Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

6 Ramachandra Kannada

ಶ್ರೀಮದ್ ರಾಮಚಂದ್ರ ತೀರ್ಥರು

ದೀಕ್ಷಾಗುರು : ಶ್ರೀಮದ್ ರಾಮಚಂದ್ರತೀರ್ಥ (5)
ಸನ್ಯಾಸ ದೀಕ್ಷೆ : ಶ್ರೀಶಕೆ 1549 ಪ್ರಭಾವ ಸಂವತ್ಸರ. ಕಾರ್ತಿಕ ಶುಧ್ಧ. ನವಮಿ ಬುಧವಾರ 17/11/1627
ಶಿಷ್ಯ ಸ್ವೀಕಾರ : ಶ್ರೀಮದ್ ದಿಗ್ವಿಜಯರಾಮಚಂದ್ರತೀರ್ಥ (6)
ಮಹಾ ನಿರ್ವಾಣ : ಶ್ರೀಶಕೆ1587 ವಿಶ್ವವಾಸು ಸಂವತ್ಸರ. ವೈಶಾಖ ವದ್ಯ.ತ್ರತೀಯ, ಶನಿವಾರ 02/05/1665
ವೃಂದಾವನ ಸ್ಥಳ : ಶ್ರೀ ಮಾರುತಿ ಮಂದಿರ ರೇವಣ
ಶಿಸ್ತಿನ ಸಮಯ : 10 ವರ್ಷ 13 ದಿನಗಳು
ಗುರು ಪೀಠದ ಸಮಯ : 27 ವರ್ಷ 05 ತಿಂಗಳು 24 ದಿನಗಳು
ಮಠದ ಸೇವಾ ಅವಧಿ : 37 ವರ್ಷ 06 ತಿಂಗಳು 09 ದಿನಗಳು
ಮಠ ಸ್ಥಾಪನೆ : 1) ಶ್ರೀ ಸಂಸ್ಥಾನ ಗೋಕರ್ಣ ಪೋರ್ಚುಗಲ್ ಮಠ, ಪೋರ್ಚುಗಲ್.

2) ಶ್ರೀ ಮಾರುತಿ ಮಂದಿರ, ರಿವೋನ್.

ಸ್ವಾಮೀಜಿಯ ಇತಿಹಾಸ

ಪೀಠದ ಆರನೇ ಆಚಾರ್ಯರಾದ ಶ್ರೀಮದ್ ರಾಮಚಂದ್ರತೀರ್ಥರು ಶ್ರೀಮದ್ ಅಣುಜೀವೋತ್ತಮತೀರ್ಥರ ಶಿಷ್ಯರು. ಅವರು
ಶಕೆ 1549 ಪ್ರಭಾವ ಸಂವತ್ಸರ, ಕಾರ್ತಿಕ ಶುದ್ಧ ನವಮಿಯಂದು ಗೋಕರ್ಣದಲ್ಲಿ ತಮ್ಮ ಗುರುಗಳಿಂದ ಆಶ್ರಮವನ್ನು
ಪಡೆದರು. ಶಕೆ 1560 ರಲ್ಲಿ ಶ್ರೀಮದ್ ಅಣುಜೀವೋತ್ತಮತೀರ್ಥರ ಸಮಾಧಿಯಾದ ತಕ್ಷಣ, ಅವರ ಪಟ್ಟಾಭಿಷೇಕವಾಯಿತು.
ಮತ್ತು ಮುಂದಿನ 27 ವರ್ಷಗಳ ಕಾಲ ಅವರು ಸಂಸ್ಥಾನವನ್ನು ಆಳಿದರು, ಸಂಸ್ಥಾನದ ಬಗ್ಗೆ ಜನರಲ್ಲಿ ಗೌರವ ಮತ್ತು
ಪ್ರೀತಿಯನ್ನು ಹುಟ್ಟುಹಾಕಿದರು ಮತ್ತು ಗೋವಾದಲ್ಲಿ ಪರ್ತಗಾಳಿ ಮಠವನ್ನು ನಿರ್ಮಿಸಿದರು.
ನಂತರದಲ್ಲಿ ಗೋಕರ್ಣ ಮಠವನ್ನು ಪರ್ತಗಾಳಿ ಮಠಕ್ಕೆ ಸ್ಥಳಾಂತರಿಸಿದ್ದು ಕೇವಲ ಈ ಮಠದ ಇತಿಹಾಸದಲ್ಲಿ
ಮಾತ್ರವಲ್ಲದೆ ಒಟ್ಟಾರೆ ಸಾರಸ್ವತ ಬ್ರಾಹ್ಮಣರ ವೈಷ್ಣವ ಪಂಥದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮರ್ಯಾದಿತ
ಅರ್ಥಾತ್ ಯುಗಪ್ರವರ್ತಕ ಘಟನೆ ಎಂದು ಪರಿಗಣಿಸಲಾಗಿದೆ. ಕಾಕತಾಳೀಯವೆಂಬಂತೆ ನಡೆದದ್ದು ಹೀಗೆ - ಶ್ರೀಮದ್
ರಾಮಚಂದ್ರತೀರ್ಥ ಸ್ವಾಮಿಗಳಿಗೆ ಗೋಕರ್ಣ ಮಠದ ಹಿಂದಿನ ಶಿಲಾಗರ್ಭದಲ್ಲಿ ಆಕಸ್ಮಿಕವಾಗಿ ನಾಲ್ಕು ಕಲ್ಲಿನ ವಿಗ್ರಹಗಳು
ಪತ್ತೆಯಾದವು. ಅವು ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳಾಗಿದ್ದವು. ಈ ವಿಗ್ರಹಗಳನ್ನು ಏನು
ಮಾಡುವುದು ಎಂದು ಯೋಚಿಸುತ್ತಿರುವಾಗ ಸ್ವಾಮೀಜಿಯವರಿಗೆ ಸ್ವಪ್ನದಲ್ಲಿ ಒಂದು ದೃಷ್ಟಾಂತವಾಯಿತು. “ಈ
ವಿಗ್ರಹಗಳನ್ನು ತೆಗೆದುಕೊಂಡು ಉತ್ತರಕ್ಕೆ ಹೋಗು. ಶಿಲ್ಪಿಗೆ ವಿಗ್ರಹಗಳು ಭಾರವಾಗುವ ಸ್ಥಳದಲ್ಲಿ ಅದನ್ನು ಸ್ಥಾಪಿಸು,
”ಎಂಬುವದು ಈ ದೃಷ್ಟಾಂತವಾಗಿತ್ತು.
ಶ್ರೀಮದ್ ರಾಮಚಂದ್ರ ತೀರ್ಥರು ಎಲ್ಲಾ ನಾಲ್ಕೂ ವಿಗ್ರಹಗಳನ್ನು ತೆಗೆದುಕೊಂಡು ಸಪರಿವಾರ ಸಹಿತ ಉತ್ತರದ ಕಡೆಗೆ
ಪ್ರಯಾಣವನ್ನು ಪ್ರಾರಂಭಿಸಿದರು. ಕಾಳಿನದಿಯನ್ನು ದಾಟಿ ಈಚೆ ಕಡೆ ಬಂದರು.ಮಾಶೆ ಗ್ರಾಮದ ಮೂಲಕ ಪೈಂಗಿಣಿ
ಗ್ರಾಮಕ್ಕೆ ಬಂದರು. ಅಲ್ಲಿ ಕಲ್ಲಿನ ವಿಗ್ರಹಗಳು ಭಾರವಾದವು. ಸಹಜವಾಗಿ, ಅವರು ಈ ಸ್ಥಳದಲ್ಲಿ ಮೂರ್ತಿಯ ಸ್ಥಾಪನೆ
ಮಾಡಬೇಕಿತ್ತು. ಆದರೆ ಈ ಸ್ಥಳವು ಮಂದಿರ್ ಮಠ ಸ್ಥಾಪನೆಗೆ ಪ್ರಶಸ್ತವಾಗಿರಲಿಲ್ಲ. ಮುಖ್ಯ ವಿಷಯವೆಂದರೆ ಅಲ್ಲಿ ನೀರಿನ
ವ್ಯವಸ್ಥೆ ಇರಲಿಲ್ಲ. ಏನು ಮಾಡುವುದು ಎಂದು ಸ್ವಾಮೀಜಿಗಳು ಚಿಂತಾಕ್ರಾಂತರಾಗಿದ್ದರು.
ಅಂದೇ ರಾತ್ರಿ ಸ್ವಾಮೀಜಿಗಳಿಗೆ ಮತ್ತೊಂದು ದೃಷ್ಟಾಂತವಾಯಿತು. ‘‘ನಾಳೆ ಬೆಳಗ್ಗೆ ಒಂದು ಹಸು ಬರುತ್ತದೆ. ಅದನ್ನು
ಪೂಜಿಸಿ, ಸರಿಯಾದ ಸ್ಥಳವನ್ನು ತೋರಿಸಲು ವಿನಂತಿಸಿಕೊಳ್ಳಿ. ಅವಳು ನಿಮಗೆ ಮಾರ್ಗದರ್ಶನ ಮಾಡುತ್ತಾಳೆ. ಆವಳು
ಯಾವ ಸ್ಥಳದಲ್ಲಿ ದುಘ್ಧಧಾರೆಯನ್ನು ಹರಸುತ್ತಾಳೋ ಅಲ್ಲಿ ಯಾವ ಮೂರ್ತಿ ಭಾರವೆಂದು ಅನಿಸುತ್ತದೆಯೋ ಆ
ಮೂರ್ತಿಯನ್ನು ಪ್ರತಿಸ್ಠಾಪಿಸಿ”

ಮರುದಿನ ಬೆಳಿಗ್ಗೆ, ದೃಷ್ಟಾಂತದ ಪ್ರಕಾರ, ಕಾಮಧೇನು ಕಾಣಿಸಿಕೊಂಡಿತು. ಸ್ವಾಮೀಜಿ ಅದಕ್ಕೆ ಪೂಜೆ ಸಲ್ಲಿಸಿ ಮನವಿ
ಮಾಡಿದರು. ಹಸು ಕಾಡು ಮತ್ತು ವನಗಳ ಮೂಲಕ ಪೂರ್ವಕ್ಕೆ ಓಡಲು ಪ್ರಾರಂಭಿಸಿತು. ಸ್ವಾಮೀಜಿಯವರು ತಮ್ಮ
ಪರಿವಾರದೊಂದಿಗೆ ಪ್ರಯಾಣ ಪ್ರಾರಂಭಿಸಿದರು. ಕುಶಾವತಿ ನದಿಯ ದಡದ ಒಂದು ಸುಂದರ ಪ್ರದೇಶವನ್ನು ತಲುಪಿದ ತಕ್ಷಣ
ಹಸು ಹಾಲು ಬಿಟ್ಟಿತು. ಶ್ರೀರಾಮ, ಲಕ್ಷ್ಮಣ, ಸೀತೆಯ ಮೂರ್ತಿಗಳು ಭಾರವಾದವು. ಶ್ರೀಮದ್ ರಾಮಚಂದ್ರ ತೀರ್ಥರು ಈ
ಮೂರು ವಿಗ್ರಹಗಳನ್ನು ಈ ಸ್ಥಳದಲ್ಲಿ ಸ್ಥಾಪಿಸಲು ನಿರ್ಧರಿಸಿದರು. ಪುನಃ ಹಸು ಓಡಲು ಪ್ರಾರಂಭಿಸಿತು. ಕಾಡು ವನಗಳ
ಮೂಲಕ, ಕಲ್ಲುಬಂಡೆ, ಮುಳ್ಳುಗಳುಳ್ಳ ದುರ್ಗಮ ಮತ್ತು ಕಷ್ಟದ ಹಾದಿಯನ್ನು ದಾಟುತ್ತ ಹೋಯಿತು . ಅದನ್ನು
ಸ್ವಾಮೀಜಿಗಳು ಸೇರಿದಂತೆ ಅವರ ಪರಿವಾರದವರು ಹಿಂಬಾಲಿಸಿದರು. ಋಷಿವನ ಅಥವಾ ಇಂದಿನ ರೇವಣ ಹಳ್ಳಿಯಲ್ಲಿ ಹಸು
ಬಂದು ನಿಂತಿತು. ಅವಳು ಮತ್ತೆ ದುಘ್ಧಧಾರೆಯನ್ನು ಬಿಟ್ಟಳು. ಶ್ರೀ ಮಾರುತಿಯ ಮೂರ್ತಿ ಭಾರವಾಯಿತು. ಶ್ರೀ ಮಾರುತಿ
ಪ್ರತಿಷ್ಠಾಪನೆಗೆ ಜಾಗ ನಿಗದಿಯಾಯಿತು. ಈ ಎರಡೂ ಸ್ಥಳಗಳಲ್ಲಿ, ಆಚಾರ್ಯರು ದೇವಾಲಯಗಳು ಮತ್ತು ಮಠಗಳನ್ನು
ನಿರ್ಮಿಸಿದರು ಮತ್ತು ಆ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು.
ಪರ್ತಗಾಳಿ ಮಠವನ್ನು ಸ್ಥಾಪಿಸಿದ ಸಮಯದಲ್ಲಿ, ಕಣಕೋಣ ಅಲಿಯಾಸ್ ಶಿವೇಶ್ವರ ಮಹಲ್ ಇದು ರಾಜ ಸೋದೇಕರ್
ಅವರ ವಶದಲ್ಲಿತ್ತು. ಸೋದೆ ಇಂದಿನ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಶಿರಸಿ ಬಳಿಯ ಒಂದು ಹಳ್ಳಿ. ಅವರ
ಆಳ್ವಿಕೆಯು ಗೋವಾದ ಫೊಂಡೆ ಮಹಲ್‌ನಿಂದ ಮಂಗಳೂರಿನವರೆಗೆ ವಿಸ್ತರಿಸಿತ್ತು. ಅವರು ಮೊದಲು ವಿಜಯನಗರ ಮತ್ತು
ನಂತರ ಬಿಜಾಪುರಕರ ಅವರ ಮಾಂಡಳಿಕರಾಗಿ ಉಸ್ತುವಾರಿ ನೋಡ್ಜುತ್ತಿದ್ದರು. ಇಸ್ವಿ ಸನ್. 1656 ರಲ್ಲಿ,
ಪರ್ತಗಾಳಿಯಲ್ಲಿ ಮಠವನ್ನು ಸ್ಥಾಪಿಸಲಾಯಿತು. ನಂತರ ಪರ್ತಾಗಾಳಿ ಮಠದಲ್ಲಿ ರಾಮನವಮಿಯ ಹಬ್ಬ ಆರಂಭವಾದಾಗ
ಅದಕ್ಕೆ ತಗಲುವ ಸಾಮಗ್ರಿಗಳ ಬಗ್ಗೆ ಒಂದು ಬೇರೆ ರೀತಿಯ ವ್ಯವಸ್ಥೆ ನಡೆದಿತ್ತು. ಕಾಣಕೋಣನ ಕೆಲವು ಗ್ರಾಮಗಳ ಮೇಲೆ
‘ಸಾಮಾನ ಕರ್’ ಎಂಬ ತೆರಿಗೆಯನ್ನು ವಿಧಿಸಲಾಯಿತು. ಪ್ರತಿ ಹಳ್ಳಿಗೂ ಹಬ್ಬಕ್ಕೆ ವಿಶೇಷ ವಸ್ತುಗಳನ್ನು ನೀಡುವಂತೆ
ಆದೇಶಿಸಿಸಲಾಯಿತು. ಗ್ರಾಮಸ್ಥರು ‘ಕರ’ ವನ್ನು ಸ್ವೀಕರಿಸಿ ಉತ್ಸವದಲ್ಲಿ ಸಹಭಗಿಯಾಗಲು ಆರಂಭಿಸಿದರು.
ಶ್ರೀ ರಾಮಚಂದ್ರ ತೀರ್ಥರು ಈ ಮಠವನ್ನು ಸ್ಥಾಪಿಸಿದ್ದರೂ, ಅವರು ಹೆಚ್ಚಾಗಿ ಗೋಕರ್ಣ ಮಠದಲ್ಲಿ ವಾಸಿಸುತ್ತಿದ್ದರು.
ಅವರು ಗೋವಾದಲ್ಲಿ ಸಂಚರಿಸುವ ಸಮಯದಲ್ಲಿ ರಾಮನವಮಿ ಪ್ರೀತ್ಯರ್ಥ ಪರ್ತಗಾಳಿ ಮಠಕ್ಕೆ ಬರುತ್ತಿದ್ದರು. ಆದರೆ
ಅವರು ತಾವೇ ನಿರ್ಮಿಸಿ ಮಾರುತಿಯ ವಿಗ್ರಹವನ್ನು ಸ್ಥಾಪಿಸಿದ ರೇವಣ ಮಠದಲ್ಲಿ ದೀರ್ಘಕಾಲ ಇರುತ್ತಿದ್ದರು.
ಶ್ರೀರಾಮನಂತೆಯೇ ಅವನೂ ಮಾರುತಿಯ ಭಕ್ತರೂ ಕೂಡ ಆಗಿದ್ದರು.
.
ವೈಶಾಖ ವದ್ಯ ತೃತೀಯ ಶಕೆ 1587 ರಲ್ಲಿ ಅವರು ತಾವೇ ಸ್ಥಾಪಿಸಿದ ಈಗಿನ ರೇವಣ ಮಠದಲ್ಲಿ ಅಂದರೆ ಆಗಿನ
ಕಾಲದಲ್ಲಿ ರಿಷಿವನ್ ದಲ್ಲಿ ಸಮಾಧಿ ಹೊಂದಿದರು. ಇವರ ಕಾಲಕೀರ್ದಿಯಲ್ಲಿ ನಡೆದ ಘಟನೆಗಳ ಬಗ್ಗೆ ಅಧಿಕೃತ
ದಾಖಲೆಗಳು ಲಭ್ಯವಿವೆ.