Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

23 Manki Kannada

ಶ್ರೀ ಲಕ್ಷ್ಮೀವೆಂಕಟೆಶ ಮಠ, ಮಾಣಿಕ್ಯಪುರ (ಮಂಕಿ)


ಸಂಸ್ಥಾಪಕರು : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಶಿಲಾನ್ಯಾಸ : ಸ್ಥಳಾಂತರಪೂರ್ವಕ ನೂತನ ಸ್ಥಳದಲ್ಲಿ ಶಿಲಾನ್ಯಾಸ ೨೪-೦೫-೧೯೮೧
ಉದ್ಘಾಟನೆ : ಶ್ರೀ ವೆಂಕಟರಮಣ ದೇವರ ಶಿಲಾಪ್ರತಿಮೆ, ಶಿಖರಕಲಶ ಪ್ರತಿಷ್ಠಾ, ಶಕೆ ೧೯೦೬ ರುಧಿರೋದ್ಘಾರಿ ಸಂವತ್ಸರ
ವೈಶಾಖ ಬಹುಳ ಷಷ್ಠಿ (೦೧-೦೬-೧೯೮೩)
ಭೂವಿಸ್ತಾರ : ೩೦೭೫ ಚ.ಮೀ
ವಾಸ್ತು ವಿವರ : ಗರ್ಭಗೃಹ, ಸಂಧ್ಯಾಮಂಟಪ, ಅಗ್ರಶಾಲೆ, ಅರ್ಚಕ ನಿವಾಸ, ಗುರು ಭವನ, ಸಭಾಗೃಹ, ಭೋಜನಶಾಲಾ,
ವಾಸ್ತವ್ಯಕ್ಕೆ ಕೊಠಡಿ
ಸಭಾಭವನ : ಶ್ರೀ ವಿದ್ಯಾಧಿರಾಜ ಸಭಾಭವನ
ಪಂಚಪರ್ವ ಉತ್ಸವ : ವರ್ಧಂತಿ ಉತ್ಸವ ವೈಶಾಖ ಬಹುಳ ಷಷ್ಠಿ

ಮಾಣಿಕ್ಯಪುರ (ಮಂಕಿ) ಶ್ರೀ ವೆಂಕಟರಮಣ ದೇವಸ್ಥಾನ

ಮಾಣಿಕ್ಯಪುರ (ಮಂಕಿ) ಉ. ಕ. ಜಿಲ್ಹೆ ಹೊನ್ನಾವರ ತಾಲೂಕಿನಿಂದ ೧೨ ಕಿ.ಮಿ ದೂರವಿರುವ ಒಂದು ಚಿಕ್ಕ ಹಳ್ಳಿ. ಅತಿ ಚಿಕ್ಕ ಹಳ್ಳಿಯಾದರೂ ಶೃದ್ಧಾ ಭಕ್ತಿಗಳಿಂದ ಕೂಡಿದ ಜನರಿಗೆ ಅಂದು ಶರಾವತಿ ನದಿ ದಾಟಿ ದೂರದ ಹೊನ್ನಾವರ ತಲುಪುವದು ಅತಿ ಕಷ್ಟದ ಕೆಲಸವಾಗಿತ್ತು.ಇಲ್ಲಿ ತಮ್ಮ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕೇಂದ್ರದ ಅವಶ್ಯಕತೆ ಮನಗೊಂಡು ಆಗಿನ ಸಮಾಜದ ಹಿರಿಯರೆಲ್ಲರೂ ಸೇರಿ ಹತ್ತು ಸಮಸ್ತರ ವತಿಯಿಂದ ಶ್ರೀ ಪರ್ತಗಾಳಿ ಮಠಾಧೀಶ ಶ್ರೀಮದ್ ಇಂದಿರಾಕಾಂತ ತೀರ್ಥರಲ್ಲಿ ಬಿನ್ನವಿಸಿ ಒಂದು ಮಠ ಕಟ್ಟಲು ಆಶೀರ್ವದಿಸಬೇಕೆಂದು ಪ್ರಾರ್ಥಿಸಿದರು. ಶ್ರಿಗಳವರು ಊರಿನ ಹತ್ತು ಸಮಸ್ತರೊಡನೆ ವಿಚಾರ ವಿನಿಮಯ ಮಾಡಿ ಊರಜನರ ಸಹಾಯದಿಂದ ಮಂಕಿಯಲ್ಲಿ ದೇವಾಸ್ಥಾನ ಕಟ್ಟಲು ಶ್ರೀಶಕೆ ೧೮೨೩ ನೇ ಮಾಘ ವದ್ಯ ೩೦ಗೆ (೧೯/೦೨/೧೯೦೧) ಆಜ್ಞಾರಾಯಸ ನೀಡಿದರು. ಶ್ರೀಗಳಿಂದ ಆಜ್ಞೆಪಡೆದು ಭಕ್ತರಿಂದ ಯಥಾಶಕ್ತಿ ದ್ರವ್ಯಸಂಗ್ರಹಿಸಿ ಶ್ರೀಶಕೆ ೧೮೨೬ ನೇ ವೈಶಾಖ ವದ್ಯ ದಶಮಿಗೆ (೧೦/೦೫/೧೯೦೪) ಶ್ರೀಮದ್ ಇಂದಿರಾಕಾಂತ ತೀರ್ಥರು ನೀಡಿದ ಶ್ರೀ ಲಕ್ಷ್ಮೀವೆಂಕಟೇಶ ದೇವರ ಪಂಚಲೋಹದ ವಿಗ್ರವನ್ನು ಸ್ಥಾಪಿಸಿದರು. ಶ್ರೀಮದ್‌ ಇಂದಿರಾಕಾಂತ ತೀರ್ಥರು ನಂತರ ಶ್ರೀಮದ್‌ ಕಮಲಾಕಾಂತ ತೀರ್ಥರು ದೇವರ ಪೂಜಾ ವಿನಿಯೋಗಗಳು ಸಾಂಗವಾಗಿ ನಡೆಯಿಸಲು ಸಂಸ್ಥಾನದಿಂದ ಧನಸಹಾಯವನ್ನು ನೀಡಿದ್ದಾರೆ. ಕಾಲಕ್ರಮೇಣ ದೇವಸ್ಥಾನದ ಪೂಜಾ ವಿನಿಯೋಗಗಳನ್ನು ಅರ್ಚಕರು ನಡೆಯಿಸಿಕೊಂಡು ಬರುತಿದ್ದರು. ಕಾಲಕ್ರಮೇಣ ಊರಜನರು ತಮ್ಮ ವ್ಯಾಪಾರ ನೌಕರಿಗಾಗಿ ಪರಸ್ಥಳಗಳಿಗೆ ತೆರಳಿ ಜನಾಭಾವದಿಂದ ಅರ್ಚಕರಿಗೆ ಪ್ರತಿನಿತ್ಯದ ಪೂಜಾನಿರ್ವಹಣೆಗೂ ತೊಂದರೆಯಾದ್ದರಿಂದ ಶಕೆ ೧೮೬೭ ಪಾರ್ಥೀವ ಸಂವತ್ಸರ ಮಾಘ ಶುಕ್ಲ ದಶಮಿ (೧೧/೦೨/೧೯೪೬) ಸೋಮವಾರದಂದು ಶ್ರೀದೇವಸ್ಥಾನದ ಅರ್ಚಕ ಮನೆತನದವರು ಯಾವತ್ತೂ ಹಕ್ಕು ಸಹಿತ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನವನ್ನು ಶ್ರೀ ದ್ವಾರಕಾನಾಥ ತೀರ್ಥ ಸ್ವಾಮಿಜಿಯವರಿಗೆ ವಹಿಸಿಕೊಟ್ಟರು. ಅಂದಿನಿಂದ ಈ ದೇವಸ್ಥಾನವು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶಾಖಾ ಮಠವಾಯಿತು. ನಂತರದ ದಿನಗಳಲ್ಲಿ ಜನವಸತಿ ವಿಸ್ತಾರಗೊಂಡು ಮಠದಲ್ಲಿ ಶ್ರೀಗಳವರ ಆಗಮನದಿಂದ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತ ಶ್ರೀಗಳವರ ವಾಸ್ತವ್ಯಕ್ಕೆ ಮತ್ತು ಊರಜನರ ಧಾರ್ಮಿಕ ಕಾರ್ಯಕ್ರಮಗಳಿಗೆ ಇರುವ ಸ್ಥಳ ಸಾಕಾಗದೆ ನೂತನ ಸ್ಥಳ ಸಂಪಾದಿಸಿ ವಿಸ್ಥಾರಿತ ವೈಭವಯುಕ್ತ ಕಟ್ಟಡವನ್ನು ಕಟ್ಟಲು ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದಂಗಳವರಲ್ಲಿ ವಿಜ್ಞಾಪಿಸಿ ಅವರ ಆಜ್ಞಾನುಸಾರ ೧೭ ಜನರ ಸದಸ್ಯರ ಸಮಿತಿಯು ಶ್ರೀಗಳವರ ಮಾರ್ಗದರ್ಶನದಲ್ಲಿ ೨ ವರ್ಷಗಳಲ್ಲಿ ೨೧ ಗುಂಟೆ ಸ್ಥಳದಲ್ಲಿ ೨೪/೦೫/೧೯೮೧ ರಂದು ಶ್ರೀಗಳವರ ಶುಭಹಸ್ತದಿಂದ ಶಿಲಾನ್ಯಾಸವನ್ನು ಪೂರೈಸಿ ಕಟ್ಟಡವನ್ನು ಕಟ್ಟಿದರು. ನೂತನ ವಾಸ್ತುವನ್ನು ಶ್ರೀಶಕೆ ೧೯೦೫ ನೇ ವೈಶಾಖ ವದ್ಯ ಷಷ್ಠಿಯಂದು (ದಿನಾಂಕ ೦೧/೦೬/೧೯೮೩) ಶ್ರೀ ವಿದ್ಯಾಧಿರಾಜ ಶ್ರೀಪಾದಂಗಳವರ ಅಮೃತಹಸ್ತದಿಂದ ನೂತನ ಶಿಲಾಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಿದರು. ನಂತರ ಶ್ರೀಗಳವರ ಚಾತುರ್ಮಾಸಕ್ಕಾಗಿ ೭ ಕೊಠಡಿಗಳು, ಪಾಕಶಾಲೆ, ಅಗ್ರಶಾಲೆ, ಶ್ರೀಗಳವರ ವಾಸ್ತವ್ಯದಕೋಣೆ, ದೇವರ ಕೋಣೆ, ಒಂದನೇ ಮಹಡಿಯಲ್ಲಿ ಸಭಾಗ್ರಹಗಳಿಂದ ಕೂಡಿದ ನೂತನ ವಾಸ್ತುವಿನಲ್ಲಿ ಶ್ರೀ ಶಕೆ ೧೯೯೮ರಲ್ಲಿ ಶ್ರೀಗಳವರ ಚಾತುರ್ಮಾಸವು ವೈಭವದಿಂದ ಸಂಪನ್ನಗೊಂಡಿತು.