ಶ್ರೀ ಮುರಳಿಧರ ಮಠ ಕಾರವಾರ
ಸಂಸ್ಥಾಪಕರು : ಶ್ರೀ ಇಂದಿರಾಕಾಂತ ತೀರ್ಥ (೨೦)
ಸ್ಥಾಪನಾ ವರ್ಷ : ಶ್ರೀ ಶಕೆ ೧೮೪೫ ರುಧಿರೋದ್ಘಾರಿ ಸಂವತ್ಸರ ವೈಶಾಖ ಪೂರ್ಣಿಮಾ (ಕ್ರಿ.ಶ. ೧೯೨೩)
ದೇವಪ್ರತಿಮಾ : ಶ್ರೀ ಮುರಳೀಧರ ಕೃಷ್ಣ (ಶಿಲಾವಿಗ್ರಹ)
ಜೀರ್ಣೋದ್ಧಾರ : ೧೯೭೮ ರಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರಿಂದ ಅಷ್ಟಬಂಧ (೫೫ ನೇ ವರ್ಧಂತಿ)
ವಿಳಾಸ : ಶ್ರೀ ಮುರಳೀಧರ ಮಠ, ಪೊ: ಕಾರವಾರ (ಉ.ಕ.) ೫೮೧ ೩೦೧, ದೂರವಾಣಿ: ೦೮೩೮೨ ೨೨೦೫೮೦
ಭೂಪ್ರದೇಶ : ೧೪೦೦ ಚ.ಮೀ.
ವಾಸ್ತು ವಿವರ : ಗರ್ಭಗ್ರಹ, ಅಗ್ರಶಾಲಾ, ಅರ್ಚಕ ನಿವಾಸ.
ಸಭಾಭವನ : ಶ್ರೀ ಇಂದಿರಾಕಾಂತ ಸಭಾಗ್ರಹ.
೧೦-೦೭-೨೦೦೧ ರಂದು ಶ್ರೀ ವಿದ್ಯಾಧಿರಾಜ ತೀರ್ಥರ ಶುಭಹಸ್ತದಿಂದ ಉದ್ಘಾಟನೆ.
ಪಂಚಪರ್ವ ಉತ್ಸವ : ೧. ವರ್ಧಂತಿ ಉತ್ಸವ ವೈಶಾಖ ಪೂರ್ಣಿಮಾ, ಪುಷ್ಪ ಪೂಜೆ : ಶ್ರಾವಣ, ಅನಂತ ಚತುರ್ದಶಿ
ವನಭೋಜನ, ಕಾರ್ತಿಕ ಶುಕ್ಲ ಚತುರ್ದಶಿ
ಗಣಿತದ ಇತಿಹಾಸ
ಈ ಪೂರ್ವದಲ್ಲಿ ಪರ್ತಗಾಳಿಯಿಂದ ಉತ್ತರ ಕನ್ನಡ ಜಿಲ್ಹೆಗೆ ಸಂಚರಿಸುವಾಗ ಕಾರವಾರದ ಮೂಲಕ ಸಾಗಬೇಕಾಗಿತ್ತು. ಶ್ರೀಮದ್ ಇಂದಿರಾಕಾಂತ ತೀರ್ಥರ ಕಾಲದಲ್ಲಿ ಶ್ರೀಗಳವರು ರಾಮಚಂದ್ರ ಸುಬ್ರಾಯ ಹಳದಿಪುರಕರ ಇವರ ಮನೆಯಲ್ಲಿ ತಂಗುತ್ತಿದ್ದರು. ಅವರ ಮರಣಾನಂತರ ಅವರ ಪತ್ನಿ ತಮ್ಮ ಕಾರವಾರದ ನಿವೇಶನ ಮತ್ತು ಹಳದಿಪುರದಲ್ಲಿರುವ ತಮ್ಮ ತೆಂಗಿನ ಮರವಿರುವ ಜಮಿನನ್ನು ಪರ್ತಗಾಳಿ ಮಠಕ್ಕೆ ದಾನವಾಗಿ ನೀಡಿದರು. ಕಾರವಾರದ ಈ ನೀವೇಶನದಲ್ಲಿ ಶ್ರೀ ಮುರಳಿಧರ ಶಿಲಾವಿಗ್ರವನ್ನು ವೈಶಾಖ ಪೂರ್ಣಿಮೆಯಂದು ಸ್ಥಾಪಿಸಿ ಮಠವನ್ನು ಕಟ್ಟಲಾಗಿದೆ.