ಶ್ರೀ ದ್ವಾರಕಾನಾಥ ಭವನ
ಸಂಸ್ಥಾಪಕರು : ಶ್ರೀ ದ್ವಾರಕಾನಾಥ ತೀರ್ಥ (೨೨)
ಸ್ಥಾಪನಾ ವರ್ಷ : ಬಸವನಗುಡಿಯಲ್ಲಿ ಒಂದು ಸಣ್ಣ ಕಟ್ಟಡದೊಂದಿಗೆ ಒಂದು ನಿವೇಶನವನ್ನು ಖರೀದಿಸಿ
ಶ್ರೀ ದ್ವಾರಕಾನಾಥ ಭವನ ಎಂದು ಶಕ ೧೮೭೯ ಹೇವಿಳಂಬಿ, ಅಶ್ವೀಜ ಶುಕ್ಲ ಪ್ರತಿಪದ,
(೨೪-೦೯-೧೯೫೭) ರಂದು ಉದ್ಘಾಟಿಸಿದರು.
ನವೀಕರಣ : ನವೀಕರಿಸಿದ ಕಟ್ಟಡವನ್ನು ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ೨೭-೦೧-೧೯೮೫ ರಂದು
ಉದ್ಘಾಟಿಸಿದರು.
ವಿಳಾಸ : ಶ್ರೀ ದ್ವಾರಕಾನಾಥ ಭವನ, ಎಂ. ಎನ್. ಕೃಷ್ಣರಾವ್ ಪಾರ್ಕ್, ೨೯ ಕೆ. ಆರ್. ರಸ್ತೆ, ಬಸವನಗುಡಿ
ಬೆಂಗಳೂರು ೫೬೦ ೦೦೪, ದೂರವಾಣಿ: ೦೮೦ ೨೨೬೧೨೧೧೬
ಭೂಪ್ರದೇಶ : ೧೦,೦೦೦ ಚ.ಮೀ
ಕಟ್ಟಡದ ವಿವರಗಳು : ಕಲ್ಯಾಣ ಮಂಟಪ, ಪಾಕಶಾಲೆ, ಭೋಜನ ಶಾಲೆ, ರೂಮ್ಸ. ಆಫಿಸ್ ಇತ್ಯಾದಿ.
ಸಭಾಭವನ : ೧) ಶ್ರೀ ವಿದ್ಯಾಧಿರಾಜ ಭವನ
: ೨) ನಂದಗೋಕುಲ (ವಾಸ್ತವ್ಯದ ಕೊಠಡಿ)
ಪಂಚ ಪರ್ವ ಉತ್ಸವ : ವರ್ಧಂತಿ ಉತ್ಸವ, ರಾಮ ನವಮಿ, ಗಣೇಶೋತ್ಸವ.
ಗಣಿತದ ಇತಿಹಾಸ
೧೯೫೭ ೩೧.೦೫.೧೯೫೭ (ಶ್ರಾವಣ ಶುಕ್ಲ ತೃತೀಯ) ರಂದು ಬೆಂಗಳೂರಿನ ಬಸವನಗುಡಿಯಲ್ಲಿ ರೂ. ೬೦,೦೦೦/- ಗಳಿಗೆ ಒಂದು ಜಾಗೆಯನ್ನು ಖರೀದಿಸಲಾಯಿತು.
೧೯೫೭ ೨೪.೦೯.೧೯೫೭ (ಆಶ್ವೀಜ ಶುಕ್ಲ ಪಾಡ್ಯ) ರಂದು ಶ್ರೀ ದ್ವಾರಕಾನಾಥ ಭವನದ ಉದ್ಘಾಟನೆ.
೧೯೫೮ ಶ್ರೀ ಚಿತ್ರಾಪುರ ಮಠಾಧೀಶ ಶ್ರೀ ಆನಂದಾಶ್ರಮ ಸ್ವಾಮೀಜಿಗಳಿಗೆ ಶ್ರೀ ದ್ವಾರಕಾನಾಥ ತೀರ್ಥ ಸ್ವಾಮೀಜಿಯವರಿಂದ ಸನ್ಮಾನ
೧೯೬೦ ಶ್ರೀ ದ್ವಾರಕಾನಾಥ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ. ಪೇಜಾವರ ಮಠಾಧೀಶ ಶ್ರೀ ವಿಷ್ವೇಶ ತೀರ್ಥ ಸ್ವಾಮೀಜಿ ಮತ್ತು ವಿದ್ಯಮಾನ್ಯ ಶ್ರೀ ಭಂಡಾರಕೇರಿ ಮಠಾಧೀಶರಿಗೆ ದ್ವಾರಕಾನಾಥ ಭವನದಲ್ಲಿ ಸನ್ಮಾನ
೧೯೭೯ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಗಳ ಚಾತುರ್ಮಾಸ
ಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮಗಳು: ಉಪಾಕರ್ಮ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ, ಶ್ರೀ ರಾಮನವಮಿ, ಶ್ರೀ ಅನಂತ ವೃತ, ಶ್ರೀ ಮಾಧ್ವ ಜಯಂತಿ, ನವರಾತ್ರಿ,
ಪ್ರತಿ ಶನಿವಾರದಂದು ಶ್ರೀ ವೆಂಕಟೇಶ ಭಜನಾಮಂಡಳಿಯಿಂದ ಭಜನಾ ಸೇವೆ.