೩೦ ಶ್ರೀ ಜೀವೋತ್ತಮ ಮಠ, ಪರ್ವರಿ
ಸಂಸ್ಥಾಪಕರು : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಶಿಲಾನ್ಯಾಸ : ಶಕೆ ೧೯೨೦ ಬಹುಧಾನ್ಯ, ಮಾರ್ಗಶೀರ್ಷ ಪೂರ್ಣಿಮಾ (೦೩-೧೨-೧೯೯೮)
ಉದ್ಘಾಟನೆ : ಶಕೆ ೧೯೨೨ ವಿಕ್ರಮ ಸಂವತ್ಸರ ಕಾರ್ತಿಕ ಬಹುಳ ಸಪ್ತಮಿ (೧೮-೧೧-೨೦೦೦)
ವಿಳಾಸ : ಶ್ರೀ ಜೀವೋತ್ತಮ ಮಠ, ಆಲ್ಟೊ, ಪರ್ವೊರಿಮ್, ಗೋವಾ ೪೦೩ ೫೨೧
ಭೂವಿಸ್ಥಾರ : ೧೫೭೩ ಚದರ ಮೀಟರ
ವಾಸ್ತುನಿರ್ಮಾಣ : ೭೭೧ ಚದರ ಮೀಟರ
ಕಟ್ಟಡದ ವಿವರಗಳು : ಸಭಾಗ್ರಹ, ಡೈನಿಂಗ್ ಹಾಲ್, ಅಡುಗೆ ಮನೆ
ಸಭಾಭವನ : ಶ್ರೀ ದ್ವಾರಕಾನಾಥ ಸಭಾಗ್ರಹ (ಹವಾ ನಿಯಂತ್ರಿತ)
ಗೋವಾದ ಮಾಂಡವೀ ನದಿಯ ಉತ್ತರದಡದಲ್ಲಿ ವಿಸ್ಥಾರಗೊಂಡ ಒಂದು ಉಪನಗರ ಪರವರಿ. ಗೋವಾ ರಾಜ್ಯದ ವಿಧಾನಸಭೆಯ ಭವ್ಯವಾಸ್ತು ಇದೇ ಉಪನಗರದಲ್ಲಿದೆ. ಪಣಜಿಯಲ್ಲಿ ಸ್ಥಳ ಸಂಪಾದಿಸುವದು ದುರ್ಲಭವಾದ್ದರಿಂದ ಕೇವಲ ಪಣಜಿ ನಿವಾಸಿಗರಿಗಷ್ಟೆ ಅಲ್ಲದೆ ಪಣಜಿಯಿಂದ ಡಿಚೋಲಿ ತನಕದ ಸಮಾಜ ಬಾಂಧವರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ ಉಪಲಬ್ಧ ಮಾಡಿಕೊಡುವ ನಿಟ್ಟಿನಲ್ಲಿ ಪರವರಿಯಲ್ಲಿ ನೂತನ ಶಾಖಾಮಠ ಕಟ್ಟುವ ನಿರ್ಧಾರ ಕೈಗೊಂಡರು ಮತ್ತು ಪರವರಿಯಲ್ಲಿ ಒಂದು ನಿವೇಶನ ಸಂಪಾದಿಸಿ ಶ್ರೀಶಕೆ ೧೯೨೦ ಬಹುಧಾನ್ಯ ಸಂವತ್ಸರ ಮಾರ್ಗಶೀರ್ಷ ಪೂರ್ಣಿಮೆಗೆ ಶಿಲಾನ್ಯಾಸ ನೆರವೇರಿಸಿದರು. ಅಲ್ಪಕಾಲದಲ್ಲಿ ಅಲ್ಲಿ ಜೀವೊತ್ತಮ ಮಠದ ವಾಸ್ತು ತಲೆಯೆತ್ತಿತು. ನೇತ್ರದೀಪಕ ವಾಸ್ತುವಿನ ಉದ್ಘಾಟನೆ ಶ್ರೀ ಶಕೆ ೧೯೨೨ ವಿಕ್ರಮ ಸಂವತ್ಸರ ಕಾರ್ತಿಕ ವದ್ಯ ಸಪ್ತಮಿಯಂದು ಶ್ರೀ ವಿದ್ಯಾಧಿರಾಜತೀರ್ಥರ ಅಮೃತಹಸ್ತದಿಂದ ಸಂಪನ್ನಗೊಂಡಿತು. ಪಣಜಿ-ಮುಂಬೈ ಹೆದ್ದಾರಿಯಲ್ಲಿರುವ ಈ ವಾಸ್ತು ಮಠದವೈಭವಕ್ಕೆ ಮೆರಗನ್ನು ನೀಡಿತು.