Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

2 Vasudev K

ಶ್ರೀ ವಾಸುದೇವ ತೀರ್ಥರು

ದೀಕ್ಷಾಗುರು : ಶ್ರೀ ನಾರಾಯಣತೀರ್ಥ (೧)
ಶಿಷ್ಯ ಸ್ವೀಕಾರ : ಶ್ರೀ ಜೀವೋತ್ತಮ ತೀರ್ಥ (೩) ೧೪೩೯ ಈಶ್ವರ ಸಂವತ್ಸರ ಮಾಘ ಶುದ್ಧ ಚತುರ್ದಶಿ
ಮಹಾನಿರ್ವಾಣ : ಶ್ರೀಶಕೆ ೧೪೪೦ ಬಹುಧಾನ್ಯ ಸಂವತ್ಸರ ವೈಶಾಖ ಶುಕ್ಲ-೩, ಮಂಗಳವಾರ (೨೩-೦೪-೧೫೧೮)
ವೃಂದಾವನ ಸ್ಥಳ : ಭೀಮಾತೀರ, ಪಂಢರಪುರ
ಗುರುಪೀಠದ ಕಾಲಾವಧಿ : ೧೧ ತಿಂಗಳು ೨೪ ದಿನಗಳು

ಸ್ವಾಮೀಜಿಯ ಇತಿಹಾಸ

ವಾಸುದೇವಗುರುಂ ವಂದೆ ರಾಗದೋಷವಿವರ್ಜಿತಮ್ ।
ಪೂತಗಾತ್ರಂ ಮಹಾಯಾತ್ರಂ ನಾರಾಯಣಕರೋದ್ಭವಮ್ ॥

ಆದ್ಯಗುರುವರ್ಯ ಶ್ರೀಮದ್ ನಾರಾಯಣ ತೀರ್ಥರ ಮಹಾನಿರ್ವಾಣದ ನಂತರ ಅವರ ಶಿಷ್ಯ ಶ್ರೀವಾಸುದೇವ ತೀರ್ಥರು ಗುರುಪೀಠವನ್ನು ಅಲಂಕರಿಸಿದರು. ಶ್ರೀ ಜೀವೋತ್ತಮ ತೀರ್ಥರಿಗೆ ೧೪೩೯ ಈಶ್ವರ ಸಂವತ್ಸರ ಮಾಘ ಶುಧ್ಧ ೧೪ರಂದು ಆಶ್ರಮವನ್ನು ನೀಡಿದ ನಂತರ ಅವರು ಪಂಢರಪುರಕ್ಕೆ ತೀರ್ಥಯಾತ್ರೆಗೆ ಹೋಗಿದ್ದಾಗ ಭೀಮಾತೀರದಲ್ಲಿ ಶ್ರೀಶಕೆ ೧೪೪೦ ಬಹುಧಾನ್ಯ ಸಂವತ್ಸರ ವೈಶಾಖ ಶುಕ್ಲ-೩ ಮಂಗಳವಾರ ವೃಂದಾವನಸ್ಥರಾದರು. ಗುರು ಪರಂಪರಾಮೃತದಲ್ಲಿ ಅವರ ಬಗ್ಗೆ ಹೀಗೆ ಉಲ್ಲೇಖಿಸಲಾಗಿದೆ –
ತಿರೇ ಭೀಮರಥಿನ್ದ್ಯಾ ವಾಸುದೇವಮುನೇರ್ಭೂತ । ವೈಶಾಖೇ ಮಾಸಿ ಶುಕ್ಲಾಯಾಂ ತೃತೀಯಾಂ ಸಮಾಧಿಭು: ।।