Taking too long? Close loading screen.

श्रीसंस्थान गोकर्ण पर्तगाळी जीवोत्तम मठ

Shree Samsthan Gokarn Partagali Jeevottam Math

33 Bharavati Kannada

ಶ್ರೀ ವಿದ್ಯಾಧಿರಾಜ ಸಭಾಗ್ರಹ ಭದ್ರಾವತಿ

ಸಂಸ್ಥಾಪಕ : ಶ್ರೀ ವಿದ್ಯಾಧಿರಾಜ ತೀರ್ಥ (೨೩)
ಶಿಲಾನ್ಯಾಸ : ಶಕೆ ೧೯೨೩ ವೃಷ ಸಂ, ಮಾಘ ಬಹುಳ ನವಮಿ (೦೭-೦೩-೨೦೦೨)
ಉದ್ಘಾಟನೆ : ಶಕೆ ೧೯೨೫ ಸುಭಾನು ಸಂ. ಕಾರ್ತಿಕ ಬಹುಳ ಪಂಚಮಿ (೧೪-೧೧-೨೦೦೩)
ವಿಳಾಸ : ಶ್ರೀ ವಿದ್ಯಾಧಿರಾಜ ಸಭಾಗೃಹ, ಹೆಬ್ಬಂಡೆ ರಸ್ತೆ, ITI ಹತ್ತಿರ, BH ರಸ್ತೆ, ಭದ್ರಾವತಿ ೫೭೭ ೩೦೧
ಜಿಲ್ಲೆ. ಶಿವಮೊಗ್ಗ, ದೂರವಾಣಿ: ೦೮೨೮೨-೨೬೬೯೧೩
ಒಟ್ಟು ವಿಸ್ತೀರ್ಣ : ಚದರ ಮೀಟರ್
ನಿರ್ಮಿಸಿದ ಪ್ರದೇಶ : ಚದರ ಮೀಟರ್
ಕಟ್ಟಡದ ವಿವರಗಳು : ಸಭಾಭವನ, ಪಾಕಶಾಲೆ, ಭೋಜನ ಶಾಲೆ, ಪಾರ್ಕಿಂಗ್‌ಗೆ ಮುಕ್ತ ಸ್ಥಳ.
ಸಭಾಭವನ : ಶ್ರೀ ವಿದ್ಯಾಧಿರಾಜ ಸಭಾಗೃಹ

ಭದ್ರಾವತಿಯು ಶಿವಮೊಗ್ಗ ಸಮೀಪದ ಕೈಗಾರಿಕಾ ಪ್ರದೇಶ ಎಂದು ಕರೆಯಲಾಗುತ್ತದೆ. ಸುಮಾರು ಐವತ್ತು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳು ವಿವಿಧ ವ್ಯಾವಸಾಯಿಕ ಉದ್ದೇಶಗಳಿಗಾಗಿ ಬಂದು ಇಲ್ಲಿ ನೆಲೆಸಿದವು. ಈ ಕುಟುಂಬ ನಾನಾ ಕಾರಣಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರೂ ಸರಿಯಾದ ಸ್ಥಳಾವಕಾಶದ ಕೊರತೆಯಿಂದ ಅವರಿಗೆ ಒಂದುಗೂಡಲು ಸಾಧ್ಯವಾಗಿರಲಿಲ್ಲ. ಸಾಂಸ್ಕೃತಿಕ, ಸಾಮಾಜಿಕ ಮತ್ತು ಇತರ ಕಾರ್ಯಕ್ರಮಗಳಿಗೆ ಒಟ್ಟಿಗೆ ಸೇರಲು ಅವರಿಗೆ ಪ್ರತ್ಯೇಕ ಸ್ಥಳದ ಅಗತ್ಯವಿತ್ತು. ಸ್ಥಳಾವಕಾಶವಿದ್ದರೂ ವಾಸ್ತುಶೈಲಿ ಸಾಕಾರಗೊಳ್ಳಲು ಸಾಧ್ಯವಾಗಿರಲಿಲ್ಲ.

ಇಂತಹ ಸಮಯದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಭದ್ರಾವತಿಯ ಆಗಮನವೂ ಸ್ಮರಣೀಯವಾಯಿತು. ಶೀಗಳವರ ಆಗಮನವು ವಿದ್ಯಾಧಿರಾಜ ಸಭಾಗ್ರಹದ ನಿರ್ಮಾಣಕ್ಕೆ ನಾಂದಿಯಾಯಿತು. ಈ ಭಾಗದ ಮಠಾನುಯಾಯಿಗಳು ಸಾಮಾಜಿಕ ಕಾರ್ಯಕ್ಕೆ ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ ಎಲ್ಲರಿಗೂ ಸೂಕ್ತ ಮಾರ್ಗದರ್ಶನ ನೀಡಿದ ಶ್ರೀಗಳು ಅವರ ಸಲಹೆ ಮೇರೆಗೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಯಿತು. ಅದರಂತೆ ದಿನಾಂಕ ೦೭-೦೩-೨೦೦೨ ರಂದು ಶ್ರೀಗಳಿಂದ ಈ ವಾಸ್ತುವಿನ ಶಂಕುಸ್ಥಾಪನೆ ನೆರವೇರಿಸಲಾಯಿತು ಮತ್ತು ನಂತರ ಸದರೀ ಸ್ಥಳದ ಪಕ್ಕದ ನಿವೇಶನವನ್ನು ಈ ಕಾಮಗಾರಿಗೆ ಖರೀದಿಸಲಾಯಿತು. ಯೋಜನೆಯ ನೀಲನಕ್ಷೆ ಮತ್ತು ಅವಶ್ಯಕ ಮಂಜೂರಾತಿ ಮುಂತಾದ ಇತರ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ನಿಜವಾದ ನಿರ್ಮಾಣ ಕಾರ್ಯವು ಪ್ರಾರಂಭವಾಯಿತು ಮತ್ತು ಕೇವಲ ೧೫ ತಿಂಗಳಲ್ಲಿ ನವ ನಿರ್ಮಾಣದ ಸುಂದರ ಕಟ್ಟಡವು ಪೂರ್ಣಗೊಂಡಿತು. ಪೂಜ್ಯ ಸ್ವಾಮೀಜಿಯವರ ಶುಭಹಸ್ತದಿಂದ ೧೪-೧೧-೨೦೦೩ ರಂದು ವಿದ್ಯಾಧಿರಾಜ ಭವನವನ್ನು ಉದ್ಘಾಟಿಸಲಾಯಿತು.