Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

1 Narayan K

೧ ಶ್ರೀಮದ್ ನಾರಾಯಣ ತೀರ್ಥ

ದೀಕ್ಷಾಗುರು : ಶ್ರೀ ರಾಮಚಂದ್ರತೀರ್ಥ (೧೦) ಪಲಿಮಾರುಮಠ - ಉಡುಪಿ.
ಸಂನ್ಯಾಸ ದೀಕ್ಷೆ : ಶ್ರೀ ಶಕೆ ೧೩೯೭ ಮನ್ಮಥ ಸಂವತ್ಸರ ಚೈತ್ರ ಶುಕ್ಲ ದ್ವಿತೀಯಾ, ಮತ್ಸಜಯಂತಿ, ಗುರುವಾರ (೧೮-೦೩-೧೪೭೫)
ದೀಕ್ಷಾ ಸ್ಥಳ : ದೇವಭೂಮಿ ಹಿಮಾಲಯದ ಬದರಿಕಾಶ್ರಮ (ಚಮೋಲಿ ಜಿಲ್ಲೆ ಉತ್ತರಾಖಂಡ)
ಶಿಷ್ಯ ಸ್ವೀಕಾರ : ಶ್ರೀ ವಾಸುದೇವ ತೀರ್ಥರು (೨)
ಮಹಾನಿರ್ವಾಣ : ಶ್ರೀಶಕೆ ೧೪೩೯ ಈಶ್ವರ ಸಂವತ್ಸರ ಚೈತ್ರ ಅಮಾವಾಸ್ಯೆ, ಸೋಮವಾರ (೩೦-೦೪-೧೫೧೭)
ವೃಂದಾವನ : ಗೋಪಿನದಿ ತೀರ, ಭಟ್ಕಳ (ಉತ್ತರ ಕನ್ನಡ)
ಗುರುಪೀಠ ಕಾಲಾವಧಿ : ೪೨ ವರ್ಷ ೦೧ ತಿಂಗಳು ೧೨ ದಿನಗಳು
ಮಠ ಸ್ಥಾಪನೆ : ೧. ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ (ಪಂಚಗಂಗಾ ಘಾಟ, ವಾರಣಾಸಿ, ಪಂಚಧಾತು
ಲಕ್ಷ್ಮೀನಾರಾಯಣ ಪ್ರತಿಮೆ)
೨. ವಡೇರಮಠ ಭಟ್ಕಳ ಶ್ರೀ ವಿಠಲ ಶಿಲಾ ವಿಗ್ರಹ (ಮೂಲ ಮಠ)

ಸ್ವಾಮೀಜಿಯ ಇತಿಹಾಸ

ವಡೇರಪದವೀಧಾರಂ ನಾರಾಯಣಪರಾಯಣಮ್ ।
ನಾರಾಯಣಯತಿಂ ಗೌಡಸಾರಸ್ವತ ಗುರುಂ ಭಜೇ ॥

ಫಲಿಮಾರು ಮಠದ ಹತ್ತನೇ ಮಠಾಧೀಶರಾದ ಶ್ರೀರಾಮಚಂದ್ರತೀರ್ಥರು ಬದರಿನಾರಾಯಣ ಯಾತ್ರೆಯಲ್ಲಿದ್ದಾಗ ಅಸ್ವಸ್ಥರಾದರು. ಈ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಜಾತಿಯ ಮಾಧವ ಎಂಬ ಬ್ರಹ್ಮಚಾರಿಯನ್ನು ಬಿಟ್ಟರೆ ಪರಿವಾರ ಮಂಡಳಿಯಲ್ಲಿ ಚತುರ್ಥಾಶ್ರಮಕ್ಕೆ ಯೋಗ್ಯರು ಯಾರೂ ಇರಲಿಲ್ಲ. ಮಂತ್ರ ಮುದ್ರಾಧಾರಣಾದಿಕದಿಂದ ಅಧಿಕೃತ ಶಿಷ್ಯನನ್ನು ಸ್ವೀಕರಿಸದೇ ದೇಹವು ಪಂಚತ್ವವನ್ನು ಪಡೆದರೆ ಪರಲೋಕ ದುರ್ಲಭ! ಇಂತಹ ಸಂದಿಗ್ಧತೆಯಲ್ಲಿದ್ದಾಗ ಅವರು ಸ್ವಪ್ನದಲ್ಲಿ ಶ್ರೀರಾಮದೇವರಿಂದ ಪ್ರೇರಿತರಾಗಿ ತಮ್ಮ ಪರಿವಾರದಲ್ಲಿದ್ದ ಗೌಡ ಸಾರಸ್ವತ ಬ್ರಾಹ್ಮಣ ಕುಲೋತ್ಪನ್ನ ಮಾಧವ ಎಂಬ ವಟುವಿಗೆ ಶಕೆ ೧೩೯೭ ಮನ್ಮತ ಸಂವತ್ಸರ ಚೈತ್ರ ಶುದ್ಧ ದ್ವಿತೀಯದಂದು ವಿಧಿಪುರಸ್ಸರವಾಗಿ ಆಶ್ರಮದೀಕ್ಷೆ, ದಂಡಧಾರಣಾದಿಗಳನ್ನು ನೀಡಿ ಶಿಷ್ಯನನ್ನಾಗಿ ಮಾಡಿದರು; ಮತ್ತು ಶ್ರೀನಾರಾಯಣತೀರ್ಥ ಎಂಬುದಾಗಿ ನಾಮಾಭಿದಾನ ಮಾಡಿದರು.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಎಂದು ಖ್ಯಾತಿವೆತ್ತ ಈ ಗುರುಮಠವು ನಿಜವಾದ ಅರ್ಥದಲ್ಲಿ ಹಿಮಾಲಯದ ಬದರಿಕಾಶ್ರಮದಲ್ಲಿ ಚೈತ್ರ ಶುಕ್ಲ ದ್ವಿತೀಯಾ, ಶಕೆ ೧೩೯೭ (೧೪೭೫ ಕ್ರಿ.ಶ.) ರಂದು ಸ್ಥಾಪಿಸಲಾಯಿತು. ಮಾಧ್ವ ಪಂಥದ ದ್ವೈತ ಸಂಪ್ರದಾಯದ ತತ್ವವನ್ನು ಪ್ರಚಾರ ಮಾಡಲು ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠವನ್ನು ಸ್ಥಾಪಿಸಿದ್ದರು. ಈ ಅಷ್ಟಮಠಗಳಲ್ಲಿ ಫಲಿಮಾರು ಮಠವೂ ಒಂದು. ಪಶ್ಚಿಮ ಭಾರತದಲ್ಲಿ ಹರಡಿರುವ ವೈಷ್ಣವ ಪಂಥದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯವು ಈ ಮಠದ ಅನುಯಾಯಿಗಳಾಗಿದ್ದರು.

ಸಂನ್ಯಾಸ ವ್ರತದ ದೀಕ್ಷೆಯನ್ನು ಸ್ವೀಕರಿಸಿದ ಶ್ರೀನಾರಾಯಣ ತೀರ್ಥರು ಉತ್ತರ ಭಾರತದ ತೀರ್ಥಯಾತ್ರೆಯನ್ನು ಮುಗಿಸಿದ ನಂತರವೇ ಉಡುಪಿಗೆ ಮರಳಲು ನಿರ್ಧರಿಸಿದರು. ವಾರಣಾಸಿಯು ಪ್ರಾಚೀನ ವೈಷ್ಣವ ಸ್ಥಳಗಳಲ್ಲಿ ಒಂದಾಗಿದ್ದು ಇದು ಶ್ರೀಮನ್ನಾರಾಯಣನ ವಾಸಸ್ಥಾನ ಎಂದು ಪುರಾಣಗಳಲ್ಲಿ ಉಲ್ಲೇಖಿಸಿದೆ. ಕಾರ್ತಿಕ ಮಾಸದಲ್ಲಿ ಪಂಚಗಂಗಾ ಘಾಟ್‌ನಲ್ಲಿರುವ ಸ್ಥಳಕ್ಕೆ ವಿಶಿಷ್ಟವಾದ ಮಹತ್ವವಿದೆ ಎಂದು ಅವರು ಅರಿತ್ತಿದ್ದರು. ರಾಮಚಂದ್ರನು ವನವಾಸದಲ್ಲಿದ್ದಾಗ ವಾರಣಾಸಿಯಲ್ಲಿ ಒಂದು ವರ್ಷ ವಾಸ್ತವ್ಯಮಾಡಿದ್ದನೆಂದು ಆನಂದ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.

