ಶ್ರೀ ಲಕ್ಷ್ಮೀ ನಾರಾಯಣ ಮಂದಿರ ವಾರಣಾಸಿ
ಸಂಸ್ಥಾಪಕರು : ಶ್ರೀ ನಾರಾಯಣ ತೀರ್ಥ (೧)
ಸ್ಥಾಪನಾ ವರ್ಷ : ಶಾಲಿವಾಹನ ಶಕ ೧೯೩೭ ಮನ್ಮಥ ಸಂವತ್ಸರ (ಕ್ರಿ.ಶ.೧೪೭೫) ಕಾರ್ತೀಕ ಪೂರ್ಣಿಮಾ (೨೨/೧೧/೧೪೭೫)
ಮಠ ಪ್ರತಿಮಾ : ಶ್ರೀ ಲಕ್ಷ್ಮೀ ನಾರಾಯಣ (ಪಂಚಲೋಹದ ಪ್ರತಿಮೆ)
ಮಠದ ವಿಸ್ಥಾರ : ೨೨೦ ಚದರ ಮೀಟರ್ (ನೆಲ + ಎರಡು ಅಂತಸ್ತು)
ಕಟ್ಟಡದ ವಿವರ : ಗರ್ಭಗ್ರಹ, ಗುರು ಭವನ, ಕೊಠಡಿಗಳು, ಅರ್ಚಕ ನಿವಾಸ, ಸಭಾಂಗಣ, ತೆರೆದ ಟೆರೇಸ್.
ಗಣಿತದ ಇತಿಹಾಸ
ಕ್ರಿ.ಶ.೧೬೯೫ ರಲ್ಲಿ ೯ನೇ ಗುರುವರ್ಯ ಶ್ರೀ ಲಕ್ಷ್ಮೀನಾರಾಯಣ ತೀರ್ಥರು ಈ ಮಠವನ್ನು ಜೀರ್ಣೋದ್ಧಾರ ಮಾಡಲು ಎಂಟುವರ್ಷಗಳ ತನಕ ವಾರಣಾಸಿಯಲ್ಲಿ ವಾಸ್ತವ್ಯ ಮಾಡಿದ್ದರು. ನಂತರ ಶ್ರೀ ಲಕ್ಷ್ಮೀನಾಥ ತೀರ್ಥರು(೧೬), ಶ್ರೀ ದ್ವಾರಕಾನಾಥ ತೀರ್ಥರು(೨೧), ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರು (೨೩) ೧೯೭೭ ರಲ್ಲಿ ಈ ಮಠವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಪಲಿಮಾರು ಮಠದ ೧೦ ನೇ ಮಠಾಧೀಶರಾದ ಶ್ರೀ ರಾಮಚಂದ್ರತೀರ್ಥ ಸ್ವಾಮೀಜಿಯವರಿಂದ ಬದರಿನಾಥದಲ್ಲಿ ದೀಕ್ಷೆಯನ್ನು ಸ್ವೀಕರಿಸಿದ ನಂತರ ಶ್ರೀ ನಾರಾಯಣ ತೀರ್ಥರು ತಮ್ಮ ಗುರುಗಳ ಸೂಚನೆಯಂತೆ ತೀರ್ಥಯಾತ್ರೆಗೆ ತೆರಳಿದರು. ಶ್ರೀ ನಾರಾಯಣ ತೀರ್ಥರು ಉತ್ತರ ಭಾರತದ ಪವಿತ್ರ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳಿಗೆ ತಮ್ಮ ತೀರ್ಥಯಾತ್ರೆಯನ್ನು ಮಾಡಲು ನಿರ್ಧರಿಸಿದರು. ಹೀಗೆ ಕುರುಕ್ಷೇತ್ರ ಮತ್ತು ಬ್ರಹ್ಮಾವರ್ತದಂತಹ ಯಾತ್ರಾ ಸ್ಥಳಗಳಿಂದ ಬ್ರಹ್ಮಹೃದಯಕ್ಕೆ ತೆರಳುತ್ತಾ, ಅವರು ಅಂತಿಮವಾಗಿ ವಾರಣಾಸಿಯ ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಆಗಮಿಸಿದರು. ವೈಷ್ಣವರ ಈ ಪ್ರಾಚೀನ ಭೂಮಿಯನ್ನು ಭಗವಾನ ಬಿಂದುಮಾಧವನ ನಿವಾಸ ಸ್ಥಾನವಾಗಿದೆ. ಪವಿತ್ರ ಕಾರ್ತಿಕ ಮಾಸ ಸಮೀಪಿಸುತ್ತಿರುವ ಈ ಮಂಗಳಕರ ಸಮಯದಲ್ಲಿ ಪಂಚಗಂಗಾ ಘಾಟ್‌ನಲ್ಲಿ ಪವಿತ್ರ ಸ್ನಾನದ ಅಮೋಘ ಮಹತ್ವವನ್ನು ಸ್ವಾಮೀಜಿ ಅರಿತಿದ್ದರು. ವಾಸ್ತವವಾಗಿ ರಾಮಾಯಣದಲ್ಲಿ ಭಗವಾನ್ ರಾಮನು ತನ್ನ ವನವಾಸದ ಮಾರ್ಗದಲ್ಲಿ ವಾರಣಾಸಿಯಲ್ಲಿ ಒಂದು ವರ್ಷದ ವಾಸ್ತವ್ಯವನ್ನು ಮಾಡಿದನೆಂದು ಉಲ್ಲೇಖಿಸಲಾಗಿದೆ. ಕಾರ್ತಿಕ ಮಾಸದಲ್ಲಿ ಕಾಶಿಯ ರಾಜಮನೆತನದ (ವಾರಣಾಸಿ) ರಾಜಕುಮಾರಿಯು ತನ್ನ ಸಂಗಡಿಗರೊಂದಿಗೆ ಗಂಗಾಸ್ನಾನಕ್ಕಾಗಿ ಪಂಚಗಂಗಾ ಘಾಟ್‌ಗೆ ಬರುವದು ಪದ್ಧತಿ. ಅದರಂತೆ ಪಂಚಗಂಗಾ ಘಾಟಿಗೆ ಸ್ನಾನಕ್ಕೆ ಬಂದ ಅವಳು ತನ್ನ ಆಭರಣಗಳನ್ನು ದಂಡೆಯಲ್ಲಿ ಬಟ್ಟೆಯ ಮೇಲೆ ಇಟ್ಟುಕೊಂಡು ನೀರಿನಲ್ಲಿ ಮುಳುಗಿದಳು. ಆದರೆ ವಿಪರೀತ ಚಳಿಯಿಂದಾಗಿ ಅವಳು ನಡುಗಲು ಪ್ರಾರಂಭಿಸಿದಳು ಮತ್ತು ತ್ವರಿತವಾಗಿ ದಡದಲ್ಲಿದ್ದ ಒಣ ಬಟ್ಟೆಗಾಗಿ ಧಾವಿಸಿ ಅವುಗಳನ್ನು ಎಳೆದಳು. ಸ್ನಾನವನ್ನು ಮುಗಿಸಿ ಇಡೀ ರಾಜಪರಿವಾರವು ಅರಮನೆಗೆ ಮರಳಲು ಪ್ರಾರಂಭಿಸಿದಾಗ ರಾಜಕುಮಾರಿಯ ವಜ್ರಖಚಿತ ಬಳೆ ಕಳೆದುಹೋಗಿರುವುದು ಪತ್ತೆಯಾಯಿತು. ರಾಜಕುಮಾರಿಯ ಆಭರಣವನ್ನು ಕದಿಯಲು ಯಾರು ಧೈರ್ಯ ಮಾಡಿರಬಹುದು? ತೀವ್ರ ಶೋಧ ನಡೆಸಲಾಯಿತು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸ್ನಾನಘಟ್ಟದ ಒಂದು ಮೂಲೆಯಲ್ಲಿ ಸಂನ್ಯಾಸಿಯೊಬ್ಬರು ಜಪ ಅನುಷ್ಠಾನದಲ್ಲಿ ತೊಡಗಿರುವುದು ಕಂಡುಬಂದಿತು. ಅಲ್ಲಿ ಅನೇಕರು ಈ ಪರಸ್ಥಳೀಯ ಸಂನ್ಯಾಸಿಯನ್ನು ನೋಡಿದ್ದರು. ರಾಜಕುಮಾರಿಯ ಕಳೆದುಹೋದ ಆಭರಣದ ಕೋಲಾಹಲ ಇದ್ದರೂ ಅದು ಅವರ ಏಕಾಗ್ರತೆಗೆ ಭಂಗವಾಗಲಿಲ್ಲ. ಆದಾಗ್ಯೂ ಸೈನಿಕರು ಅವರ ಧ್ಯಾನಕ್ಕೆ ಭಂಗತಂದರು ಮತ್ತು ಅವರನ್ನು ಅನುಮಾನದಿಂದ ಪ್ರಶ್ನಿಸಿದರು. ಅವರ ಉತ್ತರವು ಸ್ವಯಂಪ್ರೇರಿತ ಮತ್ತು ನೇರವಾಗಿತ್ತು. "ನಾವು ಸರ್ವಸ್ವವನ್ನು ತ್ಯಜಿಸಿದ ಸಂನ್ಯಾಸಿಗಳು. ನಮ್ಮಂತಹವರಿಗೆ ಸಂಪತ್ತು ಮತ್ತು ಆಭರಣಗಳಿಂದ ಯಾವ ಪ್ರಲೋಭನೆಯೂ ಆಗಲಾರದು. ನಾವು ದಿನಕ್ಕೆ ಕೇವಲ ಒಂದು ತುತ್ತು ಊಟವನ್ನೂ ಬಯಸದಿರುವಾಗ ನಾವು ನಮ್ಮ ಸಂನ್ಯಾಸ ಧರ್ಮದ ಅಸಂಗ್ರಹ, ಅಪರಿಗ್ರಹ ವ್ರತಕ್ಕೆ ಯಾಕೆ ದ್ರೋಹಬಗೆಯುತ್ತೇವೆ”. ಶ್ರೀ ನಾರಾಯಣ ತೀರ್ಥರು ಅವರ ಆಪಾದನೆಯಿಂದ ವಿಚಲಿತರಾಗದಿದ್ದರೂ, ಸೈನಿಕರು ಅವರ ಪ್ರಾಮಾಣಿಕ ಉತ್ತರದಿಂದ ಸಮಾಧಾನಗೊಳ್ಳದೆ ಅವರನ್ನು ಶೋಧಿಸಿದರು. ಆದರೆ ಅವರಲ್ಲಿ ಏನೂ ಸಿಗದಿದ್ದಾಗ ಅವರು ವಿಚಲಿತದಾರರು. ಬೆಳಕು ಹರಿದ ನಂತರ ಶೋಧಿಸುವಂತೆ ಸಲಹೆ ನೀಡಿದರು. ಶ್ರೀ ನಾರಾಯಣ ತೀರ್ಥರ ಮುಗ್ಧತೆಯ ಬಗ್ಗೆ ಯಾವುದೇ ಅನುಮಾನ ಉಳಿಯಲಿಲ್ಲ ಬೆಳಕುಹರಿದಂತೆ ದಡದ ಸಮೀಪವಿರುವ ಆಳವಿಲ್ಲದ ನದಿಪಾತ್ರದಲ್ಲಿ ನೀರು ತಿಳಿಗೊಂಡಂತೆ ಬಳೆಗಳು ಪತ್ತೆಯಾದವು. ರಾಜಮನೆತನದವರು ಶ್ರೀ ನಾರಾಯಣ ತೀರ್ಥರ ಕ್ಷಮೆ ಕೋರಿದರು. ಮುಗ್ಧ ಸನ್ಯಾಸಿಗೆ ರಾಜಮನೆತನದವರು ಕಿರುಕುಳ ನೀಡಿದ್ದಾರೆ ಎಂದು ಕಾಶಿಯ ರಾಜನಿಗೆ ಗೊತ್ತಾಯಿತು. ಅವರು ಚಿಂತಿತರಾದರು. ರಾಜಪರಿವಾರದ ಅಕ್ರತ್ಯಕ್ಕೆ ಅವರಲ್ಲಿ ವೈಯಕ್ತಿಕ ಕ್ಷಮೆಯನ್ನು ಪಡೆಯಬೇಕೆಂದು ಅವರು ಭಾವಿಸಿದರು. ಪಂಚಗಂಗಾ ಘಾಟ್‌ಗೆ ಬಂದ ಅವರು ಶ್ರೀ ನಾರಾಯಣ ತೀರ್ಥರ ಪಾದಕ್ಕೆ ಬಿದ್ದು ಕ್ಷಮೆಯಾಚಿಸಿದರು. "ನಮಗೆ ನಾಚಿಕೆಯಾಗುತ್ತಿದೆ, ಸ್ವಾಮೀಜಿಯವರು ನಮ್ಮನ್ನು ಕ್ಷಮಿಸಬೇಕು." ನಿಮಗಾಗಿ ನಾನು ಏನು ಮಾಡಬಲ್ಲೆ, ಹೇಗೆ ನನಗೆ ಈ ಅಪರಾಧದಿಂದ ಕ್ಷಮಿಸುವಿರಿ " ಎಂದು ಪ್ರಾರ್ಥಿಸಿದನು. ಶ್ರೀ ನಾರಾಯಣ ತೀರ್ಥರು ಉತ್ತರಿಸಿದರು, "ಓ ರಾಜನೆ, ನಿಮ್ಮ ರಾಜ್ಯದಲ್ಲಿ ಧರ್ಮ ಮತ್ತು ಧಾರ್ಮಿಕತೆಗೆ ಯಾವಾಗಲೂ ಉದಾರವಾದ ಪ್ರೋತ್ಸಾಹವನ್ನು ನೀಡಲಾಗಿದೆ. ಈ ಪಂಚಗಂಗಾ ಘಾಟ್‌ನಲ್ಲಿ, ತಾಯಿ ಗಂಗಾ ತನ್ನ ದಿಕ್ಕನ್ನು ಬದಲಿಸಿ ತಿರುಗಿಸಿ ಈಶಾನ್ಯಪ್ಲವಳಾಗಿದ್ದಾಳೆ. ನಾವು ದೂರದ ಅಪರಾಂತದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ಆದರೆ ನಾವು ಕಾಶಿಯ ಪುಣ್ಯಭೂಮಿಯ ಗಂಗಾ ಮಾತೆಯಲ್ಲಿ ಅಪಾರ ಭಕ್ತಿ ಹೊಂದಿದ್ದೇವೆ. ನಮ್ಮ ಸಮುದಾಯದ ಅನೇಕ ಜನರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಬೇಕೆಂದು ಬಯಸುತ್ತಾರೆ. ಗಂಗಾಮಾತೆಯ ದರ್ಶನ ಮತ್ತು ಪವಿತ್ರ ತೀರ್ಥದಲ್ಲಿ ಸ್ನಾನ ಮಾಡುತ್ತಾರೆ. ಹಾಗಾಗಿ ನಾವು ಇಲ್ಲಿ ಮಠದ ವಾಸ್ತುವನ್ನು ಹೊಂದಲು ಬಯಸುತ್ತೇವೆ. ನಿಮ್ಮ ರಾಜಮನೆತನದವರು ಈ ಬಗ್ಗೆ ಸಕ್ರಿಯವಾಗಿ ಆಸಕ್ತಿ ವಹಿಸಿ ಸಹಕಾರ ನೀಡಿದರೆ ಅದು ಪುಣ್ಯದ ಕಾರ್ಯವಾಗುವದು." ಪಶ್ಚಾತಾಪದಗ್ದ ಕಾಶಿ ನರೇಶನು ಶ್ರೀ ನಾರಾಯಣ ತೀರ್ಥರ ಮಾತುಗಳಿಂದ ಬಹಳ ಸಮಾಧಾನಗೊಂಡನು. ಈಶಾನ್ಯಪ್ಲವ ಗಂಗೆಯ ದಂಡೆಯ ಮೇಲಿರುವ ಶ್ರೀ ಬಿಂದುಮಾಧವ ದೇವಸ್ಥಾನದ ಘಟ್ಟದ ಮೇಲೆ ಒಂದು ಮಠದ ಆವರಣವನ್ನು ನಿರ್ಮಿಸಲು ಅವರು ಸಹಾಯ ಮಾಡಿದರು. ಶ್ರೀ ನಾರಾಯಣ ತೀರ್ಥರು ಶ್ರೀ ಲಕ್ಷ್ಮೀನಾರಾಯಣನ ಪಂಚ-ಧಾತು ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು ಮತ್ತು ದೇವರ ದೈನಂದಿನ ಪೂಜೆಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಶ್ರೀ ನಾರಾಯಣ ತೀರ್ಥ ಸ್ವಾಮೀಜಿಯವರಿಗೆ ವಾರಣಾಸಿ ಪ್ರದೇಶದಲ್ಲಿಯ ಮಠ ಮತ್ತು ಸಮಾಜದ ನಡುವಿನ ಸಾಮಾಜಿಕ ಸಂಬಂಧಗಳ ಬಗ್ಗೆ ಯಾವುದೇ ಸ್ಪಷ್ಟವಾದ ಗ್ರಹಿಕೆ ಇಲ್ಲದಿರುವಾಗ ಕೂಡ ಆದ್ಯ ಮಠವನ್ನು ಸ್ಥಾಪಿಸಿದರು. ಒಂದು ಮಠದ ಸ್ಥಾಪನೆಯ ಹಿಂದಿನ ಪ್ರಾಥಮಿಕ ಉದ್ದೇಶವು ಪುಣ್ಯತಮ ಯಾತ್ರಾಸ್ಥಳದಲ್ಲಿ ಒಂದು ಸಮಾಜದ ಕೀರ್ತಿಪತಾಕೆಯನ್ನು ಸ್ಥಾಪಿಸುವದು ಮತ್ತು ಯಾತ್ರಾರ್ಥಿಯಾಗಿ ದೂರದ ದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಸುರಕ್ಷಿತ ಆಶ್ರಯತಾಣವನ್ನು ಒದಗಿಸುವುದು. ಇದು ಗೌಡ ಸಾರಸ್ವತ ಬ್ರಾಹ್ಮಣ ವೈಷ್ಣವ ಪರಂಪರೆಯ ಪ್ರಥಮ ಮಠವಾಗಿದೆ. ಹೀಗೆ ವಾರಣಾಸಿಯಲ್ಲಿ ಮೊದಲ ಮಠವನ್ನು ಸ್ಥಾಪಿಸಿದ ಶ್ರೀ ನಾರಾಯಣತೀರ್ಥ ಸ್ವಾಮೀಜಿಯವರು ಉಡುಪಿಗೆ ಮರಳಿದರು.