅಲಂಕರಿಸಿದ್ದು ಅವರಲ್ಲಿ ಶ್ರೀ ರಮಾಕಾಂತ ತೀರ್ಥರು
ಪ್ರಥಮರು. ಅವರು ಅಂಕೋಲಾ ಮತ್ತು ಪರ್ತಗಾಳಿ ಮಠದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಶ್ರೀಶಕೆ ೧೬೭೨ ಪ್ರಮೋದ
ಸಂವತ್ಸರ ಮಾರ್ಗಶೀರ್ಷ ಶುಕ್ಲ ಪ್ರತಿಪದೆಯಂದು ಅಂಕೋಲಾದ ಶ್ರೀ ವೀರವಿಟ್ಠಲ ಮಠದಲ್ಲಿ ಅವರು
ಮೋಕ್ಷಾರೂಢರಾದರು. ಅಲ್ಲಿಯೆ ಅವರ ವೃಂದಾವನವಿದೆ.