ಅಂದಿನ ಪಂಚಗಂಗಾ ಘಾಟ್‌ನ ಪ್ರಶಾಂತ ವಾತಾವರಣದಿಂದ ಶ್ರೀ ನಾರಾಯಣ ತೀರ್ಥರು ಆಕರ್ಷಿತರಾಗಿದ್ದರು. ಅವರು ಆನಂದ ರಾಮಾಯಣದ ಒಂದು ಶ್ಲೋಕವನ್ನು ತಮ್ಮ ಮನಸ್ಸಿನಲ್ಲಿಯೇ ಹೇಳುತ್ತಿದ್ದರು.

ತಥಾ ಚಕಾರ ರಾಮೋಽಪಿ ಘಟ್ಟಬಂಧನಮುತ್ತಮಮ್ |
ದೃಶ್ಯತೆ ಪ್ರತ್ಯಹಂ ಯತ್ರ ಕಾಶ್ಯಾಂ ರಾಮಃ ಸಸೀತಯಾ||
ಚಕಾರ ಪಂಚಗಂಗಾಯಾಂ ಕಾರ್ತೀಕ ಸ್ನಾನಮುತ್ತಮಮ್ |
ಕಾಶೀವಾಸಂ ವರ್ಷಮೇಕಂ ಚಕಾರ ಧರ್ಮ ತತ್ಪರಃ ||
(ಆನಂದ ರಾಮಾಯಣ ೩/೬/೩೭/೩೮)

ಕಾರ್ತಿಕ ಮಾಸದ ಘಟನೆ. ಕಾಶಿ ರಾಜಕುಮಾರಿಯು ತನ್ನ ಸಖಿ ಮತ್ತು ದಾಸಿಯರೊಂದಿಗೆ ಪ್ರಾತಃಕಾಲದಲ್ಲಿ ಗಂಗಾ ಸ್ನಾನಕ್ಕೆ ಬಂದಿದ್ದಳು. ಎಂದಿನ ಪದ್ಧತಿಯಂತೆ ದೇಹದ ಮೇಲಿದ್ದ ಬೆಲೆಬಾಳುವ ಆಭರಣಗಳನ್ನು ಕಳಚಿ ವಸ್ತ್ರದಲ್ಲಿ ಸುತ್ತಿ ನದಿಯ ದಂಡೆಯ ಮೇಲೆ ಇಟ್ಟಳು. ರಾಜಕುಮಾರಿಯು ಗಂಗಾನದಿಯಲ್ಲಿ ಸ್ನಾನ ಮಾಡಿದಾಗ ತೀವ್ರವಾದ ಚಳಿಯಿಂದಾಗಿ ಮೈಯಲ್ಲಿ ನಡುಕವುಂಟಾಯಿತು. ಸ್ನಾನದ ನಂತರ ಆತುರಾತುರವಾಗಿ ದಡದಲ್ಲಿದ್ದ ಒಣ ಬಟ್ಟೆಯನ್ನು ಎಳೆದು ತನ್ನ ಮೈಮೇಲಿದ್ದ ಒದ್ದೆ ಬಟ್ಟೆಯನ್ನು ಬಿಡಿಸಿದಳು. ಕ್ರಮೇಣ, ಇಡೀ ಪರಿವಾರವು ಸ್ನಾನ ಮುಗಿಸಿ ಅರಮನೆಗೆ ಮರಳಲು ಸಿದ್ಧರಾದಾಗ, ರಾಜಕುಮಾರಿಯ ವಜ್ರಖಚಿತವಾದ ಬಳೆಯು ಕಾಣದಾಗಿತ್ತು. ಇದೀಗ ತೆಗೆದು ಇಟ್ಟ ಕಂಕಣ ಎಲ್ಲಿಗೆ ಹೋಗುತ್ತದೆ? ಹುಡುಕಾಟ ಶುರುವಾಯಿತು. ಈ ಸ್ಥಳದಲ್ಲಿ ರಾಜಕುಮಾರಿಯ ಬಳೆಯನ್ನು ಕದಿಯಲು ಯಾರು ಧೈರ್ಯ ಮಾಡುತ್ತಾರೆ?. ಹುಡುಕಾಟ ಪ್ರಾರಂಭಿಸಿದಾಗ ಸೇವಕರಿಗೆ ಗಂಗಾನದಿಯ ದಡದ ಒಂದು ಮೂಲೆಯಲ್ಲಿ ಒಬ್ಬ ಸಂನ್ಯಾಸಿ ಜಪಾನುಷ್ಠಾನ ಮಾಡುತ್ತ ಕುಳಿತಿರುವುದು ಕಂಡುಬಂದಿತು. ಅಲ್ಲಿ ಅನೇಕರು ಈ ಸಂನ್ಯಾಸಿಯನ್ನು ನೋಡಿದ್ದರು. ರಾಜಕುಮಾರಿಯ ಆಭರಣಗಳು ಕಳೆದುಹೋದದ್ದು ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು, ಆದರೆ ಶ್ರೀನಾರಾಯಣ ತೀರ್ಥರ ಧ್ಯಾನಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಸೈನಿಕರು ಬಂದು ಅವರನ್ನು ವಿಚಾರಣೆಗೊಳಿಸಿದರು ಮತ್ತು ರಾಜಕುಮಾರಿಯ ಕಳೆದುಹೋದ ಬಳೆಯ ಬಗ್ಗೆ ಅವರಲ್ಲಿ ವಿಚಾರಿಸಿದರು. ಅವರ ಮೇಲೆ ಸಂಶಯ ವ್ಯಕ್ತಪಡಿಸಿದರು. “ಸರ್ವಸಂಗ ಪರಿತ್ಯಾಗ ಮಾಡಿ ಸಂನ್ಯಾಸ ವೃತ ಸ್ವೀಕರಿಸಿದ ನಾವು ಧನ ಕನಕಾದಿ ವಸ್ತುಗಳ ಆಮಿಷಕ್ಕೆ ಒಳಗಾಗಲು ಯಾವುದೇ ಕಾರಣವಿಲ್ಲ. ಕೇವಲ ಎರಡು ಹೊತ್ತಿನ ಊಟದ ಬಗ್ಗೆಯೂ ಕಾಳಜಿಯಿಲ್ಲದ ಸಂನ್ಯಾಸಿಗಳು ಇಂಥ ಆಮಿಶಗಳಿಗೆ ಮೋಸ ಹೋಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಈ ಘಟನೆಯಿಂದ ಶ್ರೀನಾರಾಯಣತೀರ್ಥರು ವಿಚಲಿತರಾಗಲಿಲ್ಲ. ಆದರೆ ಸೈನಿಕರು ಅವರ ನೇರವಾದ ಭಾಷೆ ಅರ್ಥವಾಗದೆ ತಪಾಸಣೆ ನಡೆಸಿ ಏನೂ ಸಿಗದಿದ್ದಾಗ, ಭೀತರಾದರು. ಈಗ ಸೈನಿಕರಿಗೆ ಯಾವುದೇ ಸಂದೇಹ ಉಳಿಯಲಿಲ್ಲ. ಬೆಳಕು ಹರಿದಂತೆ ನೀರು ತಿಳಿಯಾದಂತೆ ಗಂಗಾನದಿಯಲ್ಲಿ ಹುಡುಕಿದಾಗ ಕಳೆದು ಹೋದ ಬಳೆಗಳು ಅಲ್ಲಿ ಸಿಕ್ಕಿದವು. ರಾಜಮನೆತನದವರು ಶ್ರೀನಾರಾಯಣ ತೀರ್ಥರಲ್ಲಿ ಕ್ಷಮೆ ಯಾಚಿಸಿದರು.

ಅಮಾಯಕ ಸಂನ್ಯಾಸಿಯ ಮೇಲೆ ರಾಜಪರಿವಾರದ ದುರ್ವರ್ತನೆಯ ಸುದ್ದಿ ಕಾಶಿ ರಾಜನ ಕಿವಿಗೆ ಬಿತ್ತು. ಈ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಕಾಶಿರಾಜನು ಪಂಚಗಂಗಾ ಘಾಟಿಗೆ ಬಂದು ಶ್ರೀನಾರಾಯಣತೀರ್ಥರಿಗೆ ನಮಸ್ಕರಿಸಿದರು. “ನಡೆದ ಘಟನೆಯ ಬಗ್ಗೆ ನಮಗೆ ನಾಚಿಕೆಯಾಗುತ್ತದೆ. ಸ್ವಾಮೀಜಿಯವರು ನಮ್ಮನ್ನು ಕ್ಷಮಿಸಬೇಕು” ಎಂದು ಕಾಶಿ ನರೇಶನು ಪ್ರಾರ್ಥಿಸಿದನು. ಶ್ರೀನಾರಾಯಣತೀರ್ಥರು, ‘‘ನಿಮ್ಮ ರಾಜ್ಯದಲ್ಲಿ ಧರ್ಮ ಮತ್ತು ಧಾರ್ಮಿಕತೆಗೆ ಸದಾ ಉದಾರ ಆಶ್ರಯ ನೀಡಲಾಗಿದೆ. ಈ ಪಂಚಗಂಗಾ ಘಾಟಿನ ಹತ್ತಿರ ಗಂಗಾ ಮಾತೆಯು ತನ್ನ ದಿಕ್ಕನ್ನು ಬದಲಾಯಿಸಿ ಈಶಾನ್ಯಪ್ಲವಳಾಗಿದ್ದಾಳೆ. ಇದೊಂದು ಅತ್ಯಂತ ಪವಿತ್ರ ಕ್ಷೇತ್ರ. ನಮ್ಮ ಶಿಷ್ಯರು ಬಹಳ ದೂರ ದೂರದ ಪ್ರದೇಶದಿಂದ ಗಂಗಾ ಮಾತೆಯ ದರ್ಶನ ಮತ್ತು ಈಶಾನ್ಯಪ್ಲವಾ ಪುಣ್ಯ ಗಂಗಾಸ್ನಾನಕ್ಕಾಗಿ ಇಲ್ಲಿ ಆಗಿಂದಾಗ ಬರುತ್ತಿರುತ್ತಾರೆ. ಅಂಥವರ ಅನುಕೂಲಕ್ಕಾಗಿ ಇಲ್ಲಿ ಒಂದು ಮಠ ವಾಸ್ತುವನ್ನು ನಿರ್ಮಿಸಬೇಕೆಂಬುದು ನಮ್ಮ ಮನದಿಚ್ಚೆಯಿದ್ದು ಕಾಶಿ ನರೇಶನು ಮನಸ್ಸು ಮಾಡಿದಲ್ಲಿ ಈ ಪುಣ್ಯ ಕಾರ್ಯವು ಘಟಿಸಬಲ್ಲದು.” ಎಂದರು.

ಪಶ್ಚಾತಾಪದಘ್ದ ಕಾಶಿ ನರೇಶನಿಗೆ ಶ್ರೀ ನಾರಾಯಣ ತೀರ್ಥರ ಮನೋದಯ ಅರ್ಥವಾಯಿತು. ಅದೇ ಘಾಟಿನಲ್ಲಿ ಬಿಂದುಮಾಧವ ಮಂದಿರದ ಎದುರು ಈಶಾನ್ಯಪ್ಲವ ಗಂಗೆಯ ತೀರದಲ್ಲಿ ಒಂದು ಮಠ ವಾಸ್ತುವನ್ನು ಕಟ್ಟಿಸಿದರು. ಅಲ್ಲಿ ಪಂಚಧಾತುಮಯ ಶ್ರೀ ಲಕ್ಷ್ಮೀನಾರಾಯಣ ದೇವರ ಪ್ರತಿಮೆಯನ್ನು ವಿಧಿವತ್ ಪ್ರತಿಷ್ಠಾಪಿಸಿ ಶ್ರೀ ನಾರಾಯಣ ತೀರ್ಥರಿಗೆ ನಿತ್ಯಪೂಜೆಯ ಅನುಕೂಲ ಮಾಡಿಕೊಟ್ಟರು. ಇದು ಗೌಡ ಸಾರಸ್ವತ ಬ್ರಾಹ್ಮಣ ವೈಷ್ಣವ ಪರಂಪರೆಯ ಪ್ರಪ್ರಥಮ ಮಠವಾಗಿದೆ, ಈ ಘಟನೆಯು ಶ್ರೀಶಕೆ ೧೩೯೭ ಮನ್ಮಥ ಸಂವತ್ಸರದಲ್ಲಿ (ಕ್ರಿ.ಶ. ೧೪೭೫) ಜರುಗಿದೆ.

ಕಾಶಿಯಲ್ಲಿ ಶ್ರೀಮಠದ ಸ್ಥಾಪನೆ ಮಾಡಿದ ನಂತರ ಶ್ರೀ ನಾರಾಯಣ ತೀರ್ಥರು ಉಡುಪಿಗೆ ಬಂದರು. ಅನಾರೊಗ್ಯದಿಂದ ಬಳಲುತ್ತಿದ್ದ ಫಲಿಮಾರು ಮಠದ ಗುರುವರ್ಯ ಶ್ರೀಮದ್ ಶ್ರೀರಾಮಚಂದ್ರ ತೀರ್ಥರು ಕೆಲವೇ ದಿನಗಳಲ್ಲಿ ಗುಣಮುಖರಾಗಿ ಸ್ವಮಠಕ್ಕೆ ಮರಳಿದರು. ಶ್ರೀ ನಾರಾಯಣ ತೀರ್ಥರನ್ನು ಕಂಡು ಅವರ ಮನಸ್ಥಿತಿಯಲ್ಲಿ ದ್ವಂದ್ವ ಉಂಟಾಯಿತು. ತೀರ್ಥಯಾತ್ರೆಯಲ್ಲಿ ಯಾರು ಅವರ ಸೇವೆಯನ್ನು ಉತ್ತಮವಾಗಿ ಮಾಡಿ ಸಂನ್ಯಾಸ ದೀಕ್ಷೆ ಪಡೆದ ನಂತರ ಶ್ರೀ ವಾರಣಾಸಿ ಕ್ಷೇತ್ರದಲ್ಲಿ ತಮ್ಮ ಕೀರ್ತಿಪತಾಕೆಯನ್ನು ಹಾರಿಸಿ ಮರಳಿದರೋ ಅಂಥ ಶ್ರೀ ನಾರಾಯಣ ತೀರ್ಥರಿಗೆ ಪೀಠಾಧಿಕಾರವನ್ನು ನೀಡುವದು ಅಲ್ಲಿಯ ದ್ರವಿಡ ಬ್ರಾಹ್ಮಣರಿಗೆ ಇಷ್ಟವಾಗಲಿಲ್ಲ. ಪಲಿಮಾರು ಮಠದ ಗುರುವರ್ಯರು ತಮ್ಮ ಶಿಷ್ಯ ಶ್ರೀ ವಿದ್ಯಾನಿಧಿ ತೀರ್ಥರನ್ನು ಉತ್ತರಾಧಿಕಾರಿ ಎಂದು ನೇಮಿಸಿದರು ಮತ್ತು ಶ್ರೀ ನಾರಾಯಣ ತೀರ್ಥರಿಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಂಘಟನೆ ಮಾಡಿ ಸ್ವತಂತ್ರ ಮಠ ಪರಂಪರೆಯನ್ನು ಕಟ್ಟುವಂತೆ ಸೂಚಿಸಿದರು. ಉಡುಪಿಯಿಂದ ಶ್ರೀ ನಾರಾಯಣ ತೀರ್ಥರು ಭಟ್ಕಳಕ್ಕೆ ಬಂದು ಅಲ್ಲಿ ಒಂದು ಮಠವಾಸ್ತುವನ್ನು ನಿರ್ಮಿಸಿ ಪರಶುರಾಮ ಕ್ಷೇತ್ರದ ಸಾರಸ್ವತ ಸಮಾಜದ ಮಧ್ಯೆ ಧರ್ಮಪ್ರಸಾರದ ಕಾರ್ಯ ಪ್ರಾರಂಭಿಸಿದರು